ತಿರುವನಂತಪುರ: ಕೋವಿಡ್ ನಿಯಮಗಳಿಗೆ ಅನುಸಾರ ಆರಾಧನಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಹೊಸ ಮಾನದಂಡವನ್ನು ಪ್ರಕಟಿಸಲಾಗಿದೆ. ಶಬರಿಮಲೆಗೆ ಪ್ರತಿನಿತ್ಯ 250 ಜನರಿಗೆ ತುಲಮಾಸಾ ಪೂಜೆಗೆ ಭೇಟಿ ನೀಡಲು ಅವಕಾಶವಿದೆ. ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶಬರಿಮಲೆ ಸಂದರ್ಶಕರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯವಾಗಿದೆ. ಆಲಯ ಪ್ರವೇಶದ ಮೊದಲು ವಾಹನ ನಿಲುಗಡೆಗೊಳಿಸುವಲ್ಲೇ ಆಂಟಿಜೆನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇತರ ದೇವಾಲಯಗಳಲ್ಲಿ ಒಂದು ಸಮಯದಲ್ಲಿ 20 ಜನರಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು.
ಸಾಮಾನ್ಯ ಸಂದರ್ಭಗಳಲ್ಲಿ, ಎಲ್ಲಾ ಪೂಜಾ ಸ್ಥಳಗಳಲ್ಲಿ ಗರಿಷ್ಠ 20 ಜನರಿಗೆ ಅವಕಾಶ ನೀಡಲಾಗುವುದು. ಹಿಂದೂ ಪೂಜಾ ಸ್ಥಳಗಳಲ್ಲಿ ವಿಶೇಷ ಪೂಜೆಗಳಿಗಾಗಿ, ಆಯಾ ಪೂಜಾ ಸ್ಥಳಗಳ ಸೌಲಭ್ಯಗಳ ಆಧಾರದ ಮೇಲೆ 40 ಜನರಿಗೆ ಅವಕಾಶ ನೀಡಲಾಗುವುದು. ಕೋವಿಡ್ ಮಾನದಂಡಗಳ ಪ್ರಕಾರ ಮುಸ್ಲಿಂ ಮಸೀದಿಗಳಲ್ಲಿ ಶುಕ್ರವಾರ ಪ್ರಾರ್ಥನೆ ಮತ್ತು ಕ್ರಿಶ್ಚಿಯನ್ ಚರ್ಚುಗಳಲ್ಲಿ ಸಂಡೇ ಮಾಸ್‍ಗೆ 40 ಜನರಿಗೆ ಹಾಜರಾಗಲು ಅವಕಾಶ ನೀಡಲು ನಿರ್ಧರಿಸಲಾಗಿದೆ.