ಭೋಪಾಲ್:ಇಬ್ಬರು ಜನರು ಅಥವಾ ಎರಡು ತಂಡಗಳು ಆಟವನ್ನು ಪ್ರಾರಂಭಿಸಿದಾಗ, ಕೊನೆಯಲ್ಲಿ ಯಾರಾದರೂ ಒಬ್ಬರು ಅಥವಾ ಒಂದು ತಂಡ ಗೆಲ್ಲುತ್ತದೆ. ಆದರೆ ಕೆಲವು ಆಟಗಾರರು ತಮ್ಮ ಸೋಲನ್ನು ಯಾವುದೇ ಪರಿಸ್ಥಿತಿಯಲ್ಲಿ ಸ್ವೀಕರಿಸುವುದಿಲ್ಲ. ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್‌ನ ಫ್ಯಾಮಿಲಿ ಕೋರ್ಟ್‌ನಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ, ಇದರಲ್ಲಿ ಮಗಳು ತನ್ನ ತಂದೆಯ ವಿರುದ್ಧ ಲುಡೋ (Ludo) ಆಟದಲ್ಲಿ ಸೋತ ಕಾರಣಕ್ಕಾಗಿ ನ್ಯಾಯಾಲಯಕ್ಕೆ ತಲುಪಿದ್ದಾಳೆ. ನಂಬಲಸಾಧ್ಯವಾದರೂ ಕೂಡ ಇದು ಸತ್ಯ.
ಶನಿವಾರ (ಸೆಪ್ಟೆಂಬರ್ 26), 24 ವರ್ಷದ ಬಾಲಕಿ ಲುಡೋ ಆಟಕ್ಕೆ ಸಂಬಂಧಿಸಿದಂತೆ ತನ್ನ ತಂದೆಯ ವಿರುದ್ಧ ಭೋಪಾಲ್ ಕುಟುಂಬ ನ್ಯಾಯಾಲಯದ ಕದ ತಟ್ಟಿದ್ದಾಳೆ. ಲುಡೋ ಆಟದಲ್ಲಿ ತನ್ನ ತಂದೆ ತನ್ನನ್ನು ಮೋಸ ಮಾಡಿದ್ದಾರೆ ಎಂದು ಪುತ್ರಿ ಆರೋಪಿಸಿದ್ದಾಳೆ.
ಈ ಪ್ರಕರಣದ ಕುರಿತು ಹೇಳಿಕೆ ನೀಡಿರುವ ನ್ಯಾಯಾಲಯದ ಕೌನ್ಸಲರ್ ಸರಿತಾ, 'ಯುವತಿ ತನ್ನ ತಂದೆಯನ್ನು ಯಾವ ಮಟ್ಟಿಗೆ ನಂಬಿದ್ದಾರೆ ಎಂದರೆ, ಅವರಿಂದ ಮೋಸವನ್ನು ನಿರೀಕ್ಷಿಸಿರಲಿಲ್ಲ. ಯುವತಿಯ ಜೊತೆಗೆ ಒಟ್ಟು ನಾಲ್ಕು ಕೌನ್ಸಲಿಂಗ್ ಸೆಶನ್ ಗಳನ್ನು ನಡೆಸಲಾಗುವುದು" ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡುರುವ ಯುವತಿ, "ಲುಡೋ ಆಟದಲ್ಲಿ ನನ್ನನ್ನು ಖುಷಿಪಡಿಸಲು ನನ್ನ ತಂದೆ ಸೋಳಬಹುದಾಗಿತ್ತು ಆದರೆ ಅವರು ಹಾಗೆ ಮಾಡಲಿಲ್ಲ ಮತ್ತು ಗೆಲ್ಲಲು ಮೋಸ ಮಾಡಿದ್ದಾರೆ. ಇದು ನನ್ನ ಹೃದಯವನ್ನು ನೋಯುವಂತೆ ಮಾಡಿದೆ. ಈಗ ನಾನು ನನ್ನ ತಂದೆಯ ಬಗ್ಗೆ ಎಲ್ಲ ಗೌರವ ಕಳೆದುಕೊಂಡಿದ್ದೇನೆ" ಎಂದು ಹೇಳಿದ್ದಾಳೆ. ಆದರೆ, ಪ್ರಸ್ತುತ ಕೌನ್ಸೆಲಿಂಗ್ನ ಎಲ್ಲಾ ಸುತ್ತುಗಳನ್ನು ಮುಗಿದುಹೋದ ಬಳಿಕ, ಹುಡುಗಿ ಇದೀಗ ಸಕಾರಾತ್ಮಕ ಭಾವನೆ ಹೊಂದಿದ್ದಾಳೆ ಎನ್ನಲಾಗಿದೆ.
ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಕುಟುಂಬ ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತವೆ, ಆದರೆ ಇದು ಲುಡೋಗೆ ಸಂಬಂಧಿಸಿದ ಮೊದಲ ಪ್ರಕರಣವಾಗಿರುವುದು ಇಲ್ಲಿ ಗಮನಾರ್ಹ.