HEALTH TIPS

ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ: ಭಾರತೀಯ ಮೂಲದ 14 ವರ್ಷದ ಅನಿಕಾಗೆ 25 ಸಾವಿರ ಡಾಲರ್ ಬಹುಮಾನ

        ಹೌಸ್ಟನ್: ಮಹಾಮಾರಿ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳು ಶ್ರಮಿಸುತ್ತಿರುವಾಗ ಭಾರತೀಯ ಮೂಲದ 14 ವರ್ಷದ ಬಾಲಕಿಯೊಬ್ಬರು ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

       ಅಮೆರಿಕದ ಟೆಕ್ಸಾಸ್ ನ ಫ್ರಿಸ್ಕೋನಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿ ಅನಿಕಾ ಚೆಬ್ರೊಲು ಅವರು ಕೋವಿಡ್-19 ಸಂಭಾವ್ಯ ಚಿಕಿತ್ಸೆ ಒದಗಿಸುವ ಸಂಶೋಧನೆಗಾಗಿ 25,000 ಡಾಲರ್ ಬಹುಮಾನ ಹಾಗೂ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆದ್ದಿದ್ದಾರೆ.

    3 ಎಂ ಚಾಲೆಂಜ್ ವೆಬ್‍ಸೈಟ್‍ನ ಪ್ರಕಾರ, ಕೊರೋನವೈರಸ್ ಸಾಂಕ್ರಾಮಿಕಕ್ಕೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.ಕಳೆದ ಎರಡು ದಿನಗಳಿಂದ ನನ್ನ ಯೋಜನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅದು ಸಾರ್ಸ್ - ಕೋವಿಡ್-2 ವೈರಸ್ ಗೆ ಸಂಬಂಧಿಸಿದ್ದಾಗಿದ್ದು, ಇದು ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಮ್ಮ ಸಾಮೂಹಿಕ ಭರವಸೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅನಿಕಾ ಸಿ ಎನ್ ಎನ್ ಗೆ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries