ಅರಣ್ಮುಲಾ: ಮಾಜಿ ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಮಿಜೋರಾಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ವಿರುದ್ಧ ಆರ್ಥಿಕ ವಂಚನೆ ಪ್ರಕರಣ ದಾಖಲಾಗಿದೆ. ಸಿ.ಆರ್.ಹರಿಕೃಷ್ಣನ್ ಅವರು ಕುಮ್ಮನಂ ರಾಜಶೇಖರನ್ ಮತ್ತು ಇತರರ ವಿರುದ್ಧ ಬುಧವಾರ ಅರಣ್ಮುಲ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 28.75 ಲಕ್ಷ ರೂ. ವಂಚನೆ ನಡೆಸಿದರೆಮದು ದೂರಲಾಗಿದೆ.
ಪೇಪರ್ ಕಾಟನ್ ಮಿಕ್ಸ್ ಎಂಬ ಕಂಪನಿಯಲ್ಲಿ ಪಾಲುದಾರನಾಗಬಹುದು ಎಂದು ತಿಳಿಸಿ ಹಣವನ್ನು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಪ್ಲಾಸ್ಟಿಕ್ ಮುಕ್ತ ಹತ್ತಿ ಮಿಶ್ರಣ ಬ್ಯಾನರ್‍ಗಳನ್ನು ತಯಾರಿಸುವ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಕಂಪನಿಗೆ ನೀಡಲಾಗಿದ್ದು, ಶೀಘ್ರದಲ್ಲೇ ಇದನ್ನು ಪ್ರಾರಂಭಿಸಲಾಗುವುದು ಎಮದು ಆಶ್ವಾಸನೆ ನೀಡಲಾಗಿತ್ತು. ಕುಮ್ಮನಂ ರಾಜಶೇಖರನ್ ಮತ್ತು ಅವರ ಪಿಎ ಪ್ರವೀಣ್ ಸೇರಿದಂತೆ ಹತ್ತು ಜನರ ವಿರುದ್ಧ ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ಕುಮ್ಮನಂ ನಾಲ್ಕನೇ ಆರೋಪಿ. ಈ ಪ್ರಕರಣದಲ್ಲಿ ಪ್ರವೀಣ್ ಮುಖ್ಯ ಆರೋಪಿಯಾಗಿದ್ದಾನೆ.
ಆರಣ್ಮುಲಾ ಪೆÇಲೀಸರು ಆರೋಪಿಗಳ ವಿರುದ್ಧದ ಆರೋಪಗಳು ವಿಶ್ವಾಸ ವಂಚನೆ ಮತ್ತು ಹಣ ವರ್ಗಾವಣೆ ಕಾನೂನು ವ್ಯಾಪ್ತಿಗೊಳಪಡುತ್ತದೆ ಎಂದು ಹೇಳಿರುವರು. ಹಣ ಪಡೆದಿರುವುದಷ್ಟೇ ಹೊರತು ಕಂಪನಿಯನ್ನು ಪ್ರಾರಂಭಿಸಲು ಯಾವುದೇ ಕ್ರಮಗಳು ಈವರೆಗೆ ಕಂಡುಬಂದಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆ ಬಳಿಕ ಹಲವು ಬಾರಿ ಕುಮ್ಮನಂ ಮತ್ತು ಪ್ರವೀಣ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದರೂ ಸ್ಪಷ್ಟ ಉತ್ತರಗಳಾಗಲಿ, ಹಣ ಹಿಂತಿರುಗಿಸುವುದಾಗಲೀ ಮಾಡಿಲ್ಲ ಎಂದು ದೂರಲ್ಲಿ ತಿಳಿಸಲಾಗಿದೆ.
ಕುಮ್ಮನಂ ರಾಜಶೇಖರನ್ ಅವರ ಪಿಎ ಪ್ರವೀಣ್ ಅವರ ವಿವಾಹದಂದು ಕುಮ್ಮನಂ ರಾಜಶೇಖರನ್ ಅವರು ತನ್ನಿಂದ 10,000 ರೂ. ಸಾಲ ಪಡೆದಿರುವುದಾಗಿ ದೂರಲ್ಲಿ ಉಲ್ಲೇಖಿಸಲಾಗಿದೆ.