ಕಾಸರಗೋಡು: ಮಂಜೇಶ್ವರ ಬ್ಲೋಕ್ ಪಂಚಾಯತ್ ಆಶ್ರಯದಲ್ಲಿ ಮಂಗಲ್ಪಾಡಿ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಶವಾಗಾರ ನಿರ್ಮಾಣಗೊಂಡಿದೆ.
2017-18ರ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ, ಮಂಜೇಶ್ವರ ಬ್ಲೋಕ್ ಪಂಚಾಯತ್ 35 ಲಕ್ಷ ರೂ. ವೆಚ್ಚದಲ್ಲಿ ಈ ಶವಾಗಾರ ನಿರ್ಮಿಸಿದೆ ಎಂದು ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ತಿಳಿಸಿದರು. ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೃತಶರೀರಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಮತ್ತು ಅವು ಹಾಲಾಗದಂತೆ ಸಂರಕ್ಷಿಸುವ ಮೂರು ಫ್ರೀಝರ್ ಸಹಿತ ಸೌಲಭ್ಯಗಳು ಇಲ್ಲಿವೆ ಎಂದವರು ತಿಳಿಸಿದರು.
ಅ.10ರಂದು ಬೆಳಗ್ಗೆ 10 ಗಂಟೆಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಶವಾಗಾರವನ್ನು ಉದ್ಘಾಟಿಸುವರು. ಶಾಸಕ ಎಂ.ಸಿ.ಕಮರುದ್ದೀನ್ ಮುಖ್ಯ ಅತಿಥಿಯಾಗಿರುವರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು.
ಬ್ಲಾಕ್ ಪಂಚಾಯತ್ ಯೋಜನೆಯಲ್ಲಿ ಅಳವಡಿಸಿ ನಿರ್ಮಿಸಲಾದ ಜೆಂಡರ್ ಕ್ಲಿನಿಕ್ ನ್ನು ಶಾಸಕ ಎಂ.ಸಿ.ಕಮರುದ್ದೀನ್ ಉದ್ಘಾಟಿಸುವರು. ಕೋವಿಡ್ ಸಂಹಿತೆ ಪಾಲಿಸಿಕೊಂಡು ಸಮಾರಂಭ ನಡೆಯಲಿದೆ. ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ತ್ರಿಸ್ತರ ಪಂಚಾಯತ್ ಗಳ ಸದಸ್ಯರು, ಜಿಲ್ಲಾ ವೈದ್ಯಧಿಕಾರಿ, ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲಾದವರು ಉಪಸ್ಥಿತರಿರುವರು.