HEALTH TIPS

ಸರ್ಕಾರದ ವಿರುದ್ಧ ಜನಕ್ರೋಶ ತಡೆಯಲು ಕೇರಳ ರಾಜ್ಯದಲ್ಲಿ 144 ಸೆಕ್ಸನ್ ಜಾರಿ -ಬಿಜೆಪಿ ಆರೋಪ

       ಮಂಜೇಶ್ವರ: ಕಳ್ಳ ಸಾಗಾಟ, ಚಿನ್ನ ಸಾಗಾಟ, ವಂಚನೆ ಪ್ರಕರಣ, ಮಂತ್ರಿಗಳ, ಪುತ್ರರ, ಕುಟುಂಬದ ವಂಚನೆ ಪ್ರಕರಣ ಗಳಿಂದ ಮಾನ ಕಳೆದುಕೊಂಡಿರುವ ಎಡರಂಗ ಸರ್ಕಾರ ತನ್ನ ವಿರುದ್ಧ ಎದ್ದಿರುವ ಜನಕ್ರೋಶವನ್ನು ತಡೆಯಲು ಕೋವಿಡ್ ಹೆಸರಲ್ಲಿ ರಾಜ್ಯಾದ್ಯಂತ 144 ಜಾರಿ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ ಪ್ರಶ್ನಿಸಿದ್ದಾರೆ.

     ರಾಜ್ಯ ಸರ್ಕಾರದ ಜನವಂಚನೆಗೆದುರಾಗಿ ಮಂಜೇಶ್ವರ ಪಂಚಾಯತಿ ಮಟ್ಟದಲ್ಲಿ ಬಿಜೆಪಿ ಶುಕ್ರವಾರ ಆಯೋಜಿಸಿದ್ದ ನಿಂತು ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಜಗತ್ತಿನಲ್ಲೇ ಕೋವಿಡ್ ಪ್ರಕರಣ ಅಥವಾ ಅದಕ್ಕೆ ಸಂಬಂದಿಸಿದ ವಿಚಾರಗಳನ್ನು ಆರೋಗ್ಯ ಇಲಾಖೆ ನಿಯಂತ್ರಿಸುತ್ತದೆ. ಆದರೆ ಕೇರಳದಲ್ಲಿ ಮಾತ್ರ ಕೋವಿಡ್ ನಿಯಂತ್ರಣಕ್ಕೆ ಪೆÇಲೀಸರ ಕೈಯಲ್ಲಿ ಆಡಳಿತ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜಗತ್ತಿನಲ್ಲೇ ನಂಬರ್ ಒನ್ ಎಂದು ಬೊಗಳೆ ಬಿಡುವ ಪಿಣರಾಯಿ ಸರ್ಕಾರ ಕೋವಿಡ್ ನಿಯಂತ್ರಣದ ಸಂಪೂರ್ಣ ಹಳಿ ತಪ್ಪಿದೆ. ಕೋವಿಡ್ ನ್ನು ಪಿಣರಾಯಿ ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಉಪಯೋಗಿಸುತ್ತಿದೆ. ಪ್ರಸ್ತುತ ಇಂದು ತಿಂಗಳು 144 ಸೆಕ್ಸನ್ ಜಾರಿ ಕಾನೂನಿನ ಉಲ್ಲಂಘನೆ ಯಾಗಿದೆ. ಕೇರಳವನ್ನು ಪೆÇಲೀಸ್ ರಾಜ್ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

     ವಂಚನೆ ಪ್ರಕರಣದಲ್ಲಿ ಮುಖ್ಯಮಂತ್ರಿಯ ಕುಟುಂಬ ಹಾಗೂ ಎಡರಂಗದ ನೇತಾರರ ವಿರುದ್ಧ ಬರುತ್ತಿರು ವಿವಾದ, ಸ್ವಪ್ನ ಸುರೇಶ್ ಸರ್ಕಾರದ ಭಾಗವಾಗಿದ್ದು 38 ಕೋಟಿ ವಂಚನೆ ಮಾಡಿರುವಾಗ ಸರ್ಕಾರ ಯಾರ ಪರವಾಗಿದೆ ಎಂಬುದು ಜನತೆಗೆ ತಿಳಿದಿದೆ. ವಂಚನೆ ಪ್ರಕರಣದಲ್ಲಿ ಎಡರರಂಗ ಮತ್ತು ಮುಸ್ಲಿಂ ಲೀಗ್ ಒಂದೇ ನಾಣ್ಯದ ಮುಖಗಳು.ಈ ಹಿನ್ನೆಲೆಯಲ್ಲಿ ಮಂಜೇಶ್ವರ ಶಾಸಕರ ವಂಚನೆ ಬೆಳಕಿಗೆ ಬಂದರೂ ಪಿಣರಾಯಿ ಪೆÇಲೀಸ್ ಅವರನ್ನು ಬಂದಿಸಿಲ್ಲ ಎಂದು ಬಿಜೆಪಿ ಆರೋಪಿಸಿದರು.  ಲೋಕೇಶ್ ಮಾಡ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ.ನವೀನ್ ರಾಜ್ ಉದ್ಘಾಟಿಸಿದರು. 

       ಯಾದವ ಬಡಾಜೆ, ಮದವ ಬಲ್ಯಾಯ ಮೊದಲವರು ಉಪಸ್ಥಿತರಿದ್ದರು. ಅವಿನಾಶ್ ಹೆಗ್ಡೆ ಸ್ವಾಗತಿಸಿ, ರಾಜೇಶ್ ಮಜಲ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries