ಕಾಸರಗೋಡು: ಕಳೆದ ವರ್ಷ ಜೂ.5 ರಂದು ಕಂದಾಯ ಸಚಿವ ಇ ಚಂದ್ರಶೇಖರನ್ ಅವರು ಮಡಿಕ್ಕೈ ಗ್ರಾಮ ಪಂಚಾಯತ್ ನ ಕಾಂಜಿರಪಾರ ಶಾಲೆಯಲ್ಲಿ ಹಸಿರು ಚಿಗುರಿನ ಕಾಸರಗೋಡು ಯೋಜನೆಯನ್ನು ಉದ್ಘಾಟಿಸಿದಂದಿನಿಂದ ಈವರೆಗೆ ಜಿಲ್ಲೆಯ 38 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 251 ಹಸಿರುಮನೆಗಳನ್ನು ರಚಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯ ಸಹಾಯದಿಂದ, ಹಸಿರ ವನಗಳನ್ನು ಸ್ಥಳೀಯ ಪಂಚಾಯತಿಗಳ ನೆರವಿಂದ ಉತ್ಪಾದಿಸಲಾಗುತ್ತದೆ. ಕುಟುಂಬಶ್ರೀ ಸದಸ್ಯೆಯರು, ಸ್ವಯಂಸೇವಕರು, ದೇವಾಲಯ ಸಮಿತಿಗಳು, ಚರ್ಚ್ ಸಮಿತಿಗಳು, ಗ್ರಂಥಾಲಯಗಳು, ಶಾಲೆಗಳು, ಪಿಟಿಎ / ಎಸ್‍ಎಸ್‍ಜಿಗಳು ಮತ್ತು ಹರಿತ ಕೇರಳ ಮಿಷನ್‍ನ ಸಹಕಾರವನ್ನು ಗ್ರಾ.ಪಂ.ಗಳಿಗೆ ಒದಗಿಸಲಾಗಿದೆ. ಜಿಲ್ಲೆಯಲ್ಲಿ ನೀಲೇಶ್ವರಂ ಬ್ಲಾಕ್‍ನಲ್ಲಿ 91, ಕಾಞಂಗಾಡ್ ಬ್ಲಾಕ್‍ನಲ್ಲಿ 67, ಪರಪ್ಪ ಬ್ಲಾಕ್‍ನಲ್ಲಿ 37, ಕಾಸರಗೋಡ್ ಬ್ಲಾಕ್‍ನಲ್ಲಿ 11, ಕಾರಡ್ಕ ಬ್ಲಾಕ್‍ನಲ್ಲಿ 7, ಮಂಜೇಶ್ವರ ಬ್ಲಾಕ್‍ನಲ್ಲಿ 16, ಪುರಸಭೆಗಳಲ್ಲಿ 22 ಹೀಗೆ 97.5 ಎಕರೆಗಳಲ್ಲಿ 251 ಹಸಿರು ಮನೆಗಳಿವೆ.
ಕಾರಡ್ಕ ಬ್ಲಾಕ್‍ನ ನಾಲ್ಕು ಪಂಚಾಯಿತಿಗಳು ಹಸಿರು ಯೋಜನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೇಡಡ್ಕ ಪಂಚಾಯತ್ ಉಪಾಧ್ಯಕ್ಷೆ ಕೆ ರಮಣಿ ಅಧ್ಯಕ್ಷತೆಯಲ್ಲಿ ಹರಿತ ಕೇರಳ ಮಿಷನ್ ಸಂಪನ್ಮೂಲ ವ್ಯಕ್ತಿ ಪಿ.ಕೆ. ಲೋಹಿದಾಕ್ಷನ್ ಅವರು ಹರಿತ ಕೇರಳ ಮಿಷನ್ ಪರವಾಗಿ ಪ್ರಶಸ್ತಿ ಪ್ರದಾನ ಮಾಡಿದರು. ಪಂಚಾಯತ್ ಅಧ್ಯಕ್ಷ ಸಿ ರಾಮಚಂದ್ರನ್ ಅವರು ಪ್ರಶಂಸಾ ಪತ್ರ ಸ್ವೀಕರಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ಎಂಜಿನಿಯರ್ ಎಸ್.ವಿ.ಗೋಪನ್ ವರದಿ ಮಂಡಿಸಿದರು. ಸಹಾಯಕ ಕಾರ್ಯದರ್ಶಿ ನಿಸಾರ್ ಕೆ.ಪಿ ಮತ್ತು ಎಂ ಧನ್ಯಾ ಮಾತನಾಡಿದರು. ಎ.ಜಿ.ಎನ್.ಆರ್.ಇ.ಜಿ.ಎಸ್ ನಿರ್ಮಿಸುತ್ತಿರುವ ಜೀವವೈವಿಧ್ಯ ಉದ್ಯಾನವನದಲ್ಲಿ ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಕೆ.ಗೋಪಾಲನ್ ಅವರು ಬೀಂಬಂಗಲ್ ಆಯುರ್ವೇದ ಚಿಕಿತ್ಸಾಲಯದ ಮುಂದೆ ಒಂದು ಸಸಿ ನೆಟ್ಟರು.
ಮುಳಿಯಾರ್ ಪಂಚಾಯತ್ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಅರಣ್ಯ ಅಧಿಕಾರಿ ಯಶೋದ ಮುಳಿಯಾರ್ ಅವರು ಗ್ರಾಮ ಪಂಚಾಯಿತಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಹಸಿರುಮನೆ ಪ್ರತಿಜ್ಞೆಯನ್ನು ಬೋಧಿಸಿದರು. ಉದ್ಯೋಗ ಖಾತರಿ ಎಂಜಿನಿಯರ್ ಶಿಜಿತ್ ವರದಿಯನ್ನು ಮಂಡಿಸಿದರು. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು, ವಾರ್ಡ್ ಸದಸ್ಯರು ಮತ್ತು ಸಹಾಯಕ ಕಾರ್ಯದರ್ಶಿ ಉಷಾ ಕುಮಾರಿ ಮಾತನಾಡಿದರು. ಸಿಇಒ ಅರುಣ್ ಕುಮಾರ್ ಸ್ವಾಗತಿಸಿ, ಹೆಡ್ ಕ್ಲರ್ಕ್ ಮನೋಜ್ ಕುಮಾರ್ ವಂದಿಸಿದರು.
ಹರಿತ ಕೇರಳ ಮಿಷನ್ ಜಾರಿಗೆ ತಂದಿರುವ ರಾಜ್ಯಮಟ್ಟದ ಹಸಿರು ಘೋಷಣೆಯಲ್ಲಿ ಕುಟ್ಟಿಕೋಲ್ ಗ್ರಾಮ ಪಂಚಾಯತ್ ಪಾಲ್ಗೊಂಡಿದೆ. ಕುಟ್ಟಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಿಸ್ಸಿ ಪಿಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಮೇಲ್ವಿಚಾರಕ ಅಂಜಲಿ ವರದಿಯನ್ನು ಮಂಡಿಸಿ ಮಾತನಾಡಿದರು. ಗ್ರಂಥಾಲಯ ಕೌನ್ಸಿಲ್ ನ ಎ. ಕರುಣಾಕರನ್ ಅವರು ಪಂಚಾಯತ್ ಅಧ್ಯಕ್ಷರಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಕಾರ್ಯದರ್ಶಿ ಕೆ.ಎಂ.ಮಜೀಬ್ ರಹಮಾನ್ ಮಾತನಾಡಿದರು.
ಕಾರಡ್ಕ ಗ್ರಾಮ ಪಂಚಾಯತ್ ಮತ್ತು ಹರಿತ ಕೇರಳ ಮಿಷನ್ ಸಹಾಯದಿಂದ ಪಂಚಾಯತ್ ಉಪಾಧ್ಯಕ್ಷ ವಿನೋದನ್ ನಂಬಿಯಾರ್ ಅವರು ಹಸಿರುಮನೆ ಯೋಜನೆಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ದೇವಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜನನಿ ಮಾತನಾಡಿದರು. ಪಂಚಾಯತ್ ಸದಸ್ಯರು ಮತ್ತು ಕುಟುಂಬಶ್ರೀ ಅಧ್ಯಕ್ಷರು ಉಪಸ್ಥಿತರಿದ್ದರು. ಎಂಜಿಎನ್‍ಆರ್‍ಜಿಎ ಎಂಜಿನಿಯರ್ ಅಚಲಾ ವರದಿ ಮಂಡಿಸಿದರು. ಕಾರ್ಯದರ್ಶಿ ಕೆ ಗೋಪಾಲನ್ ಸ್ವಾಗತಿಸಿ ಸಹಾಯಕ ಕಾರ್ಯದರ್ಶಿ ಬೇಬಿ ವಂದಿಸಿದರು.