ಶ್ರೀನಗರ: ಎಲ್‌ಎಸಿಯಲ್ಲಿನ ಉದ್ವಿಗ್ನತೆಯ ಸ್ಥಿತಿ ಏನೇ ಇದ್ದರೂ ಜಮ್ಮುಕಾಶ್ಮೀರದಲ್ಲಿನ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಚೀನಾ ಎಂದಿಗೂ ಬೆಂಬಲಿಸಿರಲಿಲ್ಲ. ಹಾಗಾಗಿ ಈ ವಿಧಿಯನ್ನು(370ನೇ ವಿಧಿ) ಚೀನಾದ ಸಹಾಯದಿಂದ ಪುನಃಸ್ಥಾಪಿಸಬಹುದು ಎಂದು ನಾನು ಭಾವಿಸಿದ್ದೇನೆ ಎಂದೆನ್ನುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ವಿವಾದಿತ ಹೇಳಿಕೆ ನೀಡಿದ್ದಾರೆ.
ಸುದ್ದಿ ವಾಹಿನಿ ಇಂಡಿಯಾ ಟುಡೆ ಜೊತೆಗಿನ ಸಂದರ್ಶನದಲ್ಲಿ ಫಾರೂಕ್ ಅಬ್ದುಲ್ಲಾಈ ಮೇಲಿನ ಹೇಳಿಕೆ ನೀಡಿದ್ದಾರೆ.
"ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಯಾವುದೇ ಉದ್ವಿಗ್ನ ಪರಿಸ್ಥಿತಿ ಏನಿದೆಯೋ ಇದಕ್ಕೆಲ್ಲಾ 370ನೇ ವಿಧಿ ರದ್ದತಿಯೇ ಕಾರಣ . ಚೀನಾ ಈ ನಿರ್ಧಾರವನ್ನು ಎಂದಿಗೂ ಸಮ್ಮತಿಸಿರಲಿಲ್ಲ ಚೀನಾದ ಸಹಾಯದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಪುನಃಸ್ಥಾಪಿಸಲಾಗುವುದು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
5 ಆಗಸ್ಟ್ 2019 ರಂದು 370ನೇ ವಿಧಿ ತೆಗೆದುಹಾಕಲು ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಒಪ್ಪಲಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
'ಪ್ರಧಾನಿ ಮೋದಿ ಅವರು ಚೀನಾದ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ ಹೊರತು ನಾನೆಂದೂ ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಕರೆದಿಲ್ಲ" ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ ವ್ಯಕ್ತಿ ಪಿಎಂ ನರೇಂದ್ರ ಮೋದಿ. ಅವರು ಚೀನಾದ ಅಧ್ಯಕ್ಷರನ್ನುರತ್ನಗಂಬಳಿ ಹಾಕಿ ಸ್ವಾಗತಿಸಿದ್ದರು. ಅವರೊಂಡನೆ ಚೆನ್ನೈ ಸುತ್ತಿದ್ದರು. ಆದರೆ ನಾನೊಬ್ಬ ಸಂಸದರಾಗಿದ್ದರೂ . ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳ ಕುರಿತು ಮಾತನಾಡಲು ನನಗೆ ಅವಕಾಶ ನೀಡಿಲ್ಲವೆಂದು ಅವರು ಆರೋಪಿಸಿದ್ದಾರೆ.
370 ನೇ ವಿಧಿ ರದ್ದಾದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ಉನ್ನತ ರಾಜಕಾರಣಿಗಳೆಲ್ಲರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಮತ್ತು ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿದಂತೆ ಎಲ್ಲ ರಾಜಕಾರಣಿಗಳನ್ನು 370 ನೇ ವಿಧಿ ರದ್ದಾದ ನಂತರ ಬಂಧನದಲ್ಲಿಡಲಾಗಿತ್ತು ಫಾರೂಕ್ ಅಬ್ದುಲ್ಲಾ ಪ್ರಸ್ತುತ ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಕೇಂದ್ರ ಸರ್ಕಾರದಲ್ಲಿ ಸಹ ಬಹುಕಾಲ ಸೇವೆ ಸಲ್ಲಿಸಿದ್ದರು.
ಪೂರ್ವ ಲಡಾಕ್‌ನ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಇರುವ ಸಮಯದಲ್ಲಿ ಫಾರೂಕ್ ಅವರ ವಿವಾದಾತ್ಮಕ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.