ಕಾಸರಗೋಡು: ಅತ್ಯುತ್ತಮ ಶುಚಿತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಕ್ಕಾಗಿ ಜಿಲ್ಲೆಯ 23 ಗ್ರಾ.ಪಂ.ಗಳಿಗೆ ರಾಜ್ಯಮಟ್ಟದ ಪದವಿ ನಿನ್ನೆ ಕೊಡಮಾಡಲಾಯಿತು. ಪೈವಳಿಕೆ, ಪುತ್ತಿಗೆ, ದೇಲಂಪಾಡಿ, ಕುತ್ತಿಕೋಲು, ಪಳ್ಳಿಕ್ಕರೆ, ಮಡಿಕೈ, ಬೇಡಡ್ಕ, ಕೋಡೋಂ-ಬೇಲೂರು, ಈಸ್ಟ್ ಏಳೇರಿ, ವೆಸ್ಟ್ ಏಳೇರಿ, ಕಯ್ಯೂರು-ಚೀಮೇನಿ, ಪನತ್ತಡಿ, ತ್ರಿಕರಿಪುರ, ಪಿಲಿಕೋಡ್, ಪುಲ್ಲೂರು-ಪೆರಿಯ, ಕಳ್ಳಾರ್, ಅಜಾನೂರು, ಚೆರುವತ್ತೂರು, ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ಗಳ, ನೀಲೇಶ್ವರ, ಕಾಞಂಗಾಡ್ ನಗರಸಭೆಗಳ, ಕಾಞಂಗಾಡ್ ಬ್ಲೋಕ್ ಪಂಚಾಯತ್ ನ ಶುಚಿತ್ವ ಪದವಿಯ ಘೋಷಣೆ ಈ ವೇಳೆ ನಡೆದಿದೆ.
ಪೈವಳಿಕೆ:
ಈ ಸಮಾರಂಭ ಸಂಬಂಧ ಪೈವಳಿಕೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಭಾರತಿ ಶೆಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಸುನಿತಾ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಗೆ ಲಭಿಸಿದ್ದ ಅರ್ಹತಾಪತ್ರ , ಫಲಕವನ್ನು ಕಾಸರಗೋಡು ಬ್ಲೋಕ್ ಜೋಯಿಂಟ್ ಬಿ.ಡಿ.ಒ. ನೂತನ ಕುಮಾರಿ ಪಂಚಾಯತ್ ಅಧ್ಯಕ್ಷೆಗೆ ಹಸ್ತಾಂತರಿಸಿದರು. ಸದಸ್ಯರಾದ ಎಂ.ಕೆ.ಅಮೀರ್, ಫಾತಿಮತ್ ಸುಹರಾ, ಚನಿಯ ಕೊಮ್ಮಂಗಳ, ಬಶೀರ್ ದೇವಕಾನ ಮೊದಲಾದವರು ಉಪಸ್ಥಿತರಿದ್ದರು.
ಪುತ್ತಿಗೆ:
ಪುತ್ತಿಗೆಯಲ್ಲಿ ಈ ಸಂಬಂಧ ಶನಿವಾರ ಜರುಗಿದ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ ಜೆ.ಅರುಣಾ ಉದ್ಘಾಟಿಸಿದರು. ಉಪಾಧ್ಯಕ್ಷ ಪಿ.ಬಿ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಗೆ ಲಭಿಸಿದ ಅರ್ಹತಾಪತ್ರ ಮತ್ತು ಫಲಕವನ್ನು ಮಂಜೇಶ್ವರ ಬಿ.ಡಿ.ಒ. ಎನ್.ಸುರೇಂದ್ರನ್ ಹಸ್ತಾಂತರಿಸಿದರು. ಸದಸ್ಯರಾದ ಪ್ರದೀಪ್ ಕುಮಾರ್, ಪಿ.ಎ.ಚನಿಯ, ಜಯಂತಿ, ವೈ.ಶಾಂತಿ, ಇ.ಕೆ.ಮುಹಮ್ಮದ್ ಕುಂuಟಿಜeಜಿiಟಿeಜ, ನಫೀಝಾ, ಚಂದ್ರಾವತಿ, ಅಬ್ದುಲ್ಲ ಮುಗು, ಕಾರ್ಯದರ್ಶಿ ಹರೀಶ್, ಸಹಾಯಕ ಕಾರ್ಯದರ್ಶಿ ಥಾಮಸ್ ಮೊದಲಾದವರು ಉಪಸ್ಥಿತರಿದ್ದರು.