ದುಬೈ: ಐಪಿಎಲ್ 13ನೇ ಆವೃತ್ತಿಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತ್ತು. ಪಂಜಾಬ್ ನೀಡಿದ 179 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ 14 ಎಸೆತ ಬಾಕಿ ಇರುವಂತೆ ವಿಕೆಟ್ ನಷ್ಟವಿಲ್ಲ 181 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಪಂಜಾಬ್ ಪರ ಬ್ಯಾಟಿಂಗ್ ನಲ್ಲಿ ಲೋಕೇಶ್ ರಾಹುಲ್ 63, ಮಾಯಾಂಕ ಅಗರವಾಲ್ 26, ಮನ್ದೀಪ್ ಸಿಂಗ್ 27 ಮತ್ತು ನಿಕೋಲಸ್ ಪೂರನ್ 33 ರನ್ ಬಾರಿಸಿದ್ದಾರೆ.
ಚೆನ್ನೈ ಪರ ಶೇನ್ ವಾಟ್ಸನ್ ಅಜೇಯ 84 ಮತ್ತು ಫಾಫ್ ಡುಪ್ಲೇಸಿಸ್ ಅಜೇಯ 91 ರನ್ ಸಿಡಿಸಿದ್ದಾರೆ.