ಬೆಂಗಳೂರು: ಮಾದಕವಸ್ತು ಪ್ರಕರಣದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಅವರ ಸುಧೀರ್ಘ ವಿಚಾರಣೆ ಶುಕ್ರವಾರ ತಡರಾತ್ರಿವರೆಗೂ ಮುಂದುವರಿದು ಪೂರ್ಣಗೊಂಡಿದೆ. ಬಿನೀಶ್ ಅವರನ್ನು ಜಾರಿ ನಿರ್ದೇಶನಾಲಯ ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಶುಕ್ರವಾರ ಬೆಳಿಗ್ಗೆ 8.30 ರ ಸುಮಾರಿಗೆ ಬಿನೀಶ್ ಕೊಡಿಯೇರಿಯನ್ನು ಜಾರಿ ಕಚೇರಿಗೆ ಕರೆತರಲಾಯಿತು. ವಿಚಾರಣೆ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು. ಪ್ರಶ್ನೆಗಳು ಮುಖ್ಯವಾಗಿ ಹಣಕಾಸಿನ ವಹಿವಾಟಿನ ಬಗ್ಗೆ ನಡೆದಿದೆ ಎನ್ನಲಾಗಿದೆ.
ಏತನ್ಮಧ್ಯೆ, ಡ್ರಗ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಬಿನೀಶ್ ಅವರನ್ನು ಭೇಟಿಯಾಗಲು ಸಹೋದರ ಬಿನೊಯ್ ಕೊಡಿಯೇರಿ ಪ್ರಯತ್ನಿಸಿದ್ದು ಭೇಟಿಯಾಗಲು ಇಡಿ ಅನುಮತಿ ನೀಡದ್ದರಿಂದ ಬರಿಗೈಯಿಂದ ಮರಳಿದ್ದರು.
ಸಹೋದರ ಬಿನೊಯ್ ಕೊಡಿಯೇರಿ ಅವರು ಬಿನೀಶ್ ಅವರನ್ನು ಭೇಟಿ ಮಾಡಲು ಅನುಮತಿ ಕೋರಿ ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು ಅರ್ಜಿ ಸಲ್ಲಿಸಿರುವರೆಮದು ತಿಳಿದುಬಂದಿದೆ. ಬಿನೀಶ್ ಅವರನ್ನು ನೋಡಲು ಸಂಬಂಧಿಕರು ಮತ್ತು ವಕೀಲರಿಗೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಈ ಮಧ್ಯೆ ಬಿನೀಶ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಇಡಿ ತಿಳಿಸಿದೆ. ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ಉತ್ತರಗಳಲ್ಲಿ ಏನನ್ನೋ ಮರೆಮಾಚುತ್ತಿರುವುದು ಕಂಡು ಬಂತೆಂದು ಇಡಿ ಅಧಿಕೃತರು ತಿಳಿಸಿದ್ದಾರೆ.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ. ಸಮರಸ ಸುದ್ದಿ ಬಳಗ