HEALTH TIPS

ಫ್ಯಾಷನ್ ಗೋಲ್ಡ್ ಹಗರಣ- 2.38 ಕೋಟಿ ರೂ ಪಾವತಿಸಲು ಜಿ.ಎಸ್.ಟಿ. ನೋಟೀಸ್

           ಕಾಸರಗೋಡು: ನಿಗದಿತ ದಿನಾಂಕದ ನಂತರವೂ ತೆರಿಗೆ ಪಾವತಿಸದಿರುವುದರಿಂದ ಜಿಎಸ್‍ಟಿ ಇಲಾಖೆ ಫ್ಯಾಷನ್ ಗೋಲ್ಡ್ ಜುವೆಲ್ಲರಿ ಅಧಿಕೃತರಿಗೆ ಎರಡನೇ ನೋಟಿಸ್ ನೀಡಿದೆ. ಫ್ಯಾಶನ್ ಗೋಲ್ಡ್ ಕಾಸರಗೋಡು ಮತ್ತು ಚೆರ್ವತ್ತೂರು ಶಾಖೆಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

         ಫ್ಯಾಶನ್ ಗೋಲ್ಡ್ ನ ಎರಡು ಶಾಖೆಗಳಲ್ಲಿ 1.41 ಕೋಟಿ ವಂಚಿಸಲಾಗಿದೆ. ಹೊಸ ನೋಟಿಸ್‍ನಲ್ಲಿ ಶೇಕಡಾ 25 ರಷ್ಟು ದಂಡ ಮತ್ತು ಬಡ್ಡಿಯೊಂದಿಗೆ 2.38 ಕೋಟಿ ರೂ. ಪಾವತಿಸಲು ಸೂಚಿಸಲಾಗಿದೆ.

       ಏತನ್ಮಧ್ಯೆ, ಹೂಡಿಕೆ ವಂಚನೆಗೆ ಸಂಬಂಧಿಸಿದಂತೆ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ನಿರ್ದೇಶಕರ ವಿರುದ್ಧ ದೂರು ನೀಡಲು ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಪೂಕೋಯಾ ಮುಂದಾಗಿದ್ದಾರೆ. ಪಯ್ಯನ್ನೂರು ಶಾಖೆಯಿಂದ ಐದೂವರೆ ಕಿಲೋ ಚಿನ್ನ, ರತ್ನ ಮತ್ತು 50 ಲಕ್ಷ ರೂ. ಕಳ್ಳಸಾಗಣೆ ಮಾಡಲಾಗಿದೆ ಎಂದು ಕಣ್ಣೂರು ಎಸ್‍ಪಿಗೆ ದೂರು ನೀಡಲಾಗಿದೆ. ಹೂಡಿಕೆ ಹಗರಣದಲ್ಲಿ ಪೂಕೋಯಾ ತಂಙಲ್ ಅವರು ಶಾಸಕ ಕಮರುದ್ದೀನ್ ಅವರ ಪಾರ್ಟ್‍ನರ್ ಆಗಿದ್ದಾರೆ. 

        ಕಳೆದ ನವೆಂಬರ್‍ನಲ್ಲಿ ಪಯ್ಯನ್ನೂರು ಶಾಖೆಯನ್ನು ನಾಲ್ಕು ನಿರ್ದೇಶಕರಿಗೆ ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸಲಾಗಿತ್ತು. ಇದರ ಮರೆಯಲ್ಲಿ ಚಿನ್ನ ಕಳ್ಳಸಾಗಣೆ ಮಾಡಲಾಗಿದೆ. ಮೂವತ್ತು ನೌಕರರು ಇದರಲ್ಲಿ ಒಳಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಭರಣ ವಂಚನೆಗೆ ಸಂಬಂಧಿಸಿದಂತೆ ಪ್ರಸ್ತುತ 86 ವಂಚನೆ ಪ್ರಕರಣಗಳು ಮಂಜೇಶ್ವರ ಶಾಸಕನ ಮೇಲೆ ದಾಖಲಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries