ಅಯೋಧ್ಯೆ: ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ ಹರಿದುಬಂದಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಬಗ್ಗೆ ಮಾಹಿತಿ ನೀಡಿದ್ದು ಅ.17 ರಿಂದ ಅಂದರೆ ನವರಾತ್ರಿಯ ಮೊದಲನೇ ದಿನದಿಂದ ಮಂದಿರ ನಿರ್ಮಾಣ ಕಾಮಗಾರಿ ಫೌಂಡೇಶನ್ ಪಿಲ್ಲರ್ ಗಳ ನಿರ್ಮಾಣದ ಮೂಲಕ ಪ್ರಾರಂಭವಾಗಲಿದೆ.
ಕೇಂದ್ರ ಸರ್ಕಾರ ರಾಮಜನ್ಮಭೂಮಿ ಟ್ರಸ್ಟ್ ನ್ನು ಆದಾಯ ತೆರಿಗೆ ಕಾಯ್ದೆಯ 80ಜಿ ಅಡಿಯಲ್ಲಿ ಗುರುತಿಸಿದೆ.ಈ ಸೆಕ್ಷನ್ ಅಡಿಯಲ್ಲಿ ದತ್ತಿ ಸಂಸ್ಥೆಗಳ ಪರಿಹಾರ ನಿಧಿಗಳಿಗೆ ನೀಡಿದ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.