HEALTH TIPS

ಕೋವಿದ್ -19- ಕೇರಳದಲ್ಲಿ ಇಂದು 5930 ಮಂದಿಗಳಲ್ಲಿ ಸೋಂಕು-ಕಾಸರಗೋಡು-295

         ತಿರುವನಂತಪುರ: ಕೇರಳದಲ್ಲಿ ಇಂದು 5930 ಮಂದಿಗೆ ಕೋವಿಡ್ ಸೋಂಕು ದೃಢಪಡಿಸಲಾಗಿದೆ. ನಿನ್ನೆ ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಗಳು ಹೆಚ್ಚು ನಡೆದಿರಲಿಲ್ಲ ಎಮದು ತಿಳಿದುಬಂದದೆ.

         ಇಂದು ಸೋಂಕು ದೃಢಪಟ್ಟ ಸೋಂಕಿತರ ಜಿಲ್ಲಾವಾರು ವಿವರ:

   ಕೋಝಿಕ್ಕೋಡ್  869, ಮಲಪ್ಪುರಂ 740, ತ್ರಿಶೂರ್ 697, ತಿರುವನಂತಪುರ 629, ಆಲಪ್ಪುಳ 618, ಎರ್ನಾಕುಳಂ 480, ಕೊಟ್ಟಾಯಂ 382, ಕೊಲ್ಲಂ 343, ಕಾಸರಗೋಡು 295, ಪಾಲಕ್ಕಾಡ್ 288, ಕಣ್ಣೂರ್ 274, ಪತ್ತನಂತಿಟ್ಟು 186, ಇಡುಕ್ಕಿ 94, ವಯನಾಡು 35 ಎಂಖಬಂತೆ ಸೋಂಕು ಬಾಧಿಸಿದೆ.

            ತೀವ್ರತೆ ಕೊನೆಗೊಂಡಿಲ್ಲ: 

     ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಕೇರಳದಲ್ಲಿ ಕಳವಳಗಳು ಮುಂದುವರೆದಿದೆ. ಇಂದು, ಕೋವಿಡ್ 5,930 ಜನರಲ್ಲಿ ದೃಢಪಟ್ಟಿದ್ದು ಈ ಪೈಕಿ 48 ಮಂದಿ ವಿದೇಶಗಳಿಂದ ಮತ್ತು ಇತರ ರಾಜ್ಯಗಳಿಂದ ಬಂದ 86 ಜನರಲ್ಲಿ ಸೋಂಕು ಕಂಡುಬಂದಿದೆ. ಸಂಪರ್ಕದ ಮೂಲಕ 4767 ಜನರಿಗೆ ಸೋಂಕು ತಗಲಿತು. 195 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕಳೆದ 24 ಗಂಟೆಗಳಲ್ಲಿ 38,259 ಮಾದರಿಗಳನ್ನು ಪರೀಕ್ಷಿಸಲಾಯಿತು. ಪ್ರಕರಣಗಳ ಸಂಖ್ಯೆಯ ಹೆಚ್ಚಳದೊಂದಿಗೆ, ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 664 ಕ್ಕೆ ಏರಿದೆ.

           ಕ್ವಾರಂಟೈನ್ ನಲ್ಲಿರುವವರ ವಿವರಗಳು:

   ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2,81,413 ಜನರನ್ನು ಕ್ವಾರಂಟೈನ್  ಮಾಡಲಾಗುತ್ತಿದೆ. 2,53,104 ಮನೆ / ಸಾಂಸ್ಥಿಕ ಸಂಪರ್ಕತಡೆಯಲ್ಲಿ ಮತ್ತು 28,309 ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 3,075 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ, 94,388 ಜನರು 

ಚಿಕಿತ್ಸೆ ಪಡೆಯುತ್ತಿದ್ದಾರೆ. 1,99,634 ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

             ಇಂದು 22 ಸಾವುಗಳು:

     ಆರೋಗ್ಯ ಇಲಾಖೆ ಇಂದು ರಾಜ್ಯದಲ್ಲಿ 22 ಕೋವಿಡ್ ಸಾವುಗಳನ್ನು ದೃಢಪಡಿಸಿದೆ. ತಿರುವನಂತಪುರದ ರಾಜನ್ (45), ಕಳ್ಳಿಯೂರಿನ ಮಾಯಾ (40), ಪೂವಲ್ ನ ರವೀಂದ್ರನ್ (48), ತಟ್ಟತುಮಲಾದ ಒಮಾನಾ (65), ಮನಕ್ಕಾಡ್‍ನ ಕೃಷ್ಣನ್ (89), ತಿರುಚೆಂದೂರಿನ ಪನೀರ್ ಸೆಲ್ವಂ (58) ಕೊಲ್ಲಂ ವಾಡಿಯ ಲೊರೆನ್ಸ್ (62), ಆಲಪ್ಪುಳ  ತಿರುಪುನ್ನಪುಳದ ಖದೀಜಾ ಬೀವಿ (85), ಚಿಂಗೋಲಿಯ ಸುರೇಶ್ ಕುಮಾರ್ (53), ಎರ್ನಾಕುಳಂ ಪಲ್ಲುರುತಿಯ ಖದೀಜಾ ರಶೀದ್ (51), ಪಳಕ್ಕುಳದ ಪರೀದ್ (45), ವಿರವಂ ನ ಅಯ್ಯಪ್ಪನ್ (82) ಇಡುಕ್ಕಿ ಬೈಸಲ್ ವ್ಯಾಲಿಯ ಶಾಜಿ ಥೋಮಸ್(57), ಕೋಝಿಕ್ಕೋಡ್ ಕಲ್ಲಾಯಿಯ ಪಲ್ಲಿಮಾ (93), ಬೇಪೆÇೀರ್‍ನ ಉಮ್ಮರ್ ಕೋಯಾ (63), ಥಾಳ ನ ಮೊೈದು(65), ಕಣ್ಣೂರು ತಾನಾದ ಸುಜಾತಾ (61), ಪಳ್ಳಿಕ್ಕುನ್ನು ನಿವಾಸಿ  ಸಹದೇವನ್ (64), ತಳಿಪರಂಬದ ಮೊಯಿದೀನ್ (74), ಕೊಟ್ಟಿಲಾದ ಅಬ್ಬಾಸ್ (60), ಪಡಕ್ಕುಂಬತ್ ನ ವಿ.ವಿ.ಖದೀಜಾ(85), ತಳಿಪರಂಬದ ಕುಂಞÂ ರಾಮನ್ (83) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,025 ಕ್ಕೆ ಏರಿಕೆಯಾಗಿದೆ.

            ಗುಣಮುಖರಾದವರ ವಿವರಗಳು:

     ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ 7836 ಮಂದಿ ಇಂದು ಸೋಂಕುಮುಕ್ತರಾದರು. ತಿರುವನಂತಪುರ 830, ಕೊಲ್ಲಂ 426, ಪತ್ತನಂತಿಟ್ಟು 151, ಆಲಪ್ಪುಳ 594, ಕೊಟ್ಟಾಯಂ 455, ಇಡುಕ್ಕಿ 29, ಎರ್ನಾಕುಳಂ 1018, ತ್ರಿಶೂರ್ 1090, ಪಾಲಕ್ಕಾಡ್ 444, ಮಲಪ್ಪುರಂ 915, ಕೋಝಿಕ್ಕೋಡ್ 1306, ವಯನಾಡ್ 103, ಕಣ್ಣೂರು 130, ಕಾಸರಗೋಡು 345 ಮಂದಿ ಗುಣಮುಖರಾದರು.  ಇದರೊಂದಿಗೆ 94,388 ಜನರಿಗೆ ಸೋಂಕಿನಲ್ಲಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 1,99,634 ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

           ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ:

     ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದ ಪರಿಸ್ಥಿತಿ ನಿರ್ಣಾಯಕವಾಗಿದೆ. ಸಂಪರ್ಕದ ಪ್ರಕರಣಗಳ ಹೆಚ್ಚಳದೊಂದಿಗೆ, ಸಾವಿನ ಸಂಖ್ಯೆಯ ನಿಯಂತ್ರಣ ಕ್ರಮಗಳಿಗೆ ಹಿನ್ನಡೆಯಾಗಿದೆ. ರೋಗದಿಂದ ಚೇತರಿಸಿಕೊಳ್ಳುವ ಜನರ ಸಂಖ್ಯೆಯಲ್ಲಿ ಹೆಚ್ಚಳದ ಹೊರತಾಗಿಯೂ, ದೈನಂದಿನ ಕೋವಿಡ್ ಅಂಕಿಅಂಶಗಳು ಇನ್ನೂ ಹೆಚ್ಚಿವೆ. ಆರೋಗ್ಯ ಕಾರ್ಯಕರ್ತರಲ್ಲಿ ರೋಗದ ಪ್ರಮಾಣ ಹೆಚ್ಚು ಕಂಡುಬಂದಿದೆ. ಕೋವಿಡ್ ಪ್ರಕರಣಗಳ ಸಂಖ್ಯೆಯು ಹೆಚ್ಚಾದಂತೆ, ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ನಲ್ಲಿರುವ ಜನರ ಸಂಖ್ಯೆಯೂ ಹೆಚ್ಚಿದೆ. ಹಾಟ್‍ಸ್ಪಾಟ್‍ಗಳ ಸಂಖ್ಯೆಯ ಹೆಚ್ಚಳವನ್ನೂ ಮಾಡಲಾಗಿದೆ.

               ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ:

    ನಿಬರ್ಂಧಗಳು ಮತ್ತು ನಿಯಮಗಳು ಮುಂದುವರಿದಂತೆ ದೇಶದಲ್ಲಿ ಕೋವಿಡ್ ಬಾಧಿತರ ಸಂಖ್ಯೆಯೂ ದೇಶವ್ಯಾಪಿಯಾಗಿ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 71 ಲಕ್ಷ ದಾಟಿದೆ. ದೇಶದಲ್ಲಿ 71,20,539 ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಪ್ರಸ್ತುತ 8,61,853 ಸಕ್ರಿಯ ಪ್ರಕರಣಗಳಿವೆ. 61,49,536 ಜನರನ್ನು ಗುಣಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ 1,09,150 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ ಎಂದು ಬೊಟ್ಟುಮಾಡಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries