ಕೊಚ್ಚಿ: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ವಿಚಾರಣೆ ಇಂದೂ ಸುಧೀರ್ಘ 11 ಗಂಟೆಗಳಷ್ಟು ಕಾಲ ನಡೆದು ದಿನದ ಮಟ್ಟಿಗೆ ಮುಕ್ತಾಯಗೊಳಿಸಲಾಗಿದ್ದು ನಾಳೆಯೂ ವಿಚಾರಣೆ ಮುಂದುವರಿಯಲಿದೆ ಎಂದು ಕಸ್ಟಮ್ಸ್ ಮೂಲಗಳಿಂದ ತಿಳಿದುಬಂದಿಒದೆ. ಬೆಳಿಗ್ಗೆ 10 ಗಂಟೆಗೆ ಕೊಚ್ಚಿ ಕಚೇರಿಯಲ್ಲಿ ವಿಚಾರಣೆ ಆಗಮಿಸಿದ ಅವರ ವಿಚಾರಣೆ ಸುಮಾರು 11 ಗಂಟೆಗಳ ಕಾಲ ನಡೆಯಿತು.
ಯುಎಇ ಕಾನ್ಸುಲೇಟ್ ಮೂಲಕ ಖರ್ಜೂರ ಹಣ್ಣುಗಳನ್ನು ಆಮದು ಮಾಡಿಕೊಂಡು ವಿತರಿಸಿದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ನಾಳೆ ಕೂಡ ವಿಚಾರಣೆ ಮುಂದುವರಿಯಲಿದೆ.
ಕಾನ್ಸುಲೇಟ್ ಮೂಲಕ ವಾಣಿಜ್ಯೇತರ ಉದ್ದೇಶಗಳಿಗಾಗಿ 17,000 ಕೆಜಿ ಖರ್ಜೂರದ ಹಣ್ಣುಗಳನ್ನು ಆಮದು ಮಾಡಿಕೊಳ್ಳಲು ಸಂಬಂಧಿಸಿದಂತೆ ಕಸ್ಟಮ್ಸ್ ನೋಂದಾಯಿಸಿದ ಪ್ರಕರಣದಲ್ಲಿ ಎಂ ಶಿವಶಂಕರ್ ಅವರನ್ನು ಪ್ರಶ್ನಿಸಲಾಯಿತು. ರಾಜ್ಯ ಸರ್ಕಾರದ ಅಂಕೆಯಲ್ಲಿರುವ ಅನಾಥಾಶ್ರಮಗಳು, ಕೈದಿಗಳಿಗೆ ವಿತರಿಸಲು ಸಾಮಾಜಿಕ ನ್ಯಾಯ ಇಲಾಖೆ ಸಿದ್ಧಪಡಿಸಿದ ಯೋಜನೆಯಲ್ಲಿ ಎಸಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.