HEALTH TIPS

Corona Vaccine ತಯಾರಿಸುವ ಕಂಪನಿ Modi ಸರ್ಕಾರವನ್ನು ಕೇಳಿದ್ದೇನು ಗೊತ್ತಾ?

        ನವದೆಹಲಿ: ಕಳೆದ 9 ತಿಂಗಳಿನಿಂದ ಮುಂದುವರೆದಿರುವ ಕೊರೊನಾವೈರಸ್ (Coronavirus) ಮಹಾಮಾರಿಯ ನಡುವೆಯೇ  ಈ ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿಗೊಳಿಸುವ ಕೆಲಸ ಕೂಡ ಮುಂದುವರೆದಿದೆ.  ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಲಸಿಕೆ ತಯಾರಿಕೆಯ ಸನೀಹಕ್ಕೆ ತಲುಪಿದೆ. ಆದರೆ ಏತನ್ಮಧ್ಯೆ, ಈ ಔಷಧಿ ತಯಾರಿಕ ಕಂಪನಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರಶ್ನೆಯೊಂದನ್ನು ಕೇಳಿದೆ.

     ಕೇಂದ್ರ ಸರ್ಕಾರ 80 ಸಾವಿರ ಕೋಟಿ ರೂ. ವ್ಯವಸ್ಥೆ ಮಾಡಲಿದೆಯೇ?

      ಈ ಕುರಿತು ಸರ್ಕಾರಕ್ಕೆ ಪ್ರಶ್ನೆ ಕೆಲಿರುಅ ಸಿರಾಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಓ ಆದರ್ ಪೂನಾವಾಲಾ, ಕೊರೊನಾ ವೈರಸ್ ವ್ಯಾಕ್ಸಿನ್ ಖರೀದಿ ಹಾಗೂ ಅದರ ವಿತರಣೆಗೆ ಸರ್ಕಾರದ ಬಳಿ 80,000 ಕೋಟಿ ರೂ ವ್ಯವಸ್ಥೆ ಆಗಲಿದೆಯೇ? ಎಂದಿದ್ದಾರೆ.  SII, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಜೊತೆ ಸೇರಿ ಕೊರೊನಾ ವ್ಯಾಕ್ಸಿನ್ ನ ಸಂಭವನೀಯ ಲಸಿಕೆ ಅಭಿವೃದ್ಧಿಗೊಳಿಸುತ್ತಿದೆ.
         ಈ ಕುರಿತು ಟ್ವೀಟ್ ಮಾಡಿರುವ ಪೂನಾವಾಲಾ, " ಭಾರತ ಸರ್ಕಾರದ ಬಳಿ ಮುಂದಿನ ವರ್ಷದ ವೇಳೆಗೆ 80 ಸಾವಿರ ಕೋಟಿ ರೂ. ಗಳು ಇರಲಿವೆಯೇ. ಭಾರತಲ್ಲಿ ಎಲ್ಲರಿಗಾಗಿ ಲಸಿಕೆ ಖರೀದಿಸಲು ಹಾಗೂ ವಿತರಿಸಲು ಈ ಹಣ ಅವಶ್ಯಕತೆ ಇದೆ" ಎಂದಿದ್ದಾರೆ.

         ತಮ್ಮ ಈ ಟ್ವೀಟ್ ಅನ್ನು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯವನ್ನು ಕೂಡ ಟ್ಯಾಗ್ ಮಾಡಿದ್ದಾರೆ. ಮುಂದೆ ಈ ಸಮಸ್ಯೆ ಎದುರಾಗಲಿದ್ದು, ಇದನ್ನು ನಾವು ಸಮರ್ಥವಾಗಿ ಎದುರಿಸಬೇಕಾಗಲಿದೆ.

    " ಭಾರತದ ಹಾಗೂ ವಿದೇಶಗಳಲ್ಲಿನ ವ್ಯಾಕ್ಸಿನ್ ನಿರ್ಮಾಪಕರು ಖರೀದಿ ಹಾಗೂ ವಿತರಣೆಯ ವಿಷಯದಲ್ಲಿ ದೇಶದ ಅವಶ್ಯಕತೆಗಳನ್ನೂ ಪೂರೈಸುವ ನಿಟ್ಟಿನಲ್ಲಿ ಯೋಜನೆ ಹಾಗೂ ದಿಕ್ಕುಹೊಂದಿರುವುದು ಅವಶ್ಯಕವಿದೆ" ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries