ಮಂಜೇಶ್ವರ : 'ಕುಳೂರು ಕ್ರಿಯೇಷನ್' ಬ್ಯಾನರಡಿಯಲ್ಲಿ ಕಿರುಚಿತ್ರವೊಂದು ತಯಾರಾಗಿದ್ದು ಇದರ ಪೆÇೀಸ್ಟರ್ ಬಿಡುಗಡೆ ಬುಧವಾರ ನಡೆಯಿತು.
'ಕಂಟಕ' ಎಂಬ ಈ ಕಿರುಚಿತ್ರಕ್ಕೆ ಮೋಹನ್ ಶೆಟ್ಟಿ ಮಜ್ಜಾರ್ ಬಂಡವಾಳ ಹಾಕುತ್ತಿದ್ದು ಇದರ ಚಿತ್ರೀಕರಣ ಕುಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಿದೆ. ಈ ಕಿರುಚಿತ್ರಕ್ಕೆ ಜಯರಾಜ್ ಶೆಟ್ಟಿ ಚಾರ್ಲ ಕಥೆ ರಚಿಸಿದ್ದು, ಸಂಭಾಷಣೆ ಹಾಗೂ ನಿರ್ದೇಶನವನ್ನು ಪುಷ್ಪರಾಜ್ ಶೆಟ್ಟಿ ಕುಳೂರು, ಚಿತ್ರಕಥೆ ಹಾಗೂ ಅಸೋಶಿಯೇಟ್ ನಿರ್ದೇಶಕರಾಗಿ ಶಶಿಕುಮಾರ್ ಕುಳೂರು, ಪೆÇ್ರಡಕ್ಷನ್ ಮೆನೇಜರ್ ಆಗಿ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯ ನಿರ್ವಹಿಸಿರುವರು. ಬಾತು ಕುಲಾಲ್'ರವರ ಕ್ಯಾಮೆರಾ ಕೈಚಳಕ ಹಾಗೂ ಎಡಿಟಿಂಗ್, ನಾಗಾರ್ಜುನ್ ಮಂಗಲ್ಪಾಡಿಯವರ ಡಬ್ಬಿಂಗ್ ನಲ್ಲಿ ಈ ಕಿರುಚಿತ್ರ ಮೂಡಿಬರಲಿದೆ.
ಈ ಕಿರುಚಿತ್ರದ ಪೆÇೀಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ ರವರು ಪೆÇೀಸ್ಟರನ್ನು ಕುಳೂರು ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮರವರಿಗೆ ಹಸ್ತಾಂತರಿಸಿದರು. ಬಳಿಕ ಪೆÇೀಸ್ಟರನ್ನು ಬಿಡುಗಡೆ ಮಾಡಿದ ಸತ್ಯನಾರಾಯಣ ಶರ್ಮರವರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಪುಷ್ಪರಾಜ್ ಕುಳೂರು ಉಪಸ್ಥಿತರಿದ್ದರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಶಿಕುಮಾರ್ ಕುಳೂರು ವಂದಿಸಿದರು. ಈ ಕಿರುಚಿತ್ರ ಅತೀ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದ್ದು, 'ಕುಳೂರು ಕ್ರಿಯೇಷನ್'ನ ಚೊಚ್ಚಲ ಕಾಣಿಕೆಯಾಗಿದ್ದು, ಎಲ್ಲರ ಸಹಕಾರವನ್ನು ಚಿತ್ರ ತಂಡ ವಿನಂತಿಸಿದೆ.