ಡೇಟಿಂಗ್ ಆಪ್ ಗಳಲ್ಲಿ ಜೋಡಿ ಸಿಗದೇ ಬೇಸತ್ತ ವ್ಯಕ್ತಿಯೋರ್ವ ಕೊನೆಗೆ ತನ್ನನ್ನು ತಾನೇ ಫೇಸ್ ಬುಕ್ ನಲ್ಲಿ ಮಾರಾಟಕ್ಕೆ ಇಟ್ಟುಕೊಂಡ ವಿಚಿತ್ರ ಘಟನೆ ನಡೆದಿದೆ.
ತನಗೆ ಗರ್ಲ್ ಫ್ರೆಂಡ್ ಹುಡುಕಿಕೊಳ್ಳಲು ಅಲನ್ ಕ್ಲೇಟನ್ (30) ವರ್ಷದ ವ್ಯಕ್ತಿ ಫೇಸ್ ಬುಕ್ ನಲ್ಲಿ ತನ್ನನ್ನೇ ಮಾರಾಟಕ್ಕೆ ಇಟ್ಟಿದ್ದಾನೆ.
ಒಂದು ದಶಕದಿಂದ ಏಕಾಂಗಿಯಾಗಿರುವ ಅಲನ್ ಕ್ಲೇಟನ್, ಫೇಸ್ ಬುಕ್ ನಲ್ಲಿ ತನ್ನನ್ನು ಅತ್ಯಂತ ಒಳ್ಳೆಯ ಸ್ಥಿತಿಯಲ್ಲಿರುವ ವ್ಯಕ್ತಿಯೆಂದು ಹೇಳಿಕೊಂಡಿದ್ದಾನೆ. ಅಚ್ಚರಿಯೆಂಬಂತೆ ಈ ವ್ಯಕ್ತಿಯ ಪ್ರಸ್ತಾವನೆಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು ಇನ್ ಬಾಕ್ಸ್ ನಲ್ಲಿ ಮೆಸೇಜ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿವೆ
ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಈತನ ಪ್ರೊಫೈಲ್ ಫೋಟೋ ವೈರಲ್ ಆಗತೊಡಗಿದೆ. ಈ ವರೆಗೂ ತಾನು ಒಂದು ಬಾರಿ ಮಾತ್ರ ಡೇಟಿಂಗ್ ಗೆ ಹೋಗಿದ್ದಾಗಿ ಹಾಗೂ ಅದು ಸರಿ ಹೋಗಲಿಲ್ಲ ಎಂಬುದಾಗಿ ಹೇಳಿದ್ದಾನೆ. ತನಗೆ ಶೀಘ್ರವೇ ತನ್ನನ್ನು ಪ್ರೀತಿಸುವ ಜೋಡಿ ದೊರೆಯಲಿದೆ ಎಂದೂ ಅಲನ್ ಕ್ಲೇಟನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.