ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 190 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ವಿದೇಶಗಳಿಂದ ಆಗಮಿಸಿದ್ದ 7 ಮಂದಿಗೆ, ಇತರ ರಾಜ್ಯಗಳಿಂದ ಬಂದಿದ್ದ 3 ಮಂದಿಗೆ ರೋಗ ಖಚಿತಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮ ದಾಸ್ ತಿಳಿಸಿದರು. ಜೊತೆಗೆ ಐವರು ಮರಣಹೊಂದಿರುವರೆಂದು ಅಧಿಕೃತರು ತಿಳಿಸಿದ್ದಾರೆ. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಾಗಿ 8369 ಮಂದಿಗೆ ಸೋಂಕು ದೃಢಪಡಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಾಗಿ 26 ಮಂದಿ ಮರಣಹೊಂದಿದ್ದಾರೆ.
ಪಾಸಿಟಿವ್ ಆದವರ ಜಿಲ್ಲೆಯ ಪಂಚಾಯತಿವಾರು ಗಣನೆ
ಕಾಸರಗೋಡು ನಗರಸಭೆ 19, ಮಧೂರು ಪಂಚಾಯತ್ 2, ಪುತ್ತಿಗೆ ಪಂಚಾಯತ್ 1, ಮುಳಿಯಾರು ಪಂಚಾಯತ್ 3, ಮಂಜೇಶ್ವರ ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 2, ಕುತ್ತಿಕೋಲು ಪಂಚಾಯತ್ 1, ಕುಂಬಳೆ ಪಂಚಾಯತ್ 1, ಕುಂಬಡಾಜೆ ಪಂಚಾಯತ್ 2, ಕಾರಡ್ಕ ಪಂಚಾಯತ್ 3, ಎಣ್ಮಕಜೆ ಪಂಚಾಯತ್ 8, ಚೆಂಗಳ ಪಂಚಾಯತ್ 8, ಚೆಮ್ನಾಡ್ ಪಂಚಾಯತ್ 9, ಬದಿಯಡ್ಕ ಪಂಚಾಯತ್ 9, ಕಾಞಂಗಾಡ್ ನಗರಸಭೆ 22, ಉದುಮಾ ಪಂಚಾಯತ್ 7, ಪಿಲಿಕೋಡ್ ಪಂಚಾಯತ್ 6, ಪನತ್ತಡಿ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 15, ಪಡನ್ನ ಪಂಚಾಯತ್ 3, ಕಳ್ಳಾರ್ ಪಂಚಾಯತ್ 2, ಅಜಾನೂರು ಪಂಚಾಯತ್ 19, ನೀಲೇಶ್ವರ ನಗರಸಭೆ 28, ವೆಸ್ಟ್ ಏಳೇರಿ ಪಂಚಾಯತ್ 1, ವಲಿಯಪರಂಬ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 13, ಕಿನಾನೂರು-ಕರಿಂದಳಂ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 8 ಮಂದಿಗೆ ಪಾಸಿಟಿವ್ ಆಗಿದೆ.
ನೆಗೆಟಿವ್ ವಿವರ:
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 247 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 1, ಮಧೂರು ಪಂಚಾಯತ್ 5, ಪುತ್ತಿಗೆ ಪಂಚಾಯತ್ 5, ಮುಳಿಯಾರು ಪಂಚಾಯತ್ 3, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಮಂಜೇರ್ಸವರ ಪಂಚಾಯತ್ 85, ಮಂಗಲ್ಪಾಡಿ ಪಂಚಾಯತ್ 6, ಕುಂಬಳೆ ಪಂಚಾಯತ್ 7, ಚೆಂಗಳ ಪಂಚಾಯತ್ 6, ಚೆಮ್ನಾಡ್ ಪಂಚಾಯತ್ 10, ಬೇಡಡ್ಕ ಪಂಚಾಯತ್ 1, ಬದಿಯಡ್ಕ ಪಂಚಾಯತ್ 7, ಕಾಞಂಗಾಡ್ ನಗರಸಭೆ 30, ಉದುಮಾ ಪಂಚಾಯತ್ 17, ಪಿಲಿಕೋಡ್ ಪಂಚಾಯತ್ 7, ಪನತ್ತಡಿ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 5, ಪಡನ್ನ ಪಂಚಾಯತ್ 1, ಮಡಿಕೈ ಪಂಚಾಯತ್ 6, ಕಳ್ಳಾರ್ ಪಂಚಾಯತ್ 1, ಬಳಾಲ್ ಪಂಚಾಯತ್ 2, ಅಜಾನೂರು ಪಂಚಾಯತ್ 6, ನೀಲೇಶ್ವರ ನಗರಸಭೆ 13, ವಲಿಯಪರಂಬ ಪಂಚಾಯತ್ 4, ತ್ರಿಕರಿಪುರ ಪಂಚಾಯತ್ 8, ಪುಲ್ಲೂರು-ಪೆರಿಯ ಪಂಚಾಯತ್ 5, ಕಯ್ಯೂರು-ಚೀಮೇನಿ ಪಂಚಾಯತ್ 22, ಈಸ್ಟ್ ಏಳೇರಿ ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
4672 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 4672 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ 3724 ಮಂದಿ, ಸಾಂಸ್ಥಿಕವಾಗಿ 948 ಮಂದಿ ನಿಗಾದಲ್ಲಿರುವರು. ನೂತನವಾಗಿ 436 ಮಂದಿ ನಿಗಾ ಪ್ರವೇಶಿಸಿದ್ದಾರೆ. 299 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 1319 ಮಂದಿಯ ಸ್ಯಾಂಪಲ್ ನೂತನವಾಗಿ ತಪಾಸಣೆಗೆ ಕಳುಹಿಸಲಾಗಿದೆ. 365 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
5 ಮಂದಿಯ ಮರಣ:
ಕೋವಿಡ್ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 5 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಅಜಾನೂರು ಪಂಚಾಯತ್ ನ ಅಬ್ದುಲ್ ರಹಮಾನ್(76), ಕಾಸರಗೋಡು ನಗರಸಭೆಯ ಶಾಂಭವಿ(64), ಡಾ. ಸತೀಶ್(66), ಕುತ್ತಿಕೋಲು ಪಂಚಾಯತ್ ನ ಚೋಮು(63), ಪಳ್ಳಿಕ್ಕರೆ ಪಂಚಾಯತ್ ನ ರುಖಿಯಾ(51) ಈ ರೀತಿ ಮೃತಪಟ್ಟವರು ಎಂದು ತಿಳಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಈ ವರೆಗೆ ಒಟ್ಟು 167 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ಇಂದಿನ ಕೋವಿಡ್ ಮಾಹಿತಿ:
ರಾಜ್ಯಾದ್ಯಂತ 8369 ಮಂದಿಗೆ ಸೋಂಕು ದೃಢಪಡಿಸಲಾಗಿದೆ. ಎರ್ನಾಕುಳಂ 1190, ಕೋಝಿಕ್ಕೋಡ್ 1158, ತೃಶೂರ್ 946, ಆಲಪ್ಪುಳ 820, ಕೊಲ್ಲಂ 742, ಮಲಪ್ಪುರಂ 668, ತಿರುವನಂತಪುರ 657, ಕಣ್ಣೂರು 566, ಕೋಟ್ಟಯಂ 526, ಪಾಲಕ್ಕಾಡ್ 417, ಪತ್ತನಂತಿಟ್ಟು 247, ಕಾಸರಗೋಡು 200, ವಯಡ್ 132, ಇಡುಕ್ಕಿ 100 ಎಮಬಂತೆ ಸೋಂಕು ಬಾಧಿಸಿದೆ.