ಕಾಸರಗೋಡು: ಕೋವಿಡ್ ಸೋಂಕು ಹರಡುವಿಕೆ ಅತ್ಯಧಿಕಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸ್ಥಲೀಯಾಡಳಿಉತ ಸಂಸ್ಥೆಗಳ ಮಟ್ಟದಲ್ಲಿ ನೇಮಕಗೊಂಡಿರುವ ಸೆಕ್ಟರ್ ಮೆಜಿಸ್ಟ್ರೇಟರ್ ಗಳು ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1080 ಕೇಸುಗಳನ್ನು ದಾಖಲಿಸಿದ್ದಾರೆ.
ಸೂಕ್ತ ರೀತಿ ಮಾಸ್ಕ್ ಧರಿಸದೇ ಇರುವ ಆರೋಪದಲ್ಲಿ 74 ಮಂದಿ ವಿರುದ್ಧ, ಸಾರ್ವಜನಿಕ ಪ್ರದೇಶಗಳಲ್ಲಿ ಆದೇಶ ಉಲ್ಲಂಘಿಸಿ ಗುಂಪು ಸೇರಿದ ಆರೋಪದಲ್ಲಿ 4 ಮಂದಿ ವಿರುದ್ಧ, ಆದೇಶ ಉಲ್ಲಂಘಿಸಿ ಚಟುವಟಿಕೆ ನಡೆಸಿದ ಆರೋಪದಲ್ಲಿ 3 ಅಂಗಡಿಗಳ ವಿರುದ್ಧ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದ ಆರೋಪದಲ್ಲಿ 7 ಅಂಗಡಿಗಳ ವಿರುದ್ಧ ಸಹಿತ 94 ಕೇಸುಗಳನ್ನು ಸೋಮವಾರ (ಅ.19ರಂದು) ದಾಖಲಿಸಲಾಗಿದೆ.
ರಸ್ತೆಗಳನ್ನು ಉಗಿಯುವುದು, ಕ್ವಾರೆಂಟೈನ್ ಆದೇಶ ಉಲ್ಲಂಗಿಸುವುದು, ನಿಷೇಧಾಜ್ಞೆ ಮೀರಿ ವರ್ತಿಸುವುದು, ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಂಜೂರಾತಿ ಪಡೆಯದೇ ಅಂಗಡಿಗಳನ್ನು ತೆರೆದು ಕಾರ್ಯಾಚರಿಸುವುದು, ಕಂಟೈನ್ಮೆಂಟ್ ಝೋನ್ ಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಡೆಸುವುದು ಇತ್ಯಾದಿ ಕೇಸುಗಳನ್ನು ದಾಖಲಿಸುವುದು, ಇನ್ನಿತರ ನೀತಿ ಸಂಃಇತೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕೇಸು ದಾಖಲಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗಝೆಟೆಡ್ ಅಧಿಕಾರಿಗಳನ್ನು ಕಾರ್ಯಕಾರಿ ಮೆಜಿಸ್ಟ್ರೇಟರ್ ಗಳ ಅಧಿಕಾರದೊಂದಿಗೆ ಸೆಕ್ಟರ್ ಮೆಜಿಸ್ಟ್ರೇಟರರನ್ನು ನೇಮಿಸುತ್ತದೆ. ಕಾಸರಗೋಡು ಜಿಲ್ಲೆಯಲ್ಲಿ 51 ಸೆಕ್ಟರ್ ಮೆಜಿಸ್ಟ್ರೇಟರರು ಇದ್ದಾರೆ.