ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 278 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ಸಂದರ್ಭದಲ್ಲಿ 193 ಮಂದಿ ಗುಣಮುಖರಾಗಿದ್ದಾರೆ. 271 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಸೋಂಕಿತರಲ್ಲಿ ಮೂವರು ವಿದೇಶದಿಂದ ಹಾಗು ನಾಲ್ಕು ಮಂದಿ ಇತರ ರಾಜ್ಯಗಳಿಂದ ಬಂದವರು. ಇಂದು 189 ಜನರನ್ನು ಗುಣಪಡಿಸಲಾಗಿದೆ.
ಜಿಲ್ಲೆಯಲ್ಲಿ 4607 ನಿರೀಕ್ಷಣೆಯಲ್ಲಿದ್ದು ಹೊಸದಾಗಿ 275 ಮಂದಿಯನ್ನು ಸೇರಿಸಲಾಗಿದೆ. 217 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನೂ ಪಡೆಯಬೇಕಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ ಒಟ್ಟು 1785 ಮಾದರಿಗಳನ್ನು ಇಂದು ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯ 12269 ಜನರಲ್ಲಿ ಕೋವಿಡ್ 19 ದೃಢಪಡಿಸಲಾಗಿದೆ. ಇವರಲ್ಲಿ 8734 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ ಇದುವರೆಗೆ 99 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 3436 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ ಪಂಚಾಯತಿವಾರು ವಿವರ:
ಅಜನೂರ್ - 15, ಬಳಾಲ್ - 5, ಬೇಡಡ್ಕ - 9, ಚೆಮ್ಮನಾಡ್ - 15, ಚೆಂಗಳ - 6, ಚೆರ್ವತ್ತೂರು-15, ದೇಲಂಪಾಡಿ - 2, ಎಣ್ಮಕಜೆ - 9, ಎರಾಮ- ಕುಟ್ಟಿಯೂರ್ - 1 (ಕಣ್ಣೂರು ಜಿಲ್ಲೆ), ಕಳ್ಳಾರ್ - 3, ಕಾಞಂಗಾಡ್ - 12, ಕಾರಡ್ಕ- 2, ಕಾಸರಗೋಡು ನಗರಸಭೆ - 16, ಕಯ್ಯೂರು ಚೀಮೆನಿ - 4, ಕಿನನೂರ್ ಕರಿಂದಳಂ - 8
ಕೋಡೋಂ ಬೆಳ್ಳೂರು-12, ಕುಂಬಳೆ -5, ಕುಟ್ಟಿಕ್ಕೋಲ್- 4, ಮಧೂರು- 9, ಮಡಿಕೈ - 5, ಮಂಗಲ್ಪಾಡಿ - 10, ಮಂಜೇಶ್ವರ - 3, ಮೀಂಜ - 3, ಮೊಗ್ರಾಲ್ ಪುತ್ತೂರು - 3, ಮುಳಿಯಾರ್ - 9, ನೀಲೇಶ್ವರ - 3, ಪೈವಳಿಕೆ - 1, ಪಳ್ಳಿಕ್ಕೆರೆ - 17, ಪನತ್ತಡಿ - 11, ಪಾಪನಶ್ಚೇರಿ- 1 (ಕಣ್ಣೂರು), ಪಿಲಿಕೋಡ್ -13, ಪುಲ್ಲೂರ್ ಪೆರಿಯಾ - 15, ಪುತ್ತಿಗೆ - 1, ತ್ರಿಕ್ಕರಿಪುರ - 9, ಉದುಮ - 7, ವಲಿಯಪರಂಬ - 6, ವೆಸ್ಟ್ ಎಳೇರಿ - 1 ಎಂಬಂತೆ ಸೋಂಕು ಬಾಧಿಸಿದೆ.