HEALTH TIPS

ಕಾಸರಗೋಡು : 366 ಮಂದಿಗೆ ಸೋಂಕು ದೃಢ

       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 366 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 468 ಮಂದಿ ಗುಣಮುಖರಾಗಿದ್ದಾರೆ. 363 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಇತರ ರಾಜ್ಯದಿಂದ ಬಂದ ಇಬ್ಬರಿಗೆ ಹಾಗು ವಿದೇಶದಿಂದ ಬಂದ ಒಬ್ಬರಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. 

     ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 13926 ಮಂದಿಗೆ ರೋಗ ಬಾಧಿಸಿದ್ದು, 9857 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 126 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 3943 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

     ರೋಗ ಬಾ|ಧಿತರು : ಅಜಾನೂರು-31, ಬದಿಯಡ್ಕ-1, ಬಳಾಲ್-6, ಬೇಡಡ್ಕ-16, ಚೆಮ್ನಾಡ್-21, ಚೆಂಗಳ-21, ಚೆರ್ವತ್ತೂರು-12, ಈಸ್ ಎಳೇರಿ-1, ಎಣ್ಮಕಜೆ-3, ಕಳ್ಳಾರ್-2, ಕಾಂಞಂಗಾಡ್-57, ಕಾರಡ್ಕ-3, ಕಾಸರಗೋಡು-21, ಕಯ್ಯೂರು-1, ಕಿನಾನೂರು-1, ಕೋಡೋಂ ಬೇಳೂರು-6, ಕುಂಬ್ಡಾಜೆ-1, ಕುಂಬಳೆ-5, ಕುತ್ತಿಕ್ಕೋಲ್-2, ಮಧೂರು-12, ಮಡಿಕೈ-14, ಮಂಗಲ್ಪಾಡಿ-9, ಮಂಜೇಶ್ವರ-2, ಮೊಗ್ರಾಲ್‍ಪುತ್ತೂರು-9, ಮುಳಿಯಾರು-3, ನೀಲೇಶ್ವರ-21, ಪಳ್ಳಿಕೆರೆ-8, ಪಡನ್ನ-16, ಪನತ್ತಡಿ-5, ಪಿಲಿಕೋಡು-4, ಪುಲ್ಲೂರು-11, ಪುತ್ತಿಗೆ-1, ತೃಕ್ಕರಿಪುರ-10, ಉದುಮ-6, ವಲಿಯಪರಂಬ-19, ವರ್ಕಾಡಿ-1, ವೆಸ್ಟ್ ಎಳೇರಿ-3, ಇತರ ಜಿಲ್ಲೆ-1 ಎಂಬಂತೆ ರೋಗ ಬಾಧಿಸಿದೆ.

      ಜಿಲ್ಲೆಯಲ್ಲಿ 5294 ಜನರು ನಿರೀಕ್ಷಣೆಯಲ್ಲಿ:

   ಜಿಲ್ಲೆಯಲ್ಲಿ ಒಟ್ಟು ಕ್ವಾರಂಟೈನ್ ನಲ್ಲಿ  5294 ಮಂದಿ ಇದ್ದಾರೆ.  ಇದರಲ್ಲಿ ಮನೆಗಳಲ್ಲಿ 3702 ಮತ್ತು ವಿವಿಧ ಆರೈಕೆ ಕೇಂದ್ರಗಲ್ಲಿ 1592 ಮಂದಿ ಇದ್ದಾರೆ. 236 ಹೊಸ ಜನರನ್ನು ಕ್ವಾರಂಟೈನ್ ಗೆ ಸೇರಿಸಲಾಗಿದೆ.  ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 3273 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 411 ಜನರ ಪರೀಕ್ಷಾ ಫಲಿತಾಂಶಗಳನ್ನು  ಪಡೆಯಲು ಬಾಕಿಯಿದೆ. 300 ಜನರು ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 236 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. 110 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.

       ಕೋವಿಡ್ ಇದುವರೆಗೆ ಜಿಲ್ಲೆಯ 13,926 ಜನರಲ್ಲಿ ದೃಢಪಡಿಸಲಾಗಿದೆ.  ಈ ಪೈಕಿ 807 ಮಂದಿ ವಿದೇಶದಿಂದ ಬಂದವರು, 612 ಮಂದಿ ಇತರ ರಾಜ್ಯಗಳಿಂದ ಬಂದವರು. 12506 ಮಂದಿ ಸಂಪರ್ಕದ ಮೂಲಕ ಸೋಂಕು ಬಾಧಿಸಿದವರಾಗಿದ್ದಾರೆ.  ಇಲ್ಲಿಯವರೆಗೆ 9857 ಜನರು ಕೋವಿಡ್ ಋಣಾತ್ಮಕವಾಗಿದ್ದಾರೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 126 ಕ್ಕೆ ಏರಿದೆ. ಪ್ರಸ್ತುತ, 3943 ಜನರು ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಪೈಕಿ 2462 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries