ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಮಂಜೂರುಗೊಂಡಿರುವ ವಾಹನ ಅಪಫಾತ ನಷ್ಟಪರಿಹಾರ ಟ್ರಿಬ್ಯೂನಲ್ (ಎಂ.ಎ.ಸಿಟಿ.) ಮತ್ತು ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷ್ಯಲ್ ನ್ಯಾಯಾಲಯದ ಉದ್ಘಾಟನೆ ನ.2ರಂದು ನಡೆಯಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನ್ಯಾಯಾಗಳ ಉದ್ಘಾಟನೆ ನಡೆಸುವರು.
ಹೈಕೋರ್ಟ್ ನ್ಯಾಯಮೂರ್ತಿ ಎ.ಎಂಫೀಕ್ ಅಧ್ಯಕ್ಷತೆ ವಹಿಸುವರು. ಕಾನೂನು ಸಚಿವ ಎ.ಕೆ.ಬಾಲನ್, ಜಿಲ್ಲೆಯ ಉಸ್ತುವಾರಿ ಹೈಕೋರ್ಟ್ ನ್ಯಾಯಮೂರ್ತಿ ಅಮಿತ್ ರಾವಲ್ ಉಪಸ್ಥಿತರಿರುವರು.
ಸ್ವತಂತ್ರವಾಗಿ ಎಂ.ಎ.ಟಿ.ಸಿ. ಇಲ್ಲದ ರಾಜ್ಯ ಏಕೈಕ ಜಿಲ್ಲೆ ಕಾಸರಗೋಡು ಆಗಿತ್ತು. 2009 ರಿಂದ ಈ ನ್ಯಾಯಾಲಯ ಸ್ಥಾಪನೆಯ ಆದ್ಯತೆ ಪಟ್ಟಿಯಲ್ಲಿ ಕಾಸರಗೋಡು ಮೊದಲ ಸಾಲಿನಲ್ಲಿತ್ತು. ಆದರೂ ಕೆಲವು ಕಾರಣಗಳಿಂದ ವಿಳಂಬವಾಗುತ್ತಲೇ ಇತ್ತು. ಕಾಸರಗೋಡು ಬಾರ್ ಅಸೊಸಿಯೇಶನ್ ಹೈಕೋರ್ಟ್ ನಲ್ಲಿ ಫೈಲ್ ನಡೆಸಿರುವ ರಿಟ್ ಅರ್ಜಿಯ ತೀರ್ಪು ಪ್ರಕಾರ ಜಿಲ್ಲೆಯಲ್ಲಿ ಎಂ.ಎ.ಸಿಟಿ. ಸ್ಥಾಪಿಸಲಾಗುತ್ತಿದೆ. ಅಡೀಷನಲ್ ಜಿಲ್ಲಾ ನ್ಯಾಯಮೂರ್ತಿ (ಒಂದು) ಆರ್.ಎಲ್.ಬೈಜು ಅವರಿಗೆ ತಾತ್ಕಾಲಿಕವಾಗಿ ಇಲ್ಲಿನ ನ್ಯಾಯಮೂರ್ತಿಯ ಹೊಣೆ ನೀಡಲಾಗಿದೆ. ಜಿಲ್ಲಾ ನ್ಯಾಯಮೂರ್ತಿಗಳ ಪ್ರಮೋಷನ್ ನಡೆಯುವ ವೇಳೆಯೇ ಶಾಶ್ವತ ನ್ಯಾಯಮೂರ್ತಿಯ ನೇಮಕಾತಿಯೂ ನಡೆಯಲಿದೆ.
ರಾಜ್ಯದಲ್ಲಿ ಮಂಜೂರುಮಾಡಿರುವ 28 ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯಗಳಲ್ಲಿ ಒಂದು ಹೊಸದುರ್ಗದಲ್ಲಿ ಆರಂಭಿಸಲಾಗುವ ವಿಶ್ವ ನ್ಯಾಯಾಲಯವಾಗಿದೆ. ಪೆÇೀಕ್ಸೋ ಕೇಸುಗಳ ಸಹಿತ ಸೆಷನ್ಸ್ ಕೇಸುಗಳು ಈ ನ್ಯಾಯಾಲಯ ನಿರ್ವಹಿಸಲಿದೆ. ಸದ್ರಿ ಕಾಸರಗೋಡಿನಲ್ಲಿ ಚಟುವಟಿಕೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಹೊರತಾಗಿ ಹೊಸದುರ್ಗದಲ್ಲಿ ವಿಶೇಷ ನ್ಯಾಯಾಲಯ ಆರಂಭಿಸಲಾಗುತ್ತಿದೆ. ಅಡೀಷನಲ್ ಜಿಲ್ಲಾ ನ್ಯಾಯಮೂರ್ತಿ (ಎರಡು) ರಾಜನ್ ತಟ್ಟಿಲ್ ಅವರಿಗೆ ಹೊಸದುರ್ಗ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಯ ಹೊಣೆ ನೀಡಲಾಗಿದೆ. ಜಿಲ್ಲಾ ಸೆಷನ್ಸ್ ನ್ಯಾಯಮೂರ್ತಿ ಎಸ್.ಎಚ್. ಪಂಚಾಪಕೇಶನ್ ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಕೋವಿಡ್ ಮುಗ್ಗಟ್ಟಿನ ಅವಧಿಯಲ್ಲೂ ನೂತನ ನ್ಯಾಯಾಲಯಗಳು ಅನುಷ್ಠಾನಗೊಳ್ಳುತ್ತಿವೆ.
ಕಾಸರಗೋಡು ನ್ಯಾಯಾಲಯ ಸಮುಚ್ಚಯ ಸಬಾಂಗಣದಲ್ಲಿ ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಮೂರ್ತಿ ಎಸ್.ಎಚ್.ಪಂಚಾಪಕೇಶನ್, ಅಡೀಷನಲ್ ಜಿಲ್ಲಾ ನ್ಯಾಯನೂರ್ತಿಗಳಾದ ಟಿ.ಕೆ.ನಿರ್ಮಲಾ, ರಾಜನ್ ತಟ್ಟಿಲ್, ಡಿ.ಎಲ್.ಎಸ್.ಎ. ಕಾರ್ಯದರ್ಶಿ ಷುಹೈಬ್, ಕಾಸರಗೋಡು ಬಾರ್ ಅಸೋಸಿಯೇಶನ್ ಅಧ್ಯಕ್ಷ ಅಧ್ಯಕ್ಷ ಎ.ಸಿ.ಅಶೋಕ್ ಕುಮಾರ್, ಕಾರ್ಯದರ್ಶಿ ಕೆ.ಕರುಣಾಕರನ್ ನಂಬ್ಯಾರ್ ಉಪಸ್ಥಿತರಿದ್ದರು.