ಮುಳ್ಳೇರಿಯ: ಬೇಕಲ್ ಫೆÇೀರ್ಟ್ ಲಯನ್ಸ್ ಕ್ಲಬ್ ವತಿಯಿಂದ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್‍ನಲ್ಲಿ ಕಚೇರಿಗಳಿಗೆ ಲೇ ಔಟ್ ಬೋರ್ಡ್ ನಿರ್ಮಿಸಿ ಕೊಡುಗೆಯಾಗಿ ನೀಡಿದೆ. ಮಿನಿ ಸಿವಿಲ್ ಸ್ಟೇಷನ್ ಕಾಞಂಗಾಡ್ ನಗರದ ಅತ್ಯಂತ ಜನನಿಬಿಡ ಸರ್ಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ವಿವಿಧ ಉದ್ದೇಶಗಳಿಗಾಗಿ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ಮಿನಿ ಸಿವಿಲ್ ಸ್ಟೇಷನ್ ಸರ್ಕಾರದ ಹಲವಾರು ವಿಭಿನ್ನ ಕಚೇರಿಗಳನ್ನು ಹೊಂದಿದೆ. ಅನೇಕ ಕಚೇರಿಗಳ ಸುಲಭ ಪತ್ತೆಗೆ ಸಾರ್ವಜನಿಕರಿಗೆ ನಿರ್ಮಿಸಲಾದ ಲೇ ಔಟ್ ಬೋರ್ಡ್ ನೆರವಾಗಲಿದೆ.
ಬೇಕಲ್ ಫೆÇೀರ್ಟ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ನಾಸರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಲೇ ಔಟ್ ಬೋರ್ಡ್ ನ್ನು ಅನಾವರಣಗೊಳಿಸಿದರು. ತಹಶೀಲ್ದಾರ್ ಮಣಿರಾಜ್, ಲಯನ್ಸ್ ವಲಯ ಅಧ್ಯಕ್ಷ ಅನ್ವರ್ ಹಸನ್, ಸಿಎಂ ನೌಶಾದ್, ಹೆರೂನ್ ಚಿತ್ತಾರಿ, ಬಶೀರ್ ಕುಶಾಲ್, ಸಿಪಿ ಫೈಸಲ್, ಮುಹಾಜಿರ್ ಕೆಎಸ್, ಟ್ವಾಯ್ಬ್ ಮಣಿಕೋತ್ ಮತ್ತು ಪ್ರದೀಪ್ ಎಕ್ಸೈಡ್ ಮಾತನಾಡಿದರು. ಕಾರ್ಯದರ್ಶಿ ಶೌಕತಲಿ ಸ್ವಾಗತಿಸಿ, ಗೋವಿಂದನ್ ನಂಬೂದಿರಿ ವಂದಿಸಿದರು.