ತಿರುವನಂತಪುರ: ರಾಜ್ಯದ ರೈತರಿಗೆ ನಿಟ್ಟುಸಿರು ಬಿಡುವ ಅವಕಾಶವಾಗಿ ಮತ್ತು ಕೃಷಿ ಕ್ಷೇತ್ರದ ಇನ್ನಷ್ಟು ವಿಸ್ತರಣೆಗೆ ರಾಜ್ಯ ಸರ್ಕಾರವು 16 ಬಗೆಯ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಲು ಸಜ್ಜಾಗಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಉದ್ದೇಶಿತ ಬೆಂಬಲ ಬೆಲೆ ಯೋಜನೆ ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಮರಗೆಣಸು, ಬಾಳೆ, ಅನಾನಸ್, ಅರಸಿನ, ಸೌತೆಕಾಯಿ, ಟೊಮೆಟೊ, ಎಲೆಕೋಸು, ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ಬೀಟ್ರೂಟ್ ಮತ್ತು ಬೆಳ್ಳುಳ್ಳಿಗೆ ರಾಜ್ಯ ಬೆಂಬಲ ಬೆಲೆ ಘೋಶಿಸಲಿದೆ.
ರೈತರನ್ನು ಬೆಂಬಲಿಸುವ ಮತ್ತು ಕೃಷಿ ಕ್ಷೇತ್ರವನ್ನು ವಿಸ್ತರಿಸುವ ನಿರ್ಧಾರದ ಭಾಗವಾಗಿ ಕೃಷಿ ಬೆಳೆಗಳಿಗೆ ಮೂಲ ಬೆಲೆಯನ್ನು ನಿಗದಿಪಡಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಈ ಯೋಜನೆ ನವೆಂಬರ್ 1 ರಿಂದ ಜಾರಿಗೆ ಬರಲಿದೆ.
ಉತ್ಪಾದನಾ ವೆಚ್ಚ ಮತ್ತು ಉತ್ಪಾದಕತೆಯ ಆಧಾರದ ಮೇಲೆ ಮೂಲ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಮಾರುಕಟ್ಟೆ ಬೆಲೆ ಇನ್ನೂ ಕಡಿಮೆಯಾದಾಗ ರೈತನಿಗೆ ಮೂಲ ಬೆಲೆಯನ್ನು ನೀಡುವುದು ರಾಜ್ಯ ಸರ್ಕಾರದ ಯೋಜನೆಯಾಗಿದೆ.
ಇದು ಬೆಲೆ ಸ್ಥಿರತೆ ಮತ್ತು ರೈತರಿಗೆ ಉತ್ತಮ ಲಾಭವನ್ನು ನೀಡುತ್ತದೆ ಎಂದು ನಂಬಲಾಗಿದೆ. ಮಾರುಕಟ್ಟೆ ಬೆಲೆ ಏರಿಳಿತಗಳಿಂದ ರೈತರನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ. ಇದು ರಾಜ್ಯದಲ್ಲಿ ತರಕಾರಿ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಸರ್ಕಾರ ಆಶಿಸಿದೆ.
ಈ ಯೋಜನೆಯನ್ನು ಕೃಷಿ ಇಲಾಖೆ ಸ್ಥಳೀಯಾಡಳಿತಗಳು ಮತ್ತು ಸಹಕಾರ ಇಲಾಖೆಯ ಸಹಯೋಗದೊಂದಿಗೆ ಜಾರಿಗೆ ತರಲಿದೆ. ವಿಎಫ್‍ಪಿಸಿಕೆ, ಹಾರ್ಟಿಕಾರ್ಪ್ ಮತ್ತು ಸಗಟು ಮಾರುಕಟ್ಟೆಗಳ ಮೂಲಕ ಪಟ್ಟಿಮಾಡಿದ ಬೆಳೆಗಳನ್ನು ರೈತರಿಂದ ಸಂಗ್ರಹಿಸಲಾಗುವುದು. ಇದು ಪಂಚಾಯಿತಿಯಲ್ಲಿ ಕನಿಷ್ಠ ಒಂದು ಮಾರುಕಟ್ಟೆಯನ್ನಾದರೂ ತೆರೆಯಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ, ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು 250 ಮಾರುಕಟ್ಟೆಗಳಲ್ಲಿ ರೈತರಿಂದ ನೇರವಾಗಿ ಬೆಳೆಗಳನ್ನು ಸಂಗ್ರಹಿಸಲಿವೆ. ಒಬ್ಬ ರೈತನಿಗೆ ಒಂದು ಋತುವಿನಲ್ಲಿ 15 ಎಕರೆ ಜಮೀನಿನ ಕೃಷಿ ಬೆಳೆಗಳಿಗಷ್ಟೇ ಬೆಂಬಲ ಬೆಲೆ ನೀಡಲಾಗುವುದು.
ಮಾರುಕಟ್ಟೆ ಬೆಲೆ ಮೂಲ ಬೆಲೆಗಿಂತ ಕಡಿಮೆಯಿದ್ದರೆ, ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಗ್ಯಾಪ್ ಫಂಡ್‍ಗಳನ್ನು ಪ್ರಾಥಮಿಕ ಗುಂಪುಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷರು ಮತ್ತು ಪ್ರಾಥಮಿಕ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷರೊಂದಿಗೆ ಈ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸಲು ಸರ್ಕಾರ ಪ್ರಸ್ತಾಪಿಸಿದೆ.
ಕೃಷಿ ಇಲಾಖೆ ಆನ್‍ಲೈನ್ ಪೆÇೀರ್ಟಲ್ ಏಮ್ಸ್ ಆಧಾರಿತ ಯೋಜನೆಯನ್ನು ಜಾರಿಗೆ ತರಲಿದೆ. ರೈತರ ನೋಂದಣಿ, ಪ್ರದೇಶ ಮತ್ತು ಉತ್ಪಾದನೆಯ ನಿರ್ಣಯ ಮತ್ತು ಸ್ಥಳೀಯ ಉತ್ಪನ್ನಗಳ ಪ್ರಮಾಣೀಕರಣವನ್ನು ಏಮ್ಸ್ ಪೆÇೀರ್ಟಲ್‍ನಲ್ಲಿ ದಾಖಲಿಸಬೇಕು. ಕೃಷಿ ಇಲಾಖೆ ಎಲ್ಲಾ ಖರೀದಿ ಸಂಸ್ಥೆಗಳಿಗೆ ಅನ್ವಯವಾಗುವ ಕಾರ್ಯ ವಿಧಾನಗಳನ್ನು ಸಿದ್ಧಪಡಿಸುತ್ತದೆ.
ಮಾರುಕಟ್ಟೆ ಬೆಲೆ ಪ್ರತಿ ಉತ್ಪನ್ನಕ್ಕೆ ನಿಗದಿಪಡಿಸಿದ ಮೂಲ ಬೆಲೆಗಿಂತ ಕಡಿಮೆಯಾದಾಗ, ಕೃಷಿ ಇಲಾಖೆಯು ಖರೀದಿ ಏಜೆನ್ಸಿಯ ವರದಿಯ ಆಧಾರದ ಮೇಲೆ ರೈತನ ಬ್ಯಾಂಕ್ ಖಾತೆಗೆ ಬೆಲೆ ವ್ಯತ್ಯಾಸವನ್ನು ವರ್ಗಾಯಿಸುತ್ತದೆ. ಸಂಗ್ರಹಿಸಿದ ಬೆಳೆಗಳನ್ನು 'ಜೀವನಿ-ಕೇರಳ ಫಾರ್ಮ್ ತಾಜಾ ಹಣ್ಣುಗಳು ಮತ್ತು ತರಕಾರಿಗಳು' ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯೋಜನೆಗಳ ಅನುಷ್ಠಾನವನ್ನು ಮೌಲ್ಯಮಾಪನ ಮಾಡಲು, ಕಾಲಕಾಲಕ್ಕೆ ಮೂಲ ಬೆಲೆಯನ್ನು ಪರಿಷ್ಕರಿಸಲು ಮತ್ತು ಹೊಸ ಬೆಳೆ ಸೇರಿಸಲು ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಸಮನ್ವಯ) ಅಧ್ಯಕ್ಷರಾಗಿ ಮತ್ತು ಕೃಷಿ ಉತ್ಪಾದನಾ ಆಯುಕ್ತರು ಉಪಾಧ್ಯಕ್ಷರಾಗಿರುತ್ತಾರೆ. ರಾಜ್ಯ ಮಟ್ಟದ ಸಮಿತಿ ಮೂಲ ಬೆಲೆಯನ್ನು ಪರಿಷ್ಕರಿಸಿದಾಗ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸಬೇಕು.
ನಿಖರವಾದ ಕೃಷಿಯ ಮೂಲಕ ಉತ್ಪಾದಿಸುವ ಬೆಳೆಗಳ ಮೂಲ ಉತ್ಪಾದಕತೆಯನ್ನು ಅಧ್ಯಯನ ಮಾಡಿದ ನಂತರ ಅಗತ್ಯ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕೃಷಿ ಇಲಾಖೆಗೆ ವಹಿಸಲಾಗಿದೆ.