ನವದೆಹಲಿ: ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವ ಖಾಸಗಿ ವ್ಯಾಪಾರಿಗಳು ಈಗಾಗಲೇ 7,000 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದ್ದಾರೆ ಮತ್ತು ದೀಪಾವಳಿಗೆ ಮುನ್ನ ಇನ್ನೂ 25,000 ಟನ್ ಈರುಳ್ಳಿ ದೇಶೀ ಮಾರುಕಟ್ಟೆಗೆ ಆಗಮಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಕೋ ಆಪರೇಟಿವ್ ನಾಫೆಡ್ ಸಹ ಈರುಳ್ಳಿ ಆಮದು ಪ್ರಾರಂಭಿಸಲಿದೆ ಎಂದ ಗೋಯಲ್ , ಪ್ರಮುಖ ಸರಕುಗಳ ಸ್ಥಳೀಯ ಪೂರೈಕೆ ಮತ್ತು ಬೆಲೆ ನಿಯಂತ್ರಣಕ್ಕಾಗಿ ಲು ಭೂತಾನ್‍ನಿಂದ 30,000 ಟನ್ ಆಲೂಗಡ್ಡೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
"ಚಿಲ್ಲರೆ ಈರುಳ್ಳಿ ಬೆಲೆ ಕಳೆದ ಮೂರು ದಿನಗಳಲ್ಲಿ ಪ್ರತಿ ಕೆ.ಜಿ.ಗೆ 65 ರೂ. ನಲ್ಲಿ ಸ್ಥಿರವಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ. ರಫ್ತುಗಳನ್ನು ಸಕಾಲಿಕವಾಗಿ ನಿಷೇಧಿಸಲಾಗಿದೆ ಮತ್ತು ಆಮದು ಮಾಡಿಕೊಳ್ಳಲು ಕ್ರಮ ಕೈಗೊಂಡಿದೆ" ಎಂದು ಗೋಯಲ್ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಡಿಸೆಂಬರ್ ವರೆಗೆ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರವು ನಿಯಮಗಳನ್ನು ಸಡಿಲಿಕೆ ಮಾಡಿದೆ.ಈವರೆಗೆ 7,000 ಟನ್ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಂಡಿದ್ದಾರೆ."ದೀಪಾವಳಿಯ ಮೊದಲು ಇನ್ನೂ 25 ಸಾವಿರ ಟನ್ ಈರುಳ್ಳಿ ಬರುವ ನಿರೀಕ್ಷೆಯಿದೆ" ಎಂದು ಅವರು ಹೇಳಿದರು ಮತ್ತು ಆಮದುಗಳ ಜೊತೆಗೆ ಮುಂದಿನ ತಿಂಗಳಿನಿಂದ ಮಂಡಿಗಳಲ್ಲಿ ಹೊಸ ಖಾರಿಫ್ ಬೆಳೆ ಆಗಮನವು ಪೂರೈಕೆ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಬೆಲೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಈಜಿಪ್ಟ್, ಅಫ್ಘಾನಿಸ್ತಾನ ಮತ್ತು ಟರ್ಕಿಯಂತಹ ದೇಶಗಳಿಂದ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಹೇಳಿದರು. "ನಾಫೆಡ್ ಸಹ ತನ್ನದೇ ಆದ ಸಾಮಥ್ರ್ಯದ ಮೇಲೆ ಆಮದು ಮಾಡಿಕೊಳ್ಳುತ್ತದೆ. ಈರುಳ್ಳಿ ಆಮದು ಮತ್ತು ಈರುಳ್ಳಿ ಬೀಜಗಳ ರಫ್ತು ನಿಷೇಧಿಸಲು ಸರ್ಕಾರವು ಮಾನದಂಡಗಳನ್ನು ಸಡಿಲಗೊಳಿಸಿದೆ" ಎಂದು ಅವರು ಹೇಳಿದರು.
ಅಕ್ರಮ ದಾಸ್ತಾನು ಹಾಗೂ ಕಳ್ಳ ವ್ಯಾಪಾರ ತಡೆಯಲು ವ್ಯಾಪಾರಿಗಳಿಗೆ ಸಂಗ್ರಹದ ಮೇಲೆ ಮಿತಿ ವಿಧಿಸಲಾಗಿದೆ.ಸರ್ಕಾರದ ಪರವಾಗಿ ಈರುಳ್ಳಿ ಬಫರ್ ಸ್ಟಾಕ್ ಅನ್ನು ಹೊಂದಿರುವ ನಾಫೆಡ್ ಮುಕ್ತ ಮಾರುಕಟ್ಟೆಯಲ್ಲಿ ಸ್ಟಾಕ್ ಅನ್ನು ಲೋಡ್ ಮಾಡುತ್ತಿದೆ. ಇಲ್ಲಿಯವರೆಗೆ, ನಾಫೆಡ್ 36,488 ಟನ್ ಗಳಷ್ಟು ಈರುಳ್ಳಿಯನ್ನು ವಿತರಿಸಿದೆ.
ಆಲೂಗಡ್ಡೆ ವಿಚಾರದಲ್ಲಿ ಕಳೆದ ಮೂರು ದಿನಗಳಿಂದ ಅಖಿಲ ಭಾರತದ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು 42 ರೂ ಇದ್ದು ಆಲೂಗಡ್ಡೆ ಆಮದು ಮಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ. ಮುಂದಿನ ಒಂದೆರಡು ದಿನಗಳಲ್ಲಿ ಭೂತಾನ್‍ನಿಂದ ಸುಮಾರು 30,000 ಟನ್ ಆಲೂಗಡ್ಡೆ ಬರುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. "ನಾವು ಸುಮಾರು 10 ಲಕ್ಷ ಟನ್ ಆಲೂಗಡ್ಡೆಯನ್ನು ಆಮದು ಮಾಡಿಕೊಳ್ಳುತ್ತೇವೆ ಮತ್ತು ಬೆಲೆಗಳನ್ನು ನಿಯಂತ್ರಣಕ್ಕೆ ತರಲಿದ್ದೇವೆ" ಎಂದು ಅವರು ಹೇಳಿದರು.