ತಿರುವನಂತಪುರ: ಕೇರಳದಲ್ಲಿ ಇಂದು 5022 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. 92,731 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ 92,731 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 2,52,868 ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. ಇಂದು 21 ಮರಣಗಳು ಕೋವಿಡ್ ಸೋಂಕಿನಿಂದ ಉಂಟಾಗಿರುವುದಾಗಿ ಸರ್ಕಾರ ದೃಢಪಡಿಸಿದೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವಿನ ಸಂಖ್ಯೆ 1182 ಕ್ಕೆ ಏರಿದೆ. ಸಂಪರ್ಕದ ಮೂಲಕ 4257 ಜನರಿಗೆ ಸೋಂಕು ತಗಲಿತು. 647 ಗಾಗಿ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 636 ಕ್ಕೆ ಏರಿದೆ.
ಜಿಲ್ಲಾವಾರು ವಿವರ:
ಇಂದು ಹೆಚ್ಚಿನ ಪ್ರಕರಣಗಳು ಮಲಪ್ಪುರಂ ಜಿಲ್ಲೆಯಲ್ಲಿವೆ. ಮಲಪ್ಪುರಂ 910 ಮಂದಿಗೆ ಸೋಂಕು ಬಾಧಿಸಿದೆ. ಕೋಝಿಕ್ಕೋಡ್ 772, ಎರ್ನಾಕುಳಂ 598, ತ್ರಿಶೂರ್ 533, ತಿರುವನಂತಪುರ 516, ಕೊಲ್ಲಂ 378, ಆಲಪ್ಪುಳ 340, ಕಣ್ಣೂರು 293, ಪಾಲಕ್ಕಾಡ್ 271, ಕೊಟ್ಟಾಯಂ 180, ಕಾಸರಗೋಡು 120, ವಯನಾಡ್ 51, ಪತ್ತನಂತಿಟ್ಟು 32, ಇಡುಕ್ಕಿ 28 ಎಂಬಂತೆ ಸೋಂಕು ಬಾಧಿಸಿದೆ.
ಕೋವಿಡ್ ಬಾಧಿಸಿ ಚಿಕಿತ್ಸೆಗೆ ಒಳಗಾಗಿದ್ದ 7469 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರಂ 1670, ಕೊಲ್ಲಂ 627, ಪತ್ತನಂತಿಟ್ಟು 182, ಆಲಪ್ಪುಳ 338, ಕೊಟ್ಟಾಯಂ 200, ಇಡಕ್ಕಿ 53, ಎರ್ನಾಕುಲಂ 978, ತ್ರಿಶೂರ್ 1261, ಪಾಲಕ್ಕಾಡ್ 347, ಮಲಪ್ಪುರಂ 298, ಕೋಝಿಕ್ಕೋಡ್ 1022, ವಯನಾಡ್ 128, ಕಣ್ಣೂರು 72, ಕಾಸರಗೋಡು 293 ಎಂಬಂತೆ ಫಲಿತಾಂಶಗಳು ನೆಗೆಟಿವ್ ಆಗಿದೆ.
ಇಂದು 21 ಕೋವಿಡ್ ಮೃತ್ಯು:
ಇಂದು, ಕೋವಿಡ್ ಕಾರಣದಿಂದ 21 ಮೃತ್ಯು ರಾಜ್ಯಾದ್ಯಂತ ಸಂಭವಿಸಿದೆ. ತಿರುವನಂತಪುರ ಇಡವದ ರಮಾಭಾಯ್ (54), ಕಾಂಜಿರಂಪಾರಾದ ಇಂದಿರಾ ದೇವಿ (66), ಪುನ್ನೈಕ್ಕಮುಗಲ್ ನ ಸ್ನೇಹಲತಾ ದೇವಿ (53), ವಡಕ್ಕೇವಿಲದಿಂದ ರಹಮತ್ (64), ಕೊಲ್ಲಂ, ಪೆರುಮಾನ್‍ನಿಂದ ಶಿವಪ್ರಸಾದ್ (70), ಎರ್ನಾಕುಳಂ ಸೌತ್ ನ ಖದೀಜಾ(74), ಇಡಕ್ಕೊಚ್ಚಿಯ ಲಕ್ಷ್ಮೀ(77), ಮಾಲಿಯಲ್ ಕ್ಕೆರೆಯ ಶ್ರೀಮತಿ ಪ್ರಕಾಶನ್ (75), ತುರಾವೂರಿನ ಸಿ.ಎಸ್. ಫೆÇೀರ್ಟ್ ಕೊಚ್ಚಿ ಮೂಲದ ಬೆನ್ನಿ (53); ತ್ರಿಶೂರ್‍ನ ಒಲ್ಲೂರ್‍ನ ಹಮ್ಸಾ (86), ತೃಶೂರ್ ಒಲ್ಲೂರ್ ನ ಒಮಾನಾ (63), ಪಡಕ್ಕಾಕ್ಕೋಟ್ ಖಾದರ್ ಖಾಜಿ(86), ವೆಳ್ಳರಕ್ಕುಳಂ ನ ಅಬ್ದುಲ್ ಖಾದರ್(67), ಮಲಪ್ಪುರಂ ಅರಿಯಕ್ಕೋಡ್ ನ ಆಯಿಷಾ ಕುಟ್ಟಿ(72), ಆನಕ್ಕಯಂ ನ ಮರಿಯಮ್ಮ(55), ಕೋಝಿಕ್ಕೋಡ್ ನ ಪುತ್ತೂರ್ ನಿವಾಸಿ ಅಬೂಬಕರ್(65), ಮೋಲೂರ್ ನ ಯಾಸಿರ್ ಅರಾಫತ್ (35), ಪಾಯಿಪ್ರಂ ನ ರಾಮಕೃಷ್ಣನ್ (73), ವಡಗರದ ಶ್ರೀಮೋಳ್(73), ಕಣ್ಣೂರ್ ಆಲಕ್ಕೋಡ್ ನ ಕ್ವಾರಮ್ಮ ಜೋಯ್(63), ಕಾಸರಗೋಡು ಕುಂಬಳೆ ಟಿ.ಕೆ.ಸೋಮನ್(63) ಎಂಬವರು ಮೃತಪಟ್ಟವರಾಗಿದ್ದಾರೆ. ಈ ಮೂಲಕ ಮೃತರಾದವರ ಸಂಖ್ಯೆ 1182 ಕ್ಕೆ ಏರಿಕೆಯಾಗಿದೆ.