HEALTH TIPS

ಕೋವಿಡ್ 19 ಚಿಕಿತ್ಸೆಯ ಹೆಸರಿನಲ್ಲಿ ಸುಳ್ಳು ಪ್ರಚಾರ; ಗ್ಲೂಕೋಸ್ ದ್ರಾವಣದ ಮಾರಾಟದ ಮೇಲೆ ನಿರ್ಬಂಧ!

  

          ಕೋಝಿಕ್ಕೋಡ್:  ಗ್ಲೂಕೋಸ್ ದ್ರಾವಣವನ್ನು  ಮೂಗಿಗೆ ಸುರಿಯುವುದರ ಮೂಲಕ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂಬ ಬಲವಾದ ಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಔಷಧ ನಿಯಂತ್ರಣ ಇಲಾಖೆ ಕ್ರಮ ಕೈಗೊಂಡಿದೆ. ಕೋಝಿಕ್ಕೋಡ್ ಕೊಯಿಲಾಂಡಿ ತಾಲ್ಲೂಕಿನಲ್ಲಿ, ಸಣ್ಣ ಬಾಟಲಿಗಳಲ್ಲಿ ಗ್ಲೂಕೋಸ್ ದ್ರಾವಣದ ಮಾರಾಟವನ್ನು ಔಷಧ ನಿಯಂತ್ರಣ ಘಟಕದ ಅಧಿಕಾರಿಗಳು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.

        ಶೇಕಡಾ 25 ರಷ್ಟು ಮಾತ್ರ ಗ್ಲೂಕೋಸ್ ಹೊಂದಿರುವ ಡೆಕ್ಸ್ಟ್ರೋಸ್ 25 ಔಷಧಿಯನ್ನು ಸಣ್ಣ ಬಾಟಲಿಗಳನ್ನು  ತೆರೆದು ಪುಟ್ಟ ಬಾಟಲಿಗಳಿಗೆ ತುಂಬಿಸಿ ಔಷಧ-ಪರವಾನಗಿ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಔಷಧ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಗ್ಲೂಕೋಸ್ ದ್ರಾವಣವನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

      ಇಎನ್‍ಟಿ ತಜ್ಞ ಮತ್ತು ಕೊಯಿಲಾಂಡಿಯ ಆರೋಗ್ಯ ವಿಭಾಗದ ಮಾಜಿ ಉಪನಿರ್ದೇಶಕ ಡಾ.ಇ.ಸುಕುಮಾರನ್ ಅವರು ಹೊಸತೊಂದು ವಾದವನ್ನು ಮಂಡಿಸಿದ್ದು, ಅವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರಗೊಂಡು ಬಳಿಕ ಈ ಪ್ರದೇಶದಲ್ಲಿ ಗ್ಲೂಕೋಸ್ ದ್ರಾವಣದ ಮಾರಾಟ ಹುಲುಸುಗೊಳ್ಳಲು ಕಾರಣವಾಯಿತು ಎಂದು ವರದಿಯಾಗಿದೆ. ದಿನಕ್ಕೆ ಎರಡು ಬಾರಿ ಶೇ. 25 ಗ್ಲೂಕೋಸ್ ಹೊಂದಿರುವ ದ್ರಾವಣವನ್ನು ಚುಚ್ಚುವ ಮೂಲಕ ಕೋವಿಡ್ ನ್ನು ತಡೆಯಬಹುದು ಎಂದು ಅವರು ಹೇಳಿದ್ದರೆಂದು ತಿಳಿದುಬಂದಿದೆ. ಅವರ ಆವಿಷ್ಕಾರವನ್ನು ಐಸಿಎಂಆರ್ ಅನುಮೋದಿಸಿದೆ ಎಂಬ ಅವರ ಹೇಳಿಕೆಯನ್ನು ಇತ್ತೀಚೆಗೆ ಸುದ್ದಿ ಮಾಧ್ಯಮಗಳಲ್ಲೂ ವರದಿಮಾಡಲಾಗಿತ್ತು. ಆದರೆ ಆರೋಗ್ಯ ತಜ್ಞರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

      ನಕಲಿ ಔಷಧಿ ಅಭಿಯಾನದ ಬಳಿಕ ಜಿಲ್ಲೆಯಲ್ಲಿ ಗ್ಲೂಕೋಸ್ ದ್ರಾವಣದ ಮಾರಾಟ ಹೆಚ್ಚಿತು ಎಂದು ಆರೋಪಿಸಿ ಆರೋಗ್ಯ ಕಾರ್ಯಕರ್ತರು ಡ್ರಗ್ಸ್ ಕಂಟ್ರೋಲ್ ವಿಭಾಗಕ್ಕೆ ದೂರು ನೀಡಿದ್ದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ತಪಾಸಣೆ ಮುಂದುವರಿಯಲಿದೆ ಎಂದು ವರದಿಯಾಗಿದೆ.

         ಪ್ರಸ್ತುತ ಡಾ. ಸುಕುಮಾರನ್ ಅವರ ವಾದದ  ವಿರುದ್ಧ ಈಗಾಗಲೇ ಅನೇಕ ಆರೋಗ್ಯ ತಜ್ಞರು ಪ್ರತಿಕ್ರಿಯಿಸಿದ್ದಾರೆ.  ಡಾ.ಸುಕುಮಾರನ್ ಅವರ ಹೆಚ್ಚಿನ ವಾದಗಳು ಅವೈಜ್ಞಾನಿಕವೂ ಅಪ್ರಯೋಜನಕಾರಿಯಾದುದು ಮತ್ತು ಕರೋನಾ ವೈರಸ್ನ ಸ್ವರೂಪ ಮತ್ತು ಅವರು ಹೇಳಿಕೊಳ್ಳುವ ಹೊಸ ಚಿಕಿತ್ಸೆಯ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂದು ಗಮನಸೆಳೆದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries