ನವದೆಹಲಿ: ಭಾರತದಲ್ಲಿ ಮಂಗಳವಾರ 61,267 ಮಂದಿಯಲ್ಲಿ ಕೊರೋನಾ ಸೋಂಂಕು ದೃಢಪಟ್ಟಿದ್ದು, 884 ಮಂದಿ ಬಲಿಯಾಗಿದ್ದಾರೆ. ಸಾಮಾನ್ಯವಾಗಿ ದೇಶದಲ್ಲಿ ಪ್ರತೀನಿತ್ಯ 70ರಿಂದ 80 ಸಾವಿರ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ, ಹಲವು ದಿನಗಳ ಬಳಿಕ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
61,267 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 66,85,083ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಒಂದೇ ದಿನ 884 ಮಂದಿ ಸಾವನ್ನಪ್ಪುವುದರೊಂದಿಗೆ ದೇಶದಲ್ಲಿ ಈ ವರೆಗೂ ಮಹಾಮಾರಿ ವೈರಸ್ 1,03,569 ಮಂದಿ ಬಲಿ ಪಡೆದುಕೊಂಡಿದೆ.
ಪ್ರಸ್ತುತ 66,85,083 ಮಂದಿ ಒಟ್ಟು ಸೋಂಕಿತರ ಪೈಕಿ 56,62,491 ಮಂದಿ ಗುಣಮುಖರಾಗಿದ್ದು, ದೇಶದಲ್ಲಿನ್ನೂ 9,19,023 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.