ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 257 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 130 ಮಂದಿ ಗುಣಮುಖರಾಗಿದ್ದಾರೆ. 241 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ 6 ಮಂದಿ ಹಾಗು ವಿದೇಶದಿಂದ ಬಂದ 10 ಮಂದಿಗೆ ರೋಗ ಬಾಧಿಸಿದೆ. ಇದು ವರೆಗೆ 94 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಪಾಸಿಟಿವ್ ಆದವರ ಪಂಚಾಯತಿವಾರು ವಿವರ:
ಕಾಸರಗೋಡು ನಗರಸಭೆ 32, ಮಧೂರು ಪಂಚಾಯತ್ 14, ಕುಂಬಳೆ ಪಂಚಾಯತ್ 6, ಮಂಗಲ್ಪಾಡಿ ಪಂಚಾಯತ್ 13, ಮಂಜೇಶ್ವರ ಪಂಚಾಯತ್ 4, ಮೀಂಜ ಪಂಚಾಯತ್ 2, ಕುಂಬಡಾಜೆ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 8, ಚೆಂಗಳ ಪಂಚಾಯತ್ 8, ದೇಲಂಪಾಡಿ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 9, ಬದಿಯಡ್ಕ ಪಂಚಾಯತ್ 11, ಎಣ್ಮಕಜೆ ಪಂಚಾಯತ್ 1, ಪುತ್ತಿಗೆ ಪಂಚಾಯತ್ 1, ವರ್ಕಾಡಿ ಪಂಚಾಯತ್ 3, ಪೈವಳಿಕೆ ಪಂಚಾಯತ್ 2, ಮೀಂಜ ಪಂಚಾಯತ್ 2, ಮೊಗ್ರಾಲ್ ಪುತ್ತೂರು ಪಂಚಾಯತ್ 3, ಮುಳಿಯಾರು ಪಂಚಾಯತ್ 1, ಕಾಞಂಗಾಡ್ ನಗರಸಭೆ 15, ಅಜಾನೂರು ಪಂಚಾಯತ್ 26, ಬಳಾಲ್ ಪಂಚಾಯತ್ 1, ಬೇಡಡ್ಕ ಪಂಚಾಯತ್ 18, ಚೆರುವತ್ತೂರು ಪಂಚಾಯತ್ 1, ಕಳ್ಳಾರ್ ಪಂಚಾಯತ್ 3, ಮಡಿಕೈ ಪಂಚಾಯತ್ 4, ಉದುಮಾ ಪಂಚಾಯತ್ 6, ನೀಲೇಶ್ವರ ನಗರಸಭೆ 12, ಪುಲ್ಲೂರು-ಪೆರಿಯ ಪಂಚಾಯತ್ 9, ಪಿಲಿಕೋಡ್ ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 3, ವಲಿಯಪರಂಬ ಪಂಚಾಯತ್ 3, ವೆಸ್ಟ್-ಏಳೇರಿ ಪಂಚಾಯತ್ 5, ಕೋಡೋಂ-ಬೇಳೂರು ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1, ಬಳಾಲ್ ಪಂಚಾಯತ್ 1,ಕರಿವೆಳ್ಳೂರು ಪೇರಳಂ ಪಂಚಾಯತ್ 1 ಮಂದಿಗೆ ಪಾಸಿಟಿವ್ ಆಗಿದೆ.
130 ಮಂದಿಗೆ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 130 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನೆಗೆಟಿವ್ ಆದವರ ಪಂಚಾಯತಿವಾರು ವಿವರ:
ಕಾಸರಗೋಡು ನಗರಸಭೆ 17, ಮಧೂರು ಪಂಚಾಯತ್ 4, ಕುಂಬಳೆ ಪಂಚಾಯತ್ 5, ಪುತ್ತಿಗೆ ಪಂಚಾಯತ್ 4, ಕುತ್ತಿಕೋಲು ಪಂಚಾಯತ್ 1, ಮುಳಿಯಾರು ಪಂಚಾಯತ್ 1, ಕುಂಬಡಾಜೆ ಪಂಚಾಯತ್ 1, ವರ್ಕಾಡಿ ಪಂಚಾಯತ್ 1, ಬದಿಯಡ್ಕ ಪಂಚಾಯತ್ 3, ಚೆಮ್ನಾಡ್ ಪಂಚಾಯತ್ 6, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಚೆಂಗಳ ಪಂಚಾಯತ್ 5, ಮಂಜೇಶ್ವರ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 2,
ಕಾಞಂಗಾಡ್ ನಗರಸಭೆ 15, ಪಿಲಿಕೋಡ್ ಪಂಚಾಯತ್ 2, ಅಜಾನೂರು ಪಂಚಾಯತ್ 12, ಮಡಿಕೈ ಪಂಚಾಯತ್ 2, ಪಡನ್ನ ಪಂಚಾಯತ್ 2, ಬಳಾಲ್ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 4, ಉದುಮಾ ಪಂಚಾಯತ್ 6, ಕೋಡೋಂ-ಬೇಳೂರು ಪಂಚಾಯತ್ 1, ವಲಿಯಪರಂಬ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 3, ಕಿನಾನೂರು-ಕರಿಂದಳಂ ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1 ಮಮದಿಗೆ ಕೋವಿಡ್ ನೆಗೆಟಿವ್ ಆಗಿದೆ.
4607 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 4607 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 3340 ಮಂದಿ ಮನೆಗಳಲ್ಲಿ, 1267 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 335 ಮಂದಿ ನಿಗಾ ಪ್ರವೇಶಿಸಿದ್ದಾರೆ. 214 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 815 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 217 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು 11991 ಮಂದಿಗೆ ಕೋವಿಡ್ ಪಾಸಿಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 11991 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 10648 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. 755 ಮಂದಿ ವಿದೇಶಗಳಿಂದ, 588 ಮಂದಿ ಇತರ ರಾಜ್ಯಗಳಿಂದ ಬಂದವರು.
8545 ಮಂದಿಗೆ ಈ ವರೆಗ ಒಟ್ಟು ಕೋವಿಡ್ ನೆಗೆಟಿವ್ ಆಗಿದೆ. 3352 ಮಂದಿ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 94 ಆಗಿದೆ.