ತಿರುವನಂತಪುರ: ರಾಜ್ಯದಲ್ಲಿಂದು 6,591 ಮಂದಿಗೆ ಸೋಂಕು ಪಾಸಿಟಿವ್ ಆಗಿರುವುದುದಾಗಿ ಸರ್ಕಾರ ತಿಳಿಸಿದೆ. 7,375 ಜನರನ್ನು ಗುಣಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಇಂತಿದೆ.
ಪಾಸಿಟಿವ್-ಜಿಲ್ಲಾವಾರು ವಿವರ:
ತ್ರಿಶೂರ್ ಜಿಲ್ಲೆಯಲ್ಲಿ ಇಂದು ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯ 896 ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ಕೋಝಿಕ್ಕೋಡ್ 806, ಮಲಪ್ಪುರಂ 786, ಎರ್ನಾಕುಳಂ 644, ಆಲಪ್ಪುಳ 592, ಕೊಲ್ಲಂ 569, ಕೊಟ್ಟಾಯಂ 473, ತಿರುವನಂತಪುರ 470, ಪಾಲಕ್ಕಾಡ್ 403, ಕಣ್ಣೂರು 400, ಪತ್ತನಂತಿಟ್ಟು 248, ಕಾಸರಗೋಡು 145, ವಯನಾಡ್ 87, ಇಡುಕ್ಕಿ 72 ಎಂಬಂತೆ ಸೋಂಕು ಬಾಧಿಸಿದೆ.
ಗುಣಮುಖರಾದವರ ವಿವರ:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7375 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 360, ಕೊಲ್ಲಂ 746, ಪತ್ತನಂತಿಟ್ಟು 301, ಆಲಪ್ಪುಳ 286, ಕೊಟ್ಟಾಯಂ 404, ಇಡಕ್ಕಿ 85, ಎರ್ನಾಕುಳಂ 974, ತ್ರಿಶೂರ್ 760, ಪಾಲಕ್ಕಾಡ್ 271, ಮಲಪ್ಪುರಂ 1093, ಕೋಝಿಕ್ಕೋಡ್ 1029, ವಯನಾಡ್ 113, ಕಣ್ಣೂರು 544, ಕಾಸರಗೋಡು 409 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 91,922 ಜನರಿಗೆ ಈ ರೋಗ ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‍ನಿಂದ ಈವರೆಗೆ 2,60,243 ಜನರನ್ನು ಗುಣಪಡಿಸಲಾಗಿದೆ.
24 ಕೋವಿಡ್ ಮೃತ್ಯು:
ಇಂದು, ಕೋವಿಡ್ ಸೋಂಕಿನಿಂದ 24 ಸಾವುಗಳು ದೃಢಪಟ್ಟಿದೆ. ತಿರುವನಂತಪುರದ ಜೆ. ನೇಷಯ್ಯನ್ (85), ಪುಖಳನಾಟ್ ನ ಶ್ರೀಕುಮಾರನ್ ನಾಯರ್ (56), ಕುಳತೂರ್‍ನ ಶಿವಪ್ರಸಾದ್ (25), ವೇದೀವಚ್ಚನ್ ಕೋವಿಲ್ ನ ಕೆ. ಕುಂಞÂ ಶಂಕರನ್(80), ವಲಿಯತುರದ ಲುಶಾಸ್(50), ಪತ್ತನಂತಿಟ್ಟು ಕೊನ್ನಿಯ ಪುಷ್ಪಾಂಗದನ್ (64), ಆಲಪ್ಪುಳದ ಫಿಲಿಪ್ ಅಬ್ರಹಾಂ (50), ಪಾಂಡನಾಡ್‍ನ ಮುಹಮ್ಮದ್ ಕುಂಞÂ (85), ಎರ್ನಾಕುಳಂನ ಕಾರ್ಮಲಿ(68), ತ್ರಿಶೂರ್‍ನ ಬೋಬಿ(86), ತೃಶೂರ್ ಕೋಟಕ್ಕರದ ರೋಸಿ (65), ಇರಿಂಞಲಕುಡದ ಬೇಬಿ ರಾಜನ್ (57), ಕೈಪರಂಬುವಿನ ಸರೋಜಾಕ್ಷನ್ (82), ಚೆನ್ನೈಪಾರದ ವರದರಾಜ್ (76), ಪರವತ್ತನದ ಕೆ.ಕೆ. ಪಾಲ್ (70), ಮಲಪ್ಪುರಂ ನಡವಟ್ಟಂ ನ ಮೊಹಮ್ಮದ್ (97), ವಾಲಂಚೇರಿಯ ಬೀಯುಮ್ಮ (85), ಕರುವರಕ್ಕುನ್ನುವಿನ ಕರುಪ್ಪನ್(75), ಕಣ್ಣೂರು ಪುಳ್ಳಿಕ್ಕರದ ಸುಲೈಮಾನ್(63), ಮುಳಿಪ್ಪಿಲಂಗಾಡ್ ನ ವಿ.ಅಲಿ(69), ತಾನಾದ ಮೊಹಮ್ಮದ್ ಅಪ್ಸಲ್ (59), ಕರಿವೆಳ್ಳೂರಿನ ಸುರೇಶ್ (42) ಎಂಬವರು ಕೋವಿಡ್ ಸೋಂಕಿನಿಂದ ಮೃತಪಟ್ಟವರಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1206 ಕ್ಕೆ ಏರಿಕೆಯಾಗಿದೆ.
ಕೋವಿಡ್ ಟು ಪೃಥ್ವಿರಾಜ್:
ಮಲಯಾಳಂ ಚಿತ್ರನಟ ಪೃಥ್ವಿರಾಜ್‍ಗೆ ಕೋವಿಡ್ ಖಚಿತವಾಗಿದೆ. ಹೊಸ ಚಿತ್ರ ಜನಗಮನಮನ ಚಿತ್ರೀಕರಣ ಕೊಚ್ಚಿಯಲ್ಲಿ ನಡೆಯುತ್ತಿತ್ತು. ಏತನ್ಮಧ್ಯೆ, ಕೋವಿಡ್ ದೃಢಪಟ್ಟಿದೆ. ಚಿತ್ರದ ನಿರ್ದೇಶಕ ಡಿಜೊ ಜೋಸ್ ಆಂಟನಿ ಅವರನ್ನೂ ಕೋವಿಡ್ ಖಚಿತಪಡಿಸಿದ್ದಾರೆ. ಇದರೊಂದಿಗೆ ಶೂಟಿಂಗ್ ನಿಲ್ಲಿಸಲಾಗಿದೆ ಮತ್ತು ಸೂರಜ್ ವೆಂಜರಮ್ಮುಡು ಸೇರಿದಂತೆ ನಟ-ನಟಿಯರು ಸಂಪರ್ಕತಡೆಯನ್ನು ಪ್ರವೇಶಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಕೋವಿಡ್ ವಿವರಗಳು:
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 145 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಸಂಪರ್ಕ ಮೂಲಕ 141 ಮಂದಿಗೆ ಸೋಂಕು ತಗುಲಿದೆ. ಇತರ ರಾಜ್ಯಗಳಿಂದ ಆಗಮಿಸಿದ ಮೂವರಿಗೆ ಮತ್ತು ವಿದೇಶದಿಂದ ಬಂದ ಒಬ್ಬರಿಗೆ ರೋಗ ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಮಟ್ಟದ ಗಣನೆ
ಕಾಸರಗೋಡು ನಗರಸಭೆ 23, ಮಧೂರು ಪಂಚಾಯತ್ 2, ಪುತ್ತಿಗೆ ಪಂಚಾಯತ್ 2, ಮುಳಿಯಾರು ಪಂಚಾಯತ್ 10, ಮೊಗ್ರಾಲ್ ಪುತ್ತೂರು ಪಂಚಾಯತ್ 3, ಮೀಂಜ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 6, ಕುತ್ತಿಕೋಲು ಪಂಚಾಯತ್ 2, ಕುಂಬಳೆ ಪಂಚಾಯತ್ 1, ಕುಂಬ್ಡಾಜೆ ಪಂಚಾಯತ್ 1, ಕಾರಡ್ಕ ಪಂಚಾಯತ್ 3, ಚೆಂಗಳ ಪಂಚಾಯತ್ 6, ಚೆಮ್ನಾಡ್ ಪಂಚಾಯತ್ 10, ಬೇಡಡ್ಕ ಪಂಚಾಯತ್ 15, ಕಾಞಂಗಾಡ್ ನಗರಸಭೆ 3, ಉದುಮಾ ಪಂಚಾಯತ್ 5, ಪಿಲಿಕೋಡ್ ಪಂಚಾಯತ್ 5, ಪಳ್ಳಿಕ್ಕರೆ ಪಂಚಾಯತ್ 2, ಪಡನ್ನ ಪಂಚಾಯತ್ 4, ಮಡಿಕೈ ಪಂಚಾಯತ್ 2, ಕಳ್ಳಾರ್ ಪಂಚಾಯತ್ 2, ಚೆರುವತ್ತೂರು ಪಂಚಾಯತ್ 4, ಅಜಾನೂರು ಪಂಚಾಯತ್ 4, ಬಳಾಲ್ ಪಂಚಾಯತ್ 9, ನೀಲೇಶ್ವರ ನಗರಸಭೆ 5, ತ್ರಿಕರಿಪುರ ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 1, ಪನತ್ತಡಿ ಪಂಚಾಯತ್ 4, ಕೋಡೋಂ ಬೇಳೂರು ಪಂಚಾಯತ್ 4, ಕಿನಾನೂರು-ಕರಿಂದಳಂ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 1 ಮಂದಿಗೆ ಪಾಸಿಟಿವ್ ಆಗಿದೆ.
409 ಮಂದಿಗೆ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 409 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 13887 ಮಂದಿಗೆ ರೋಗಮುಕ್ತಿ ಲಭಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 18, ಮಧೂರು ಪಂಚಾಯತ್ 8, ವರ್ಕಾಡಿ ಪಂಚಾಯತ್ 5, ಪೈವಳಿಕೆ ಪಂಚಾಯತ್ 2, ಮುಳಿಯಾರು ಪಂಚಾಯತ್ 3, ಮೊಗ್ರಾಲ್ ಪುತ್ತೂರು ಪಂಚಾಯತ್ 6, ಮೀಂಜ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 17, ಕುತ್ತಿಕೋಲು ಪಂಚಾಯತ್ 5, ಕುಂಬಳೆ ಪಂಚಾಯತ್ 7, ಕುಂಬಡಾಜೆ ಪಂಚಾಯತ್ 1, ಕಾರಡ್ಕ ಪಂಚಾಯತ್ 3, ಎಣ್ಮಕಜೆ ಪಂಚಾಯತ್ 2, ದೇಲಂಪಾಡಿ ಪಂಚಾಯತ್ 5, ಚೆಂಗಳ ಪಂಚಾಯತ್ 19, ಚೆಮ್ನಾಡ್ ಪಂಚಾಯತ್ 19, ಬೇಡಡ್ಕ ಪಂಚಾಯತ್ 12, ಬದಿಯಡ್ಕ ಪಂಚಾಯತ್ 16, ಕಾಞಂಗಾಡ್ ನಗರಸಭೆ 24, ಉದುಮಾ ಪಂಚಾಯತ್ 3, ಪಿಲಿಕೋಡ್ ಪಂಚಾಯತ್ 2, ಪನತ್ತಡಿ ಪಂಚಾಯತ್ 15, ಪಳ್ಳಿಕ್ಕರೆ ಪಂಚಾಯತ್ 36, ಪಡನ್ನ ಪಂಚಾಯತ್ 7, ಮಡಿಕೈ ಪಂಚಾಯತ್ 9, ಕಳ್ಳಾರ್ ಪಂಚಾಯತ್ 2, ಬಳಾಲ್ ಪಂಚಾಯತ್ 8, ಅಜಾನೂರು ಪಂಚಾಯತ್ 57, ನೀಲೇಶ್ವರ ಪಂಚಾಯತ್ 9, ವೆಸ್ಟ್ ಏಳೇರಿ ಪಂಚಾಯತ್ 3, ವಲಿಯಪರಂಬ ಪಂಚಾಯತ್ 14, ತ್ರಿಕರಿಪುರ ಪಂಚಾಯತ್ 10, ಪುಲ್ಲೂರು ಪೆರಿಯ ಪಂಚಾಯತ್ 36, ಕೋಡೋಂ-ಬೇಳೂರು ಪಂಚಾಯತ್ 3, ಕಿನಾನೂರು-ಕರಿಂದಳಂ ಪಂಚಾಯತ್ 5, ಈಸ್ಟ್ ಏಳೇರಿ ಪಂಚಾಯತ್ 5 ಮಂದಿಗೆ ನೆಗೆಟಿವ್ ಆಗಿದೆ.
ನಿಗಾ:
ಕಾಸರಗೋಡು ಜಿಲ್ಲೆಯಲ್ಲಿ 4535 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3639 ಮಂದಿ, ಸಾಂಸ್ಥಿಕವಾಗಿ 896 ಮಂದಿ ನಿಗಾದಲ್ಲಿರುವರು. ನೂತನವಾಗಿ 204 ಮಂದಿ ನಿಗಾ ಪ್ರವೇಶಿಸಿದ್ದಾರೆ. 275 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1957 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 290 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಮರಣ ಸಂಖ್ಯೆ 162:
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 162ಕ್ಕೇರಿರುವುದಾಗಿ ಆರೋಗ್ಯ ಇಲಾಖೆ ಖಚಿತಪಡಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಮಧೂರು ಗ್ರಾಮ ಪಂಚಾಯತ್ ನ ಬಿಫಾತಿಮಾ(72), ಅಜಾನೂರು ಗ್ರಾಮ ಪಂಚಾಯತ್ ನ ಅಬ್ದುಲ್ ಖಾದರ್ ಅಹಮ್ಮದ್(60) ಅವರ ಮರಣ ಕೋವಿಡ್ ನಿಂದ ಸಂಭವಿಸಿದೆ ಎಂದು ಖಚಿತಪಡಿಸಲಾಗಿದೆ.
ಈಗ ಕಾಸರಗೋಡು ಜಿಲ್ಲೆಯಲ್ಲಿ 2841 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 2370 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.