ನವದೆಹಲಿ : ಕೊರೋನಾ ಕಾಲದಲ್ಲಿ ಸಂಕಷ್ಟಕ್ಕೆ ಈಡಾಗಿದ್ದಂತ ಜಿ ಎಸ್ ಟಿ ಪಾವತಿದಾರರಿಗೆ 2018-19ನೇ ವಾರ್ಷಿಕ ಜಿಎಸ್ಟಿ ಪಾವತಿಗೆ ಇದೇ ಸೆಪ್ಟೆಂಬರ್.30ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ಇನ್ನೇನು ಆ ಕಾಲಾವಕಾಶಕ್ಕೆ 15 ದಿನಗಳು ಮಾತ್ರವೇ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಜಿಎಸ್ಟಿ ಪಾವತಿಗೆ ಮತ್ತೆ ಮೂರು ತಿಂಗಳ ಕಾಲಾವಕಾಶವನ್ನು ಕೇಂದ್ರ ಸರ್ಕಾರ ನೀಡಲಿದೆ ಎನ್ನಲಾಗುತ್ತಿದೆ. ಈ ಮೂಲಕ ಜಿಎಸ್ಟಿ ಪಾವತಿದಾರರಿಗೆ ಸದ್ಯದಲ್ಲಿಯೇ ಗುಡ್ ನ್ಯೂಸ್ ನೀಡಲಿದೆಯಂತೆ.
ಕೊರೋನಾ ಕಾಲದಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, 2018-19ನೇ ಸಾಲಿನ ವಾರ್ಷಿಕ ಜಿಎಸ್ಟಿ ಕಟ್ಟೋದಕ್ಕೆ ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸೆಪ್ಟೆಂಬರ್ 30ರವರಗೆ ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ ನೊಂದಾಯಿತ ತೆರಿಗೆ ದಾರರಿಗೆ ಅವಕಾಶ ನೀಡಲಾಗಿತ್ತು.
ಆದ್ರೇ ಕೊರೋನಾ ಸಂಕಷ್ಟಕ್ಕೆ ಒಳಗಾಗಿರುವಂತ ಅನೇಕ ಜಿಎಸ್ಟಿ ತೆರಿಗೆ ಪಾವತಿದಾರರು ಜಿಎಸ್ಟಿ ಪಾವತಿಗೆ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ 2018-19ನೇ ವಾರ್ಷಿಕ ತೆರಿಗೆ ಪಾವತಿಗೆ ಅವಕಾಶ ಕೇಳಿರುವುದಾಗಿ ಐಸಿಎಐ ತಿಳಿಸಿದೆ. ಈ ಹಿನ್ನಲೆಯಲ್ಲಿ 2018-19ನೇ ಸಾಲಿನ ವಾರ್ಷಿಕ ಜಿಎಸ್ಟಿ ತೆರಿಗೆ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳು ನೀಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಡಿಸೆಂಬರ್ 31ರವರೆಗೂ ಕಾಲಾವಕಾಶ ಸಿಗಲಿದೆ ಎನ್ನಲಾಗುತ್ತಿದೆ. ಈ ಮೂಲಕ ಜಿಎಸ್ಟಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್ ಸದ್ಯದಲ್ಲಿಯೇ ಸಿಗಲಿದೆ.