ತಿರುವನಂತಪುರ: ಕೇರಳದಲ್ಲಿ ಬುಧವಾರ ಮೊದಲ ಬಾರಿಗೆ ಕೋವಿಡ್‍ಗಳ ಸಂಖ್ಯೆ 10,000 ದಾಟಿದೆ. ನಿನ್ನೆ 10,606 ಜನರಿಗೆ ಕೋವಿಡ್ ಬಾಧಿಸಿರುವುದು ದೃಢೀಕರಿಸಲ್ಪಟ್ಟಿದೆ.
ಅಕ್ಟೋಬರ್ 1 ರಂದು 81.35 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿತ್ತು. ಆದರೆ ನಿನ್ನೆ ಅದು 92,161 ರಷ್ಟಕ್ಕೆ ಏರಿಕೆಯಾಯಿತು. ಏಳು ದಿನಗಳಲ್ಲಿ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 57,299 ಆಗಿದೆ.
ಆದರೆ 32,029 ಜನರು ಸೋಂಕಿನಿಂದ ಗುಣಪಡಿಸಲಾಗಿದೆ ಎಂಬುದು ಸಮಾಧಾನಕರವಾಗಿದೆ. ಜೊತೆಗೆ ಒಂದು ವಾರದಲ್ಲಿ ಕೇರಳದಲ್ಲಿ 164 ಸಾವುಗಳು ವರದಿಯಾಗಿವೆ.
ಮೊದಲ ತರಂಗ:
ಭಾರತದಲ್ಲಿ ಕೋವಿಡ್ ಸೋಂಕು ಮೊದಲು ಪತ್ತೆಯಾದುದು ಕೇರಳದಲ್ಲಿ. ಇದೀಗ ಮೂರನೇ ತರಂಗದತ್ತ ಸಾಗುತ್ತಿರುವಾಗ ಪರಿಸ್ಥಿತಿ ಆತಂಕಕಾರಿಯಾಗಿದೆ. ಚೀನಾದ ವುಹಾನ್ ನಿಂದ ಹಿಂದಿರುಗಿದ ಕೆಲವು ವಿದ್ಯಾರ್ಥಿಗಳು ಜನವರಿ 30 ರಂದು ಕೋವಿಡ್ ಸೋಂಕಿರುವುದು ಪತ್ತೆಯಾಗಿತ್ತು. ಬಳಿಕ ಫೆಬ್ರವರಿ 2 ರಂದು ಆಲಪ್ಪುಳದಲ್ಲೂ, ಫೆಬ್ರವರಿ 3 ರಂದು ಕಾಸರಗೋಡಿನಲ್ಲೂ ತಲಾ ಒಬ್ಬರಲ್ಲಿ ಸೋಂಕು ಕಂಡುಬಂದಿತ್ತು. ವಿಶೇಷವೆಂದರೆ ಈ ಸಂದರ್ಭ ಭಾರತದ ಬೇರೆಲ್ಲಿಯೂ ಸೋಂಕು ಪ್ರಕರಣ ವರದಿಯಾಗಿರಲಿಲ್ಲ.
ಆರಂಭದ ಸಂದರ್ಭದಲ್ಲೇ ರಾಜ್ಯದಲ್ಲಿ ಸೋಂಕಿನ ವಿರುದ್ದ ತೆಗೆದುಕೊಂಡ ನಿಯಂತ್ರಣಗಳಿಂದ ಹರಡದಂತೆ ತಡೆಯಲು ಆರೋಗ್ಯ ಇಲಾಖೆಗೆ ಸಾಧ್ಯವಾಯಿತು. ಫೆಬ್ರವರಿ ಮಧ್ಯದ ವೇಳೆಗೆ, ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಎರಡನೇ ತರಂಗ:
ಮಾರ್ಚ್ 8 ರಂದು ಕೇರಳದಲ್ಲಿ ಸೋಂಕಿನ ಎರಡನೇ ತರಂಗ ವರದಿಯಾಯಿತು. ಹೊರ ರಾಷ್ಟ್ರಗಳಿಂದ ಆಗಮಿಸಿದವರ ಮೂಲಕ ಮತ್ತೆ ಕೋವಿಡ್ ಹರಡಲಾರಂಭಿಸಿತು.
ಇಟಲಿಯಿಂದ ಪತ್ತನಂತಿಟ್ಟಕ್ಕೆ ಆಗಮಿಸಿದ್ದ ಮೂವರು ಮತ್ತು ಇತರ ಇಬ್ಬರು ಸೋಂಕಿಗೊಳಗಾಗಿದ್ದರು. ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದರು.
ಮೊದಲ ಸಾವು ಕೇರಳದಲ್ಲಿ 28 ರಂದು ವರದಿಯಾಯಿತು. ಮೇ ಆರಂಭದ ವೇಳೆಗೆ ಕೋವಿಡ್ ನ ಎರಡನೇ ತರಂಗ ಕೇರಳದಲ್ಲಿ ಸಂಪೂರ್ಣವಾಗಿ ಕೊನೆಗೊಂಡಿತು. ದೈನಂದಿನ ಸೋಂಕಿತರೂ ಬೆರಳೆಣಿಕೆಯಲ್ಲಷ್ಟೇ ಇದ್ದರೆಂಬುದು ಗಮನಾರ್ಹ.
ಮೂರನೇ ತರಂಗ:
ರಾಜ್ಯದಲ್ಲಿ ಮೂರನೇ ಹಂತದಲ್ಲಿ ಏಕಾಏಕಿ ವ್ಯಾಪಕ ಸಂಖ್ಯೆಯಲ್ಲಿ ಸೋಂಕು ಹರಡಿರುವುದು ಮೂರನೇ ಹಂತದಲ್ಲಾಗಿದೆ. ವಿದೇಶದಿಂದ ಜನರು ಆಗಮಿಸಿದ್ದರಿಂದ ತೀವ್ರಗತಿಯ ಸಂಪರ್ಕದ ಮೂಲಕ ಸೋಂಕು ವ್ಯಾಪಕಗೊಂಡಿತು.
ಜುಲೈ 22 ರಂದು, ರಾಜ್ಯದಲ್ಲಿ ಮೊದಲ ಬಾರಿಗೆ, ಕೋವಿಡ್ ದೃಢೀಕರಿಸಿದ ಜನರ ಸಂಖ್ಯೆ ದಿನಕ್ಕೆ ಒಂದು ಸಾವಿರವನ್ನು ದಾಟಿತು. ಆ ಸಮಯದಲ್ಲಿ 1038 ಪ್ರಕರಣಗಳು ವರದಿಯಾಗಿವೆ. ಕೇವಲ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,000 ದಾಟಿದೆ. ಅಕ್ಟೋಬರ್ 7 ರ ಬುಧವಾರ 10,606 ಜನರಿಗೆ ಸೋಂಕು ತಗುಲಿತು.
ಆರಂಭಿಕ ಹಂತದಲ್ಲಿ, ಸೋಂಕು ಹೊರ ರಾಷ್ಟ್ರದಿಂದ ಬಂದವರಿಂದ ಹರಡಿತು. ಅಂದು ಕೇವಲ 219 ಜನರು ಮಾತ್ರ ಸೋಂಕಿಗೆ ಒಳಗಾಗಿದ್ದರು. ಬಳಿಕ ಕೇವಲ ಸಂಪರ್ಕದ ಮೂಲಕ 9,542 ಜನರಲ್ಲಿ ಸೋಂಕು ವರದಿಯಾಗಿದೆ.
ATE (2020) | DISTRICT(S) | ORIGIN | CASES(NEW) |
---|---|---|---|
Jan-30 | Thrissur | Wuhan | 1 |
Feb-2 | Alappuzha | Wuhan | 1 |
Feb-3 | Kasargod | Wuhan | 1 |
Mar-9 | Pathanamthitta | Italy | 3 |