ಕಾಸರಗೋಡು: ಚೆರುವತ್ತೂರು ಗ್ರಾಮ ಪಂಚಾಯತ್ ನ ಎರಿಂಞÂ ಕ್ಕೀಲ್-ಕಿಳಕ್ಕೇಮುರಿ-ಪತ್ತಿಲ್ ಪೆÇೀರಾಯಿ ರಸ್ತೆಯ ನವೀಕರಣ ಕಾಮಗಾರಿಯ ಉದ್ಘಾಟನೆ ನಡೆಯಿತು.
ಮೀನುಗಾರಿಕೆ ಇಲಾಖೆ ಸಚಿವೆ ಮೆರ್ಸಿಕುಟ್ಟಿಯಮ್ಮ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವೆ ಕಾಸರಗೋಡು ಜಿಲ್ಲೆಯಲ್ಲಿ 220.4 ಲಕ್ಷ ರೂ. ಮೀನುಗಾರಿಕೆ ಇಲಾಖೆ 4 ರಸ್ತೆಗಳ ಅಭಿವೃದ್ಧಿಗೆ ಮೀಸಲಿರಿಸಿದೆ. ಕೋವಿಡ್ ಪ್ರತಿಕೂಲ ಪರಿಸ್ಥಿತಿಯಲ್ಲೂ ಅಭಿವೃದ್ಧಿ ಯೋಜನೆಗಳ ಜಾರಿಯ ಮೂಲಕ ರಾಜ್ಯಸರಕಾರ ಮುನ್ನಡೆಯುತ್ತಿದೆ. ಜನಬೆಂಬಲ ಲಭಿಸಿದ ಮೂಲಕ ನಾಡಿನ ಪ್ರಗತಿ ನಡೆಸಲು ಮೀನುಗಾರಿಕೆ ಇಲಾಖೆಗೆ ಸಾಧ್ಯವಾಗಿದೆ ಎಂದರು.
ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಚೆರುವತ್ತೂರು ಗ್ರಾಮ ಪಂಚಾಯತ್ ನ ಕರಾವಳಿ ವಲಯದ ಪ್ರಧಾನ ರಸ್ತೆಯಾಗಿರುವ ಎರಿಂಞÂ ಕ್ಕೀಲ್-ಕಿಳಕ್ಕೇಮುರಿ-ಪತ್ತಿಲ್ ಪೆÇೀರಾಯಿ ರಸ್ತೆಯ ನವೀಕರಣಕ್ಕಾಗಿ ಮೀನುಗಾರಿಕೆ ಇಲಾಖೆ 92 ಲಕ್ಷ ರೂ. ಮೀಸಲಿರಿಸಿದೆ.
ಉದುಮಾ ವಿಧಾನಸಭೆ ಕ್ಷೇತ್ರದ ಚೆಮ್ನಾಡ್ ಗ್ರಾಮ ಪಂಚಾಯತ್ ನ ಚಾತಂಗಾಯಿ-ಚೆಂಬರಿಕ ಶಾಲೆ ರಸ್ತೆ, ಮಾಲಂಕುನ್ನು -ನಾಗದೇವಾಲಯ ರಸ್ತೆ, ವಾಣಿಯನ್ ಮೂಲೆ-ಚೇಡಿಕ್ಕಾನ ರಸ್ತೆ ಗಳ ಕಾಮಗಾರಿಯನ್ನೂ ಈ ವೇಳೆ ಅವರು ಉದ್ಘಾಟಿಸಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಪಿ.ಸಿ.ಝುಬೈದಾ, ನೀಲೇಶ್ವರ ಬ್ಲೋಕ್ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ವಿ.ವಿ.ಸುನಿತಾ, ಚೆರುವತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಿ.ವಿ.ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.