ದುಬೈ: ಐಪಿಎಲ್ 13ನೇ ಆವೃತ್ತಿಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡ 69 ರನ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿತ್ತು. ಹೈದರಾಬಾದ್ ನೀಡಿದ 202 ರನ್ ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 132 ರನ್ ಗಳಿಗೆ ಆಲೌಟ್ ಆಯಿತು.
ಹೈದರಾಬಾದ್ ಪರ ಜಾನಿ ಬ್ರೈಸ್ಟೋವ್ 97, ಡೇವಿಡ್ ವಾರ್ನರ್ 52, ಕೇನ್ ವಿಲಿಯಮ್ಸನ್ ಅಜೇಯ 20 ರನ್ ಸಿಡಿಸಿದ್ದಾರೆ. ಪಂಜಾಬ್ ಪರ ಬೌಲಿಂಗ್ ನಲ್ಲಿ ರವಿ ಬಿಷ್ನೋಯಿ 3, ಆರ್ಷ್ ದೀಪ್ ಸಿಂಗ್ 2 ವಿಕೆಟ್ ಪಡೆದಿದ್ದಾರೆ.
ಪಂಜಾಬ್ ಪರ ಬ್ಯಾಟಿಂಗ್ ನಲ್ಲಿ ನಿಕೋಲಸ್ ಪೂರನ್ 77, ಕೆಎಲ್ ರಾಹುಲ್ 11 ರನ್ ಸಿಡಿಸಿದ್ದಾರೆ. ಹೈದರಾಬಾದ್ ಪರ ಬೌಲಿಂಗ್ ನಲ್ಲಿ ರಶೀದ್ ಖಾನ್ 3, ಖಲೀಲ್ ಅಹ್ಮದ್ ಮತ್ತು ತಂಗರಸೂ ನಟರಾಜನ್ ತಲಾ 2 ವಿಕೆಟ್ ಪಡೆದಿದ್ದಾರೆ.