ತಿರುವನಂತಪುರ: ಸಚಿವ ಕೆ.ಟಿ. ಜಲೀಲ್ ರಾಜೀನಾಮೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ ಬುಗಿಲೆದ್ದಿದೆ. ಯುವ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಿರುವನಂತಪುರ ಸೆಕ್ರಟರಿಯೇಟ್ ಮುಂದೆ ಶುಕ್ರವಾರ ರಾತ್ರಿ ಮೆರವಣಿಗೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದರು. ಈ ಸಂದರ್ಭ ಪೆÇಲೀಸರು ಲಾಠಿ ಚಾರ್ಜ್ ಮಾಡಿದ್ದು ತನ್ನ ಐವರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸಚಿವಾಲಯದ ಮುಂದೆ ಬಿಜೆಪಿ ಕಾರ್ಯಕರ್ತರು ಮತ್ತು ಪೆÇಲೀಸರ ನಡುವೆ ಹ್ಯೊಕೈ ನಡೆಯಿತು. ಪ್ರತಿಭಟನೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವ ವಹಿಸಿದ್ದರು. ಬ್ಯಾರಿಕೇಡ್ ಅನ್ನು ತಳ್ಳಲು ಪ್ರಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೂ ಪೆÇಲೀಸರು ನೀರಿನ ಫಿರಂಗಿಯನ್ನು ಹಾರಿಸಿದರು.
ಸಚಿವಾಲಯದ ಮುಂದೆ ರಸ್ತೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಲಪ್ಪುರಂ ಮತ್ತು ಕೊಚ್ಚಿಯಲ್ಲಿ ಯುಡಿಎಫ್ ಯುವ ಸಂಘಟನೆಗಳು ಸಚಿವರ ಪ್ರತಿಕೃತಿ ರಚಿಸಿ ಶವಪೆಟ್ಟಿಗೆಗಳೊಂದಿಗೆ ಬೆಂಕಿ ಹಚ್ಚಿದರು. ಪಾಲಕ್ಕಾಡ್ ಸುಲ್ತಾನಪೇಟದಲ್ಲಿ ಯುಡಿಎಫ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಕೋಝಿಕ್ಕೋಡ್ ನಲ್ಲಿ ಯುವ ಮೋರ್ಚಾ ಕೂಡ ಪ್ರತಿಭಟನೆ ನಡೆಸಿತು. ಯುವ ಮೋರ್ಚಾ ಕಾರ್ಯಕರ್ತರು ಕೋಝಿಕ್ಕೋಡ್ ಆಯುಕ್ತರ ಕಚೇರಿಯ ಮುಂದೆ ಸಚಿವರ ಶವಪೆಟ್ಟಿಗೆ ಪ್ರತಿಕೃತಿಗೆ ಬೆಂಕಿ ಹಚ್ಚಿದರು.