ಕಾಸರಗೋಡು: ಜಿಲ್ಲೆಯ ಎಲ್ಲ ಸರಕಾರಿ ಸಿಬ್ಬಂದಿ ಕಚೇರಿಗಳಿಗೆ ಹಾಜರಾಗಬೇಕು. ಆಯಾ ಕಚೇರಿಗಳ ಸ್ಥಿತಿ-ಗತಿ ತಪಾಸಣೆಗೆ ವಿಶೇಷ ದಳ ನಿಯುಕ್ತಿ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೋನಾದೊಂದಿಗೇ ಬದುಕುವುದು ಇಂದಿನ ನಮ್ಮ ಪರಿಸ್ಥಿತಿ. ರಾಜ್ಯ ಸರಕಾರ ಪ್ರಕಟಿಸಿರುವ ಆದೇಶ ಪ್ರಕಾರ ಶೇ 100 ಹಾಜರಾತಿ ಸರಕಾರಿ ಕಚೇರಿಗಳಲ್ಲಿ ಖಚಿತಪಡಿಸಬೇಕು. ಕೋವಿಡ್ ಕಾಲಾವಧಿಯಲ್ಲಿ ಇರುವ ಮಿತಿಗಳ ನಡುವೆಯೂ ಗರಿಷ್ಠ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಕರ್ತವ್ಯ ನಿರ್ವಹಣೆ ನಡೆಸುತ್ತಿರುವ ಸಿಬ್ಬಂದಿ ಅಭಿನಂದನಾರ್ಹರು ಎಂದವರು ನುಡಿದರು.
ವಿದೇಶಗಳಿಂದ, ಇತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಮಂದಿ ಕಡ್ಡಾಯವಾಗಿ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಬೇಕು. 7 ದಿನಗಳ ಕ್ವಾರಂಟೈನ್ ನಂತರ ಕೋವಿಡ್ ತಪಾಸಣೆ ನಡೆಸಿ ನೆಗೆಟಿವ್ ಆದಲ್ಲಿ ಮತತ್ತೆ ಕ್ವಾರೆಂಟೈನ್ ಕಡ್ಡಾಯವಲ್ಲ. ತಪಾಸಣೆ ನಡೆಸದೇ ಇದ್ದವರು 14 ದಿನಗಳ ಕ್ವಾರೆಂಟೈನ್ ಪಾಲಿಸಬೇಕು. ಸ್ಪಷ್ಯಾಲಿಟಿ ಸೌಲಭ್ಯಗಳೊಂದಿಗೆ ಟಾಟಾ ಆಸ್ಪತ್ರೆ ಚಟುವಟಿಕೆ ನಡೆಸುವ ಸಂಬಂಧ ಅಗತ್ಯದ ತತ್ಸಂಬಂಧಿ ಸೌಲಭ್ಯಗಳ ಕುರಿತು ಪ್ರಪೆÇೀಸಲ್ ಸಲ್ಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಅಗತ್ಯದ ಉಪಕರಣಗಳನ್ನು ಲಭ್ಯವಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈಗಿರುವ ವೈದ್ಯರ ಮೇಲೆ ಕರ್ತವ್ಯದ ಅತಿ ಭಾರ ಹೇರದೇ, ಕ್ರಮಬದ್ಧವಾಗಿ ಕರ್ತವ್ಯವನ್ನು ಹಂಚುವ ಪ್ರಕ್ರಿಯೆ ನಡೆಸುವಂತೆ, ಸ್ಪಷ್ಯಲಿಸ್ಟ್ ವೈದ್ಯರ ಹುದ್ದೆಗಳಲ್ಲಿ ನೇನಕಾತಿ ನಡೆಸುವಂತೆ ಕ್ರಮ ಕೈಗೊಳ್ಳುವಂತೆ ಸಭೆ ಆದೇಶ ನೀಡಿದೆ.
ಸಂಪರ್ಕ ಮೂಲಕ ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮತ್ತು ನಗರಗಳಲ್ಲಿ ಜನಜಾಗೃತಿ ಚಟುವಟಿಕೆಗಳನ್ನು ಚುರುಕುಗೊಳಿಸಲು, ವಿನೂತನವಾಗಿ ಪ್ರತಿರೋಧ ಜಾಗೃತಿ ಚಟುವಟಿಕೆ ನಡೆಸುತ್ತಿರುವ ಮಾಸ್ಟರ್ ಯೋಜನೆಯ ಶಿಕ್ಷಕರಿಗೆ ಪೂರ್ಣ ಸಹಕಾರ ನೀಡುವಂತೆ ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಮತ್ತು ನಗರಸಭೆ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಕಾಸರಗೋಡು ಮತ್ತು ಮಂಜೇಶ್ವರ ವಲಯಗಳಲ್ಲಿ ಹೆಚ್ಚುವರಿ ಜನಜಾಗೃತಿ ನಡೆಸುವಂತೆ ಸಭೆ ನಿರ್ಧರಿಸಿದೆ.
ಕಾಞಂಗಾಡ್ ಮಾರುಕಟ್ಟೆ ದಿನಬಿಟ್ಟು ದಿನ ಶೇ 50 ಮಂದಿ ಮಾತ್ರ ಪ್ರವೇಶ ನಡೆಸುವಂತೆ ತೆರೆಯಲಾಗುವುದು. ವ್ಯಾಪಾರಿಗಳಲ್ಲಿ ಸೇ 50 ಮಂದಿ ಮಾತ್ರ ಮಾರುಕಟ್ಟೆಯೊಳಗೆ ಪ್ರವೇಶಿಬಹುದಾಗಿದೆ. ದಿನಕ್ಕೆ ಶೇ 50ಕ್ಕಿಂತ ಅಧಿಕ ಗ್ರಾಹಕರೂ ಪ್ರವೇಶಿಸುವಂತಿಲ್ಲ. ಕಟ್ಟುನಿಟ್ಟುಗಳು ಕಡ್ಡಾಯವಾಗಿ ಪಾಲನೆ ನಡೆಸುತ್ತಿರುವ ಖಚಿತತೆ ಮೂಡಿಸುವ ಹೊಣೆ ನಗರಸಭೆಯ ಕಾರ್ಯದರ್ಶಿಗೆ ವಹಿಸಲಾಗಿದೆ.
ಜಿಲ್ಲೆಯ ಪಡಿತರ ಅಂಗಡಿಗಳ ಸಮಯಾವಧಿಯನ್ನು ಅ.1ರಿಂದ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರೆಗೆ, ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆ ವರೆಗೆ ನಿಗದಿಗೊಳಿಸಲಾಗಿದೆ.
ಜ್ಯುವೆಲ್ಲರಿಗಳಲ್ಲಿ ಯಾವ ಕಾರಣಕ್ಕೂ ಎ.ಸಿ. ಬಳಸಕೂಡದು. ಸಂಸ್ಥೆಗಳ 100 ಚದರ ಅಡಿ ವಿಸ್ತೀರ್ಣದಲ್ಲಿ ಸಿಬ್ಬಂದಿ, ಗ್ರಾಹಕರ ಸಹಿತ ಗರಿಷ್ಠ 15 ಮಂದಿ ಏಕಕಾಲಕ್ಕೆ ಪ್ರವೇಸಿಸಬಹುದು. ಸಂಸ್ಥೆಯ ಮಾಲೀಕರು ಮತ್ತು ಸಿಬ್ಬಂದಿ ಮಾಸ್ಕ್, ಗ್ಲೌಸ್ ಕಡ್ಡಾಯವಾಗಿ ಬಳಸಬೇಕು. ಜ್ಯುವೆಲ್ಲರಿಗಳಲ್ಲಿ ಚಿನ್ನಾಭರಣ ಧರಿಸಿ ಟ್ರಯಲ್ ನೋಡುವ ಕ್ರಮ ಸಲ್ಲದು, ಇದರಿಂದ ರೋಗ ಹರಡುವಿಕೆ ಅಧಿಕವಾಗುವ ಭೀತಿಯಿದೆ. ಈ ನಿಟ್ಟಿನಲ್ಲಿ ರೋಗಾಣುನಾಶ ನಡೆಸಬೇಕು. ಅಲ್ಟ್ರಾ ವಯಲೆಟ್ ತಂತ್ರಜ್ಞಾನ ಬಳಸಬಹುದು. ಈ ಎಲ್ಲ ಆದೇಶ, ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸುವವರ ವಿರುದ್ಧ 14 ದಿನಗಳ ಕಾಲ ಸಂಸ್ಥೆಯ ಮುಚ್ಚುಗಡೆ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿದೆ. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಜ್ಯುವೆಲ್ಲರಿ ಮಾಲೀಕರ ಪ್ರತಿನಿಧಿಗಳು ಒಪ್ಪಿಗೆ ನೀಡಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.