ಅಬುದಾಬಿ: ಇಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ವೃತ್ತಿಯ ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಏಳು ರನ್ ಗಳ ಜಯ ದಾಖಲಿಸಿದೆ. ಇದರಿಡನೆ ಎಂಎಸ್ ಧೋನಿ ನಾಯಕತ್ವದ ಚೆನ್ನೈಗೆ ಸತತ ಮೂರನೇ ಸೋಲಿನ ಅನುಭವವಾಗಿದೆ.
ಗೆಲುವಿಗಾಗಿ 165 ರನ್ ಗುರಿ ಪಡೆದಿದ್ದ ಚೆನ್ನೈ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.ಕ್ಯಾಪ್ಟನ್ ಧೋನಿ (47), ರವೀಂದ್ರ ಜಡೇಜ (50) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರೂ ಸೋಲಿನ ದವಡೆಯಿಂದ ತಂಡವನ್ನು ಪಾರುಮಾಡಲು ಸಾಧ್ಯವಾಗಿಲ್ಲ/
ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಹೈದರಾಬಾದ್ ನಿಗದಿತ ಓವರ್ ಗಳಲ್ಲಿ5 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತ್ತು.
ಹೈದರಾಬಾದ್ ಪರ ಪ್ರಿಯಮ್ ಗರ್ಗ್ ಆಕರ್ಷಕ ಅರ್ಧ ಶತಕ (51) ರನ್ ಗಳಿಸಿದ್ದರು. ಇದಲ್ಲದೆ ಡೇವಿಡ್ ವಾರ್ನರ್ (28), ಮನೀಶ್ ಪಾಂಡೆ (29), ಅಭಿಷೇಕ್ ಶರ್ಮಾ (31) ರನ್ ಗಳಿಸಿದ್ದರು.
ಚೆನ್ನೈ ಪರ ದೀಪಕ್ ಚಹಾರ್ 2, ಶಾರ್ದೂಲ್ ಠಾಕೂರ್, ಪಿಯೂಶ್ ಚಾವ್ಲಾ ತಲಾ ಒಂದು ವಿಕೆಟ್ ಪಡೆದಿದ್ದರೆ ಹೈದರಾಬಾದ್ ಪರ ನಟರಾಜನ್ ಎರಡು ವಿಕೆಟ್ ಗಳಿಸಿದ್ದರು.