ದುಬೈ: ಐಪಿಎಲ್ 13ನೇ ಆವೃತ್ತಿಯ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10 ರನ್ ಗಳಿಂದ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ತಂಡ ನಿಗದಿತ ಓವರ್ ನಲ್ಲಿ ರಾಹುಲ್ ತ್ರಿಪಾಟಿ(81) ಅದ್ಭುತ ಬ್ಯಾಟಿಂಗ್ ನೆರವಿನಿಂದ 167 ರನ್ ಪೇರಿಸಿತು.
ಕೊಲ್ಕತ್ತಾ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ನಿಗದಿತ ಓವರ್ ನಲ್ಲಿ 157 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಮೂಲಕ 10 ರನ್ ಗಳಿಂದ ಕೊಲ್ಕತ್ತಾಗೆ ಶರಣಾಯಿತು.
ಕೊಲ್ಕತ್ತಾ ಪರ ರಾಹುಲ್ ತ್ರಿಪಾಠಿ 81, ಸುನಿಲ್ ನರೈನ್ 17, ಪಾಟ್ ಕಮಿನ್ಸ್ 17 ರನ್ ಬಾರಿಸಿದ್ದಾರೆ. ಚೆನ್ನೈ ಪರ ಬೌಲಿಂಗ್ ನಲ್ಲಿ ಡ್ವೈನ್ ಬ್ರಾವೋ 3, ಕರ್ಣ್ ಶರ್ಮಾ ಮತ್ತು ಸಾನ್ ಕುರಾನ್ ತಲಾ 2 ವಿಕೆಟ್ ಪಡೆದಿದ್ದಾರೆ.
ಚೆನ್ನೈ ಪರ ಶೇನ್ ವಾಟ್ಸನ್ 50, ಅಂಬಟ್ಟಿ ರಾಯುಡು 30 ಮತ್ತು ರವೀಂದ್ರ ಜಡೇಜಾ ಅಜೇಯ 21 ರನ್ ಸಿಡಿಸಿದ್ದಾರೆ.