ಸ್ಟಾಕ್ ಹೋಮ್: ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರಕ್ಕಾಗಿ 2020ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರಕ್ಕೆ ರಾಬರ್ಟ್ ವಿಲ್ಸನ್ ಮತ್ತು ಪೌಲ್ ಮಿಲ್‌ಗ್ರಾಮ್ ಭಾಜನರಾಗಿದ್ದಾರೆ.
ಅಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ತವಾಗಿ ನೀಡುವ ಅರ್ಥಶ್ತ್ರಾದ ಸ್ವೆರಿಜಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿಗೆ ರಾಬರ್ಟ್ ಮತ್ತು ಪೌಲ್ ಪೌಲ್ ಮಿಲ್‌ಗ್ರಾಮ್ ಭಾಜನರಾಗಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಟ್ವೀಟ್ ಮಾಡಿದೆ.
ಪೌಲ್ ಮಿಲ್ ಗ್ರಾಮ್ ಹರಾಜಿಗೆ ಸಂಬಂಧಪಟ್ಟಂತೆ ಸಾಮಾನ್ಯ ಸಿದ್ಧಾಂತವನ್ನು ರೂಪಿಸಿದ್ದಾರೆ. ಇನ್ನು ರಾಬರ್ಟ್ ವಿಲ್ಸನ್ ತರ್ಕಬದ್ಧ ಬಿಡ್ ದಾರರು ಸಾಮಾನ್ಯ ಮೌಲ್ಯದ ತಮ್ಮದೇ ಆದ ಅತ್ಯುತ್ತಮ ಅಂದಾಜಿಗಿಂತ ಕಡಿಮೆ ಏಕೆ ಬಿಡ್ ಮಾಡುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಹೀಗಾಗಿ ಈ ಇಬ್ಬರಿಗೂ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ಸಮಿತಿ ಟ್ವೀಟ್ ಮಾಡಿದೆ.
1969ರಿಂದ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದುವರೆಗೂ 51 ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗಿದೆ.