HEALTH TIPS

ಕೋವಿಡ್ ಕಾರಣ ಉದ್ಯೋಗ ಕಳಕೊಂಡವರಿಗೆ ಭರವಸೆ ಪ್ರಕಟಿಸಿದ ಸರ್ಕಾರ- 100 ದಿನಗಳಲ್ಲಿ 50,000 ಉದ್ಯೋಗ ಸೃಷ್ಟಿ!!-ಮುಖ್ಯಮಂತ್ರಿ

      

          ತಿರುವನಂತಪುರ: ಕೋವಿಡ್ ಸೋಂಕಿನ ಕಾರಣ ಉಂಟಾಗಿರುವ ಅತಂತ್ರತೆಯ ಪರಿಣಾಮ ಕೇರಳದಲ್ಲಿ ಸಾಕಷ್ಟು ನಿರುದ್ಯೋಗ ಸೃಷ್ಟಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ. ಇದರ ಭಾಗವಾಗಿ ರಾಜ್ಯದಲ್ಲಿ ಹೊಸ ಉದ್ಯೋಗ ಸೃಷ್ಟಿಸಲು ಸಮಗ್ರ ಯೋಜನೆಯನ್ನು ರೂಪಿಸಲಾಗುವುದು. 100 ದಿನಗಳಲ್ಲಿ 50,000 ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

     ಪ್ರತಿ ಗ್ರಾಮ ಪಂಚಾಯತಿ, ಪುರಸಭೆಗಳಲ್ಲಿ ಕೃಷಿಯೇತರ ವಲಯದಲ್ಲಿ 1,000 ಜನರಿಗೆ 5 ಎಂಬ ದರದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮವನ್ನು ಈಗಾಗಲೇ ಘೋಷಿಸಲಾಗಿತ್ತು. ಆದರೆ ಕೋವಿಡ್ ಕಾರಣ ಜಾರಿಗೊಳಿಸುವಲ್ಲಿ ಅಡ್ಡಿಯಾಯಿತು. 50 ಸಾವಿರದಿಂದ  95 ಸಾವಿರ ವರೆಗೆ  ಉದ್ಯೋಗಳ ಸೃಷ್ಟಿಸುವ ಗುರಿ ಸರ್ಕಾರ ಹೊಂದಿದೆ. ಇದು ಡಿಸೆಂಬರ್ ವೇಳೆಗೆ 50,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಪ್ರತಿ ಎರಡು ವಾರಗಳಿಗೊಮ್ಮೆ ವಿವರವಾದ ಅಂಕಿಅಂಶಗಳು ಮತ್ತು ನೇಮಕಾತಿ ವಿವರಗಳನ್ನು ಪ್ರಕಟಿಸಲಾಗುತ್ತದೆ. ಇದಕ್ಕಾಗಿ ವಿಶೇಷ ಪೆÇೀರ್ಟಲ್ ಅನ್ನು ಪ್ರಾರಂಭಿಸಲಾಗುವುದು ' ಎಂದು ಮುಖ್ಯಮಂತ್ರಿ ತಿಳಿಸಿದರು.

       '18, ಸರ್ಕಾರಿ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ 600 ಜನರಿಗೆ ಉದ್ಯೋಗ ನೀಡಲಾಗುವುದು. ಇದು ಶಾಶ್ವತ ಮತ್ತು ತಾತ್ಕಾಲಿಕ ಒಪ್ಪಂದದ ನೇಮಕಾತಿಗಳನ್ನು ಒಳಗೊಂಡಿರುತ್ತದೆ. ಹೊಸ ಕೋರ್ಸ್‍ಗಳ ಅಂಗವಾಗಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ 425 ಹುದ್ದೆಗಳು, ಅನುದಾನಿತ ಕಾಲೇಜುಗಳಲ್ಲಿ 700 ಹುದ್ದೆಗಳು ಮತ್ತು 300 ತಾತ್ಕಾಲಿಕ ಹುದ್ದೆಗಳನ್ನು ರಚಿಸಲಾಗುವುದು. ಅನುದಾನಿತ ಶಾಲೆಗಳಲ್ಲಿ 6,011 ಹುದ್ದೆಗಳಲ್ಲಿ ನೇಮಕಾತಿಗಳನ್ನು ಕ್ರಮಬದ್ಧಗೊಳಿಸಲಾಗುತ್ತದೆ. ನೇಮಕಾತಿ ಪಡೆದಿದ್ದರೂ ಶಾಲೆಗಳು ಪುನರಾರಂಭಗೊಳ್ಳದಿರುವುದರಿಂದ 1632 ಮಂದಿ ಉದ್ಯೋಗ ಸೇರಲು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಇದು ಶಿಕ್ಷಣ ಕ್ಷೇತ್ರದಲ್ಲಿ 10,968 ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದರು.

     ವೈದ್ಯಕೀಯ ಕಾಲೇಜುಗಳಲ್ಲಿ 700 ಹುದ್ದೆಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ 500 ಹುದ್ದೆಗಳನ್ನು ರಚಿಸಲಾಗುವುದು. ಫಸ್ಟ್ಲೈನ್ ಕೇಂದ್ರಗಳಲ್ಲಿ 1,000 ಉದ್ಯೋಗಿಗಳಿಗೆ ಕೋವಿಡ್ ತಾತ್ಕಾಲಿಕ ಉದ್ಯೋಗವನ್ನು ನೀಡಲಾಗುತ್ತದೆ. ಪರಿಶಿಷ್ಟ ಪಂಗಡಕ್ಕಾಗಿ 500 ಮಂದಿಗಳನ್ನು ಅರಣ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಬೀಟ್ ಅಧಿಕಾರಿಗಳಾಗಿ ನೇಮಿಸಲಾಗುವುದು. ಅಲ್ಲದೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಹೊರತು ಇತರ ಇಲಾಖೆಗಳಲ್ಲಿ 1717 ಜನರಿಗೆ ಉದ್ಯೋಗವನ್ನು ಒದಗಿಸಲಾಗುತ್ತದೆ.  ಸರ್ಕಾರಿ ಸೇವೆಗಳಲ್ಲಿ ಮತ್ತು ಪಿಎಸ್ಸಿಗೆ ಬಿಟ್ಟ ಸಾರ್ವಜನಿಕ ವಲಯದ ಅರೆ-ಸರ್ಕಾರಿ ಸಂಸ್ಥೆಗಳಲ್ಲಿ ಪಿಎಸ್ಸಿ ಮೂಲಕ ನೇಮಕಾತಿ ನಡೆಯಲಿದೆ. ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣವೇ ಪಿಎಸ್‍ಸಿಗೆ ವರದಿ ಮಾಡುವಂತೆ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries