HEALTH TIPS

ಕೋವಿಡ್-19: ಮುಂದಿನ ಎರಡೂವರೆ ತಿಂಗಳು ಅತ್ಯಂತ ನಿರ್ಣಾಯಕ: ಹರ್ಷವರ್ಧನ್

         ನವದೆಹಲಿ: ದೇಶದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಭಾರತದಲ್ಲಿ ಕೊರೋನಾ ಸೋಂಕು ಪ್ರಸರಣಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ಮುಂದಿನ ಎರಡೂವರೆ ತಿಂಗಳು ಅತ್ಯಂತ ನಿರ್ಣಾಯಕವಾಗಿರಲಿದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

        ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕೌನ್ಸಿಲ್ ಫಾರ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಗಳ ಮುಖ್ಯಸ್ಥರು/ನಿರ್ದೇಶಕರೊಂದಿಗೆ ಕೋವಿಡ್-19 ಸೂಕ್ತ ನಡವಳಿಕೆ ಕುರಿತು ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹರ್ಷವರ್ಧನ್ ಅವರು, ಭಾರತದಲ್ಲಿ ಕೊರೋನಾ ವೈರಸ್  ಸೋಂಕು ನಿಯಂತ್ರಣ ಸಂಬಂಧ ಮುಂದಿನ ಎರಡೂವರೆ ತಿಂಗಳು ಅತ್ಯಂತ ನಿರ್ಣಾಯಕವಾಗಿರಲಿದೆ. ಚಳಿಗಾಲ ಮತ್ತು ಸರಣಿ ಹಬ್ಬಗಳ ಕಾರಣದಿಂದಾಗಿ ಮುಂದಿನ ಎರಡೂವರೆ ತಿಂಗಳುಗಳು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕವಾಗಲಿವೆ. ನಾವು ಹೆಚ್ಚು ಮುಂಜಾಗ್ರತೆ ವಹಿಸಿ ನಮ್ಮನ್ನು  ನಾವು ರಕ್ಷಿಸಿಕೊಂಡರೆ ಇದರಿಂದ ಕೋವಿಡ್ ವಾರಿಯರ್ಸ್ ಗಳನ್ನೂ ರಕ್ಷಿಸಿದಂತೆ. ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

        ಮಾಸ್ಕ್ ಧರಿಸುವುದು, ಕೈ ಮತ್ತು ಉಸಿರಾಟದ ಶಿಷ್ಟಾಚಾರಗಳನ್ನು ಅನುಸರಿಸುವುದು ಮುಖ್ಯ. ಸಾಮಾಜಿಕ ಅಂತರ ಪಾಲನೆ ಮೂಲಕ ಸೋಂಕು ಹತ್ತಿರ ಬಾರದಂತೆ ನೋಡಿಕೊಳ್ಳಬಹುದು. ಕೋವಿಡ್-19 ಚಿಕಿತ್ಸೆಯಲ್ಲಿ ಭಾರತವು ನಿರಂತರವಾಗಿ ಹೊಸ ಮೈಲಿಗಲ್ಲುಗಳನ್ನು ದಾಖಲಿಸುತ್ತಿದೆ ಎಂದು ಹೇಳಿದರು. "ನಮ್ಮ  ಚೇತರಿಕೆಯ ಪ್ರಮಾಣವು ವಿಶ್ವದಲ್ಲೇ ಅತಿ ಹೆಚ್ಚು ಮತ್ತು ಸಾವು ನೋವು ಅತ್ಯಂತ ಕಡಿಮೆ. ಸಕ್ರಿಯ ಪ್ರಕರಣಗಳು ನಿರಂತರವಾಗಿ ಕ್ಷೀಣಿಸುತ್ತಿವೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries