ಮುಂಬೈ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನದ ಬೇಡಿಕೆ ಶೇಕಡಾ 19 ರಷ್ಟು ಇಳಿದು 892.3 ಟನ್‌ಗಳಿಗೆ ತಲುಪಿದೆ, ಇದು 2009 ರ ಮೂರನೇ ತ್ರೈಮಾಸಿಕದ ನಂತರದ ಅತ್ಯಂತ ಕಡಿಮೆ ಬೇಡಿಕೆಯಾಗಿದೆ,. ಕೊರೋನಾವೈರಸ್ ಪ್ರೇರಿತ ಲಾಕ್ ಡೌನ್ ಕಾರಣ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ವರದಿಯಲ್ಲಿ ತಿಳಿಸಿದೆ.
ಡಬ್ಲ್ಯುಜಿಸಿಯ ಮೂರನೇ ತ್ರೈಮಾಸಿಕ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿಯ ಪ್ರಕಾರ, ಜುಲೈ-ಸೆಪ್ಟೆಂಬರ್ 2019 ರ ಅವಧಿಯಲ್ಲಿ ಒಟ್ಟು ಜಾಗತಿಕ ಬೇಡಿಕೆ 1,100.2 ಟನ್ ಆಗಿತ್ತು.ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ ಬೇಡಿಕೆ ಕುಸಿದರೂ, ಹೂಡಿಕೆಯಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಜಾಗತಿಕವಾಗಿ ಹೂಡಿಕೆದಾರರು 222.1 ಟನ್ ಚಿನ್ನದ ಬಾರ್ ಮತ್ತು ನಾಣ್ಯಗಳನ್ನು ಮತ್ತು ಚಿನ್ನದ ಇಟಿಎಫ್‌ಗಳ ಮೂಲಕ (ವಿದ್ಯುನ್ಮಾನ ವಹಿವಾಟು ನಿಧಿಗಳು) ಹೆಚ್ಚುವರಿ 272.5 ಟನ್‌ಗಳನ್ನು ಖರೀದಿಸಿದ್ದರಿಂದ ಒಟ್ಟಾರೆ ಹೂಡಿಕೆಶೇಕಡಾ 21 ರಷ್ಟು ಏರಿಕೆಯಾಗಿ 494.6 ಟನ್‌ಗಳಿಗೆ ತಲುಪಿದೆ.
ಒಂದು ವರ್ಷದಲ್ಲಿ ಚಿನ್ನದ ಇಟಿಎಫ್‌ಗಳು ತಮ್ಮ ಹಿಡುವಳಿಗಳನ್ನು 1,003.3 ಟನ್‌ಗಳಷ್ಟು ಹೆಚ್ಚಿಸಿವೆ ಎಂದು ಅದು ಹೇಳಿದೆ. 2019 ರ ಮೂರನೇ ತ್ರೈಮಾಸಿಕದಲ್ಲಿ, ಒಟ್ಟಾರೆ ಹೂಡಿಕೆಯ ಬೇಡಿಕೆ 408.1 ಟನ್ ಆಗಿದ್ದು, ಅದರಲ್ಲಿ 149.4 ಟನ್ ಬಾರ್ ಮತ್ತು ನಾಣ್ಯಗಳಿಗೆ ಮತ್ತು 258.7 ಟನ್ ಇಟಿಎಫ್‌ಗೆ ಇತ್ತು. ಆದಾಗ್ಯೂ, ಅನೇಕ ಮಾರುಕಟ್ಟೆಗಳಲ್ಲಿ ಮುಂದುವರಿದ ಸಾಮಾಜಿಕ ಅಂತರ ನಿರ್ಬಂಧಗಳ ಕಾರಣ , ಆರ್ಥಿಕ ಕುಸಿತ ಮತ್ತು ಅನೇಕ ಕರೆನ್ಸಿಗಳಲ್ಲಿ ದಾಖಲೆಯ ಹೆಚ್ಚಿನ ಚಿನ್ನದ ಬೆಲೆ ಆಭರಣ ಖರೀದಿದಾರರ ಮೇಲೆ ಪ್ರಭಾವ ಬೀರಿದೆ.
ಆಭರಣಗಳ ಬೇಡಿಕೆಯು ಶೇಕಡಾ 333 ಟನ್‌ಗಳಿಗೆ ಇಳಿಕೆಯಾಗಿದೆ. "ಕೋವಿಡ್ ಪ್ರಭಾವವು ವಿಶ್ವದಾದ್ಯಂತ ಚಿನ್ನದ ಮಾರುಕಟ್ಟೆ ಮೇಲೆ ಇನ್ನೂ ಪ್ರಭಾವ ಬೀರುತ್ತಿದೆ. ಅನೇಕ ಮಾರುಕಟ್ಟೆಗಳಲ್ಲಿ ಮುಂದುವರಿದ ಸಾಮಾಜಿಕ ನಿರ್ಬಂಧಗಳ ಲಾಕ್‌ಡೌನ್‌ಗಳ ಆರ್ಥಿಕ ಪರಿಣಾಮ ಮತ್ತು ಅನೇಕ ದೇಶಗಳಲ್ಲಿ ಹೆಚ್ಚಾದ ಚಿನ್ನದ ಬೆಲೆ ಈ ಕುಸಿತಕ್ಕೆ ಕಾರಣವಾಗಿದೆ. "ಎಂದು ವಿಶ್ವ ಚಿನ್ನದ ಮಂಡಳಿಯ ಮಾರುಕಟ್ಟೆ ಇಂಟೆಲಿಜೆನ್ಸ್ ಲೂಯಿಸ್ ಸ್ಟ್ರೀಟ್ ಹೇಳಿದ್ದಾರೆ.
ಹೂಡಿಕೆದಾರರ ಮನಸ್ಥಿತಿ ನೋಡುವಾಗ ಈ ತ್ರೈಮಾಸಿಕದಲ್ಲಿ ಡಬ್ಲ್ಯುಜಿಸಿ ಚಿನ್ನದ ಬೆಂಬಲಿತ ಇಟಿಎಫ್‌ಗಳಿಗೆ ಮತ್ತಷ್ಟು ದಾಖಲೆಯ ಒಳಹರಿವು ಕಂಡಿದೆ ಚಿಲ್ಲರೆ ಹೂಡಿಕೆದಾರರಿಗೆ ಸುರಕ್ಷಿತ ತಾಣವಾಗಿ ಚಿನ್ನವಿರಿವಿರುವುದು ಅಷ್ಟೇ ಉತ್ತೇಜನಕಾರಿಯಾಗಿದೆ, ಏಕೆಂದರೆ ಜನರು ಮಾರುಕಟ್ಟೆಗಳಲ್ಲಿ ಸ್ಥಿರತೆಯನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳೀದ್ದಾರೆ.