HEALTH TIPS

ಕೋವಿಡ್-19ಗೆ ನಿರ್ದಿಷ್ಟವಾದ ಲಸಿಕೆಗೆ ನಾವು ಕಾಯುತ್ತಾ ಕೂರಬಾರದು: ಲಸಿಕೆ ತಜ್ಞೆ ಡಾ ಗಗನ್ ದೀಪ್ ಕಾಂಗ್

      ಕೋವಿಡ್-19 ಇತರ ಕೊರೋನಾ ವೈರಸ್ ಗಿಂತ ಕಡಿಮೆ ಅಪಾಯಕಾರಿಯಾಗಿದ್ದು ಅದಕ್ಕೆ ನಾವು ಸೂಕ್ತ ಲಸಿಕೆ ಕಂಡುಹಿಡಿದರೆ ಜನಸಂಖ್ಯೆಯಲ್ಲಿ ಶೇಕಡಾ 50 ಅಥವಾ ಅದಕ್ಕಿಂತಲೂ ಹೆಚ್ಚು ರೋಗಕ್ಕೆ ತುತ್ತಾಗುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಸೂಕ್ಷ್ಮ ಜೀವಶಾಸ್ತ್ರಜ್ಞೆ ಮತ್ತು ಲಸಿಕೆ ವಿಜ್ಞಾನಿ ಡಾ ಗಗಂದೀಪ್ ಕಾಂಗ್ ಹೇಳುತ್ತಾರೆ.

      ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಹಿರಿಯ ಪತ್ರಕರ್ತೆ ಕಾವೇರಿ ಬಮ್ಜೈ ಅವರ ಜೊತೆಗೆ ನಡೆಸಿದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಲವು ವಿಷಯಗಳನ್ನು ಹಂಚಿಕೊಂಡರು.
ಕೋವಿಡ್-19 ಸಾಂಕ್ರಾಮಿಕ ಜಗತ್ತಿಗೆ ಹಬ್ಬಿ ಆರು ತಿಂಗಳ ಮೇಲಾಗಿದೆ. ಮುಂದೆ ಹೋಗಲು ನಾವು ಕಲಿತುಕೊಂಡ ವಿಷಯಗಳೇನು?
     -ಈ ವೈರಸ್ ಬೇರೆ ವೈರಸ್ ಗಳಂತೆ ಹೆಚ್ಚು ಅಪಾಯಕಾರಿಯಲ್ಲ. ಸೋಂಕಿಗೆ ಒಳಗಾದವರೆಲ್ಲರೂ ಅಪಾಯದ ಮಟ್ಟಕ್ಕೆ ಹೋಗುತ್ತಾರೆ, ಸಾಯುತ್ತಾರೆ ಎಂದೇನಿಲ್ಲ. SARS ಮತ್ತು MERS ಗೆ ಹೋಲಿಸಿದರೆ ಕೊರೋನಾ ವೈರಸ್ ಅಷ್ಟು ಅಪಾಯಕಾರಿಯಲ್ಲ. ಇಲ್ಲಿ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಕಡಿಮೆಯಾಗಿದೆ. ಇದನ್ನು ಹೀಗೆ ಎಂದು ನಾವು ಪೂರ್ವ ನಿರ್ಧಾರ ಅಥವಾ ಪೂರ್ವ ಆಲೋಚನೆ ಮಾಡಲು ಸಾಧ್ಯವಿಲ್ಲ.ಯಾವ ವಯಸ್ಸಿನವರು ಸೋಂಕಿಗೆ ತುತ್ತಾಗುತ್ತಾರೆ ಎಂದು ನಿರ್ಧರಿಸಲು ಕೂಡ ಸಾಧ್ಯವಿಲ್ಲ.

ಕೋವಿಡ್-19 ಲಸಿಕೆ ಯಾವಾಗ ಸಿಗಬಹುದು?
      ಸದ್ಯ ಮೂರ್ನಾಲ್ಕು ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿದ್ದು ಇವುಗಳು ಕೊರೋನಾ ವಿರುದ್ಧ ಗೆಲ್ಲಲು ಸಹಾಯವಾಗುತ್ತದೆಯೇ ಎಂದು ನೋಡಬೇಕಿದೆ. ಒಂದೆರಡು ಲಸಿಕೆಗಳು ಉತ್ತಮ ಫಲಿತಾಂಶ ನೀಡಿದರೆ ಈ ವರ್ಷಾಂತ್ಯಕ್ಕೆ ಸಿಗಬಹುದು. ಆದರೆ ಸಾಕಷ್ಟು ಲಸಿಕೆ ಸಿಕ್ಕಿ ಅದು ಎಲ್ಲರಿಗೂ ವಿತರಣೆಯಾಗಲು 2021ರ ಮಧ್ಯಭಾಗವಾಗಬಹುದು.

ಲಸಿಕೆ ಸುರಕ್ಷಿತವಾಗಿ, ಪರಿಣಾಮಕಾರಿಯಾಗಿ ಸಿಗಬೇಕೆಂದು ಸಾಮಾನ್ಯ ಜನರು ಬಯಸುತ್ತಿದ್ದರೆ, ಭಾರತ ಸೇರಿದಂತೆ ಬೇರೆ ದೇಶಗಳಲ್ಲಿ ಸಾಕಷ್ಟು ರಾಜಕೀಯ ಒತ್ತಡವಿದೆ. ಇದನ್ನು ಹೇಗೆ ಸಮತೋಲನ ಮಾಡಬಹುದು?
    -ಕೋವಿಡ್-19ಗೆ ನಿರ್ದಿಷ್ಟವಾದ ಲಸಿಕೆ ಸಿಗುವುದು ಕಷ್ಟ. ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ, ಯುಎಸ್ ಎಫ್ ಡಿಎ ಮತ್ತು ಭಾರತೀಯ ಡ್ರಗ್ ಪ್ರಾಧಿಕಾರ, ಲಸಿಕೆ ಶೇಕಡಾ 50ರಷ್ಟು ಜನರ ಮೇಲೆ ಪ್ರಯೋಗ ಮಾಡಿದರೆ ಯಶಸ್ವಿಯಾಗಬೇಕು ಎಂದು ಹೇಳುತ್ತಿದೆ. ಶೇಕಡಾ 70ರಿಂದ 80ರಷ್ಟು ಪರಿಣಾಮಕಾರಿಯಾಗುವ ಲಸಿಕೆಯನ್ನು ಕಂಡುಹಿಡಿಯಬಹುದು. ಹೀಗಾಗಿ ನಾವು ಕೋವಿಡ್-19 ಗೆ ನಿರ್ದಿಷ್ಟ ಲಸಿಕೆಗಾಗಿ ಕಾಯುತ್ತಾ ಕುಳಿತುಕೊಳ್ಳಬಾರದು ಎಂದು ನನ್ನ ಅನಿಸಿಕೆ.

ಹೆಚ್ ಐವಿಯಂತಹ ರೋಗಗಳಿಗೆ ದಶಕಗಳ ನಂತರವೂ ಲಸಿಕೆ ಬಂದಿಲ್ಲ. ಅದು ಕೋವಿಡ್-19 ವಿಷಯದಲ್ಲಿಯೂ ಹಾಗೆಯೇ ಆಗಬಹುದೇ?
   -ಹೆಚ್ ಐವಿ ವಿಷಯದಲ್ಲಿ, ಲಸಿಕೆ ಇಲ್ಲ, ಏಕೆಂದರೆ ಅದು ಪ್ರತಿರಕ್ಷಣಾ ಕೋಶಗಳು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸುತ್ತದೆ, ಅದು SARS CoV-2 ನ ವಿಷಯದಲ್ಲಿ ಹಾಗಿಲ್ಲ. ಇದು ಸ್ವಯಂ ನಿರೋಧಕ ಶಕ್ತಿಯನ್ನು ಹೊಂದಿಸುತ್ತದೆಯೇ ಹೊರತು ರೋಗ ನಿರೋಧಕ ಶಕ್ತಿಯನ್ನು ರೂಪಿಸುವ ಕೋಶಗಳಿಗೆ ಹೋಗಿ ಸೋಂಕು ತರುವುದಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries