HEALTH TIPS

ಯೂನಿವರ್ಸಿಟಿ ಫೆÇೀರ್ಜರಿ ಆಫ್ ವಿಜಯ್ ಪಿ ನಾಯರ್ ಡಾಕ್ಟರೇಟ್'; ತನಿಖೆ ನಡೆಸಲು ಕೇರಳ ಪೆÇಲೀಸರು

 

        ತಿರುವನಂತಪುರ: ವಿವಾದಾತ್ಮಕ ಯೂಟ್ಯೂಬರ್ ವಿಜಯ್ ಪಿ ನಾಯರ್ ಅವರ ಪ್ರಮಾಣಪತ್ರಗಳ ಬಗ್ಗೆ ಸಾಚಾತನ ಪರಿಶೀಲಿಸಲು  ಪೆÇಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಅವರ ಡಾಕ್ಟರೇಟ್ ನಕಲಿ ಎಂಬ ಆರೋಪದೊಂದಿಗೆ ಭಾರತೀಯ ಕ್ಲಿನಿಕಲ್ ಸೈಕಾಲಜಿಸ್ಟ್‍ಗಳ ಸಂಘವು ನೀಡಿರುವ ಹೇಳಿಕೆಯ ಆಧಾರಸದಂತೆ  ಪೆÇಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಜಯ್ ಪಿ ನಾಯರ್ ಅವರ 'ವೈದ್ಯಕೀಯ ಪದವಿ' ಬಗ್ಗೆ ತಂಪನೂರ್ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.

                ದೂರು ನೀಡಿದ ವಿವಿಧ ಸಂಸ್ಥೆಗಳು:

     ಮನಶ್ಶಾಸ್ತ್ರಜ್ಞರ ಸಂಘದ ಪ್ರಕಾರ, ಯೂಟ್ಯೂಬ್‍ನಲ್ಲಿ ಸ್ತ್ರೀವಾದಿ ವಿರೋಧಿ ಅಶ್ಲೀಲ ವಿಡಿಯೋಗಳನ್ನು ಪೆÇೀಸ್ಟ್ ಮಾಡಿದ ವಿಜಯ್ ಪಿ ನಾಯರ್ ಅವರು ನಕಲಿ ಡಾಕ್ಟರೇಟ್ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೊಂದು ವರದಿಯಂತೆ ವಿಜಯ್ ಪಿ ನಾಯರ್ ಅವರು ಸಂಘದಲ್ಲಿ ಯಾವುದೇ ನೋಂದಣಿ ಹೊಂದಿಲ್ಲ ಮತ್ತು ಅವರ ವಿರುದ್ಧ ಭಾರತದ ಪುನರ್ವಸತಿ ಮಂಡಳಿಗೆ ದೂರು ನೀಡಲಿದ್ದಾರೆ. ಕ್ಲಿನಿಕಲ್ ಸೈಕಾಲಜಿಸ್ಟ್ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಚಾಪ್ಟರ್ ಅಧ್ಯಕ್ಷ ಸತೀಶ್ ನಾಯರ್  ಹೇಳಿರುವರು.  

            ಯೂಟ್ಯೂಬ್‍ಗೆ ಪೆÇಲೀಸ್ ಪತ್ರ:

    ಮಾನಹಾನಿಕರ ಯೂಟ್ಯೂಬ್ ವೀಡಿಯೊಗಳನ್ನು ಅನುಸರಿಸಿ ಡಬ್ಬಿಂಗ್ ಕಲಾವಿದರಾದ ಭಾಗ್ಯಲಕ್ಷ್ಮಿ ಮತ್ತು ಇತರರು ಕಿರುಕುಳಕ್ಕೊಳಗಾದ ವಿವಾದಾತ್ಮಕ ವೀಡಿಯೊಗಳು ಯೂಟ್ಯೂಬ್ ನಲ್ಲಿ ಮುಂದುವರೆದಿದೆ. ವರದಿಯ ಪ್ರಕಾರ ಈ ವೀಡಿಯೊಗಳನ್ನು ತೆಗೆದುಹಾಕುವಂತೆ ಕೇರಳ ಪೆÇಲೀಸರು ಯೂಟ್ಯೂಬ್‍ಗೆ ಪತ್ರ ಕಳುಹಿಸಿದ್ದಾರೆ.

           ಖೋಟಾ ಪ್ರಮಾಣಪತ್ರ:

     ವಿಜಯ್ ಪಿ ನಾಯರ್ ಅವರ ಪ್ರಮಾಣಪತ್ರಗಳ ಸತ್ಯಾಸತ್ಯತೆಯ ಬಗ್ಗೆ ತನಿಖಾ ಸಂಸ್ಥೆಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮಾಧ್ಯಮ ವರದಿಯ ಪ್ರಕಾರ ಅವರ ಡಾಕ್ಟರೇಟ್ ನಕಲಿ ಎಂದು ಹೇಳಿಕೊಂಡಿದೆ. ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯವಾದ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಆದರೆ ಚೆನ್ನೈ ಅಥವಾ ಸುತ್ತಮುತ್ತ ಅಂತಹ ವಿಶ್ವವಿದ್ಯಾಲಯಗಳಿಲ್ಲ ಎನ್ನಲಾಗಿದೆ.

            ಭಾಗ್ಯಲಕ್ಷ್ಮಿ ಅವರ ದೂರಿನಲ್ಲಿ ಪ್ರಕರಣ:

     ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಮತ್ತು ಸಂಗಡಿಗರಾದ  ದಿಯಾ ಸನಾ ಮತ್ತು ಶ್ರೀಲಕ್ಷ್ಮಿ ಅರಕ್ಕಲ್ ಅವರು ವಿಜಯ್ ಪಿ ನಾಯರ್ ಅವರನ್ನು ತಮ್ಮ ಲಾಡ್ಜ್ ಕೋಣೆಯಲ್ಲಿ ಹಲ್ಲೆ ಮಾಡಿದ್ದರು. ಕಿರುಕುಳ ಮತ್ತು ವೀಡಿಯೋ ಹಂಚಿದ್ದಕ್ಕೆ ಕ್ಷಮೆಯಾಚಿಸುತ್ತಿದ್ದೇನೆ ಎಂದು ವಿಜಯ್ ಪಿ ನಾಯರ್ ಮಾಧ್ಯಮಗಳಿಗೆ ತಿಳಿಸಿದ್ದರೂ, ಅವರು ಮಧ್ಯರಾತ್ರಿ ಸುಮಾರಿಗೆ ತಂಪನೂರ್ ಪೆÇಲೀಸ್ ಠಾಣೆಗೆ ತಲುಪಿ ದೂರು ದಾಖಲಿಸಿದ್ದರು. ಏತನ್ಮಧ್ಯೆ, ಭಾಗಲ್ಯಕ್ಷ್ಮಿ ಸಲ್ಲಿಸಿದ ದೂರಿನಲ್ಲಿ ವಿಜಯ್ ಪಿ ನಾಯರ್ ವಿರುದ್ಧದ ಆರೋಪಗಳು ದುರ್ಬಲವಾಗಿವೆ ಎಂದು ಆರೋಪಿಸಲಾಗಿದೆ. ಭಾಗ್ಯಲಕ್ಷ್ಮಿ ಅವರನ್ನು ಬೆಂಬಲಿಸಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಮಹಿಳಾ ಆಯೋಗ ಮತ್ತು ಕವಯಿತ್ರಿ ಸುಗತಕುಮಾರಿ ಈಗಾಗಲೇ ಹೇಳಿಕೆ ನೀಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries