ನವದೆಹಲಿ: ಎನ್ ಕೆ ಸಿಂಗ್ ನೇತೃತ್ವದ ಹದಿನೈದನೇ ಹಣಕಾಸು ಆಯೋಗವು ಇಂದು 2021-2022 ರಿಂದ 2025- 2026ರ ವರದಿಯ ಕುರಿತ ತಮ್ಮ ಚರ್ಚೆಯನ್ನು ಮುಕ್ತಾಯಗೊಳಿಸಿ ವರದಿಯನ್ನು ಅಂತಿಮಗೊಳಿಸಿದೆ.
ಹದಿನೈದನೇ ಹಣ ಕಾಸು ಆಯೋಗದ ಅಧ್ಯಕ್ಷರು,ಸದಸ್ಯರು ವರದಿಗೆ ಸಹಿ ಮಾಡಿದ್ದಾರೆ.ಆಯೋಗವು ತನ್ನ ವರದಿಯನ್ನು ನವೆಂಬರ್ 9ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷರ ಕಚೇರಿ ಮಾಹಿತಿ ತಿಳಿಸಿದೆ. ಆಯೋಗವು ವರದಿಯ ಪ್ರತಿ ಯನ್ನು ಮುಂದಿನ ತಿಂಗಳ ಕೊನೆಯಲ್ಲಿ ಪ್ರಧಾನ ಮಂತ್ರಿಯವರಿಗೆ ಸಲ್ಲಿಸಲಿದೆ.
ಈ ವರದಿಯನ್ನು ಕೇಂದ್ರ ಹಣಕಾಸು ಸಚಿವರು, ಸರ್ಕಾರ ಕೈಗೊಂಡ ವರದಿಯೊಂದಿಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.2021 -22 ರಿಂದ 2025-26 ರ5 ಹಣಕಾಸು ವರ್ಷಗಳಿಗೆ ಸಂಬಂಧಿಸಿದ ಶಿಫಾರಸ್ಸುಗಳನ್ನು ವರದಿಯು ಒಳಗೊಂಡಿದೆ.