ಕುಂಬಳೆ: ಕೇರಳದಲ್ಲಿ ವ್ಯಾಪಿಸಿರುವ ಕೋವಿಡ್ ನಿಯಂತ್ರಣ ಹೆಸರಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವುದು ಸರ್ಕಾರದ ವಿರುದ್ದ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಆರೋಪಿಸಿದ್ದಾರೆ.
ಕೇರಳಾದ್ಯಂತ ಕೋವಿಡ್ ತಡೆಗಟ್ಟಲು 144 ಸೆಕ್ಷನ್ ನಿಂದ ಸಾಧ್ಯವೇ, ಇದು ರಾಜಕೀಯ ಪ್ರೇರಿತವಾಗಿ ಮತ್ತು ಜನರಿಗೆ ಕೇರಳ ಸರ್ಕಾರದ ಹಾಗೂ ಮಂಜೇಶ್ವರ ಶಾಸಕರ ವಂಚನೆ ಪ್ರಕರಣಗಳನ್ನು ಮರೆತು ಬಿಡುತ್ತಾರೆ ಎಂಬ ಭ್ರಮೆ ಇದ್ದಂತಿದೆ. ಕರ್ನಾಟಕ ರಾಜ್ಯದಲ್ಲಿ ಆಂಟಿಜನ್ ಟೆಸ್ಟ್ ಅರೋಗ್ಯ ಇಲಾಖೆ ಆಶಾ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಕೋವಿಡ್ ಇರುವವರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಕೇರಳ ಸರ್ಕಾರ ಇಂತಹ ನಿಯಂತ್ರಕ ಕ್ರಮಗಳನ್ನು ಅನುಸರಿಸುವುದು ಬಿಟ್ಟು ದಿನಂಪ್ರತಿ ಪತ್ರಿಕಾ ಗೋಷ್ಠಿ ಕರೆದೊ, 144 ಸೆಕ್ಷನ್ ಜಾರಿ ಮಾಡಿ ಕೋವಿಡ್ ಇಲ್ಲದಾಗಿಸುವ ವ್ಯರ್ಥ ಪ್ರಯತ್ನ ಕೇರಳ ಸರ್ಕಾರ ಕೈ ಬಿಡುವುದು ಒಳಿತು ಎಂದು ಮಣಿಕಂಠ ರೈ ಆಗ್ರಹಿಸಿದ್ದಾರೆ.