HEALTH TIPS

ಎಡ ಸರ್ಕಾರವು ನನಗೆ ನೀಡಿದ ಮೊದಲ ಜೈಲು ಜೀವನ-ರಾಷ್ಟ್ರ ಸೇವೆಗೆ ಸಮರ್ಪಿಸಲು ಕಾರಣವಾಯಿತು!- 40 ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ವಿ. ಮುರಲೀಧರನ್ ನೆನಪಿಸಿದ್ದ ಹೀಗೆ!

 

         ತಿರುವನಂತಪುರ: ರಾಜಕೀಯ ದ್ವೇಷಕ್ಕಾಗಿ ಎಡಪಂಥೀಯ ಸರ್ಕಾರವು 40 ವರ್ಷಗಳ ಹಿಂದೆ ಅಕ್ಟೋಬರ್‍ನಲ್ಲಿ ನೀಡಿದ ಮೊದಲ ಜೈಲು ಜೀವನವನ್ನು ಕೇಂದ್ರ ಸಚಿವ ವಿ. ಮುರಲೀಧರನ್ ನೆನಪಿಸಿಕೊಂಡಿದ್ದಾರೆ. ಬಳಿಕ ಅಂದಿನ ಎಡ ಸರ್ಕಾರವು ಹೆಣೆದ ಸುಳ್ಳಿನ ಕಟ್ಟುಕತೆಯ ವ್ಯಾಜ್ಯವೆಂದು ಮನಗಂಡು ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತ್ತು. ಕಮ್ಯುನಿಸ್ಟ್ ಸರ್ಕಾರದ ಸುಳ್ಳಿನಿಂದಾಗಿ ಅಂದು ಸರ್ಕಾರಿ ಉದ್ಯೋಗಿಯಾಗಿದ್ದ ತನ್ನನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಪೂರ್ಣಾವಧಿಯಾಗಿ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತನಾಗಲು ಉದ್ಯೋಗಕ್ಕೇ ರಾಜೀನಾಮೆ ನೀಡಿದೆ ಎಂದು ವಿ.ಮುರಳೀಧರನ್ ತಮ್ಮ ಫೇಸ್‍ಬುಕ್ ನಲ್ಲಿ ಬರೆದಿದ್ದಾರೆ.

         ರಾಜಕೀಯ ದ್ವೇಷಕ್ಕಾಗಿ ಎಡ ಸರ್ಕಾರವು ನನಗೆ ನೀಡಿದ ಮೊದಲ ಜೈಲು ಜೀವನ ಅಕ್ಟೋಬರ್ ತಿಂಗಳಾಗಿದ್ದು 40 ವರ್ಷಗಳ ಹಿಂದಿನ ಘಟನೆಯದು. ಕಮ್ಯುನಿಸ್ಟರ ಆಜ್ಞೆಯ ಮೇರೆಗೆ ಆರ್.ಎಸ್.ಎಸ್. ಕಾರ್ಯಕರ್ತರನ್ನು ಸುಳ್ಳು ಆರೋಪದ ಮೇಲೆ ಬಲೆಗೆ ಬೀಳಿಸುವ ಹುನ್ನಾರದ ಬಲಿಪಶುವಾಗಿ ಜೈಲಿನಲ್ಲಿದ್ದ ನೆನಪುಗಳನ್ನು ರಿಫ್ರೆಶ್ ಮಾಡಲು ಒಂದು ಕಾರಣವಿತ್ತು. 

    ಕೆ.ಜಿ.ಮಾರಾರ್ ಅವರ ಜೈಲು ಅನುಭವವನ್ನು ಉಲ್ಲೇಖಿಸಿ ಸ್ನೇಹಿತರೊಬ್ಬರು ಕೆ.ಜಿ.ಮಾರಾರ್ ಅವರ ಜೀವನಚರಿತ್ರೆ 'ಓಷನ್ ಆಫ್ ಲವ್ ಇನ್ ಪಾಲಿಟಿಕ್ಸ್' ಪುಸ್ತಕವನ್ನು ನನಗೆ ಕಳುಹಿಸಿದ್ದು ಹಳೆಯ ನೆನಪು ಮರುಕಳಿಸಲು ಕಾರಣವೆಂದೂ ಮುರಳೀಧರನ್ ತಿಳಿಸಿದಾರೆ. 

            ಅದನ್ನು ಓದಿದಾಗ ಅವರು ಎಬಿವಿಪಿ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದಾಗ ನಡೆದ ಘಟನೆಯ ಬಗ್ಗೆ ಟಿಪ್ಪಣಿ ಬರೆಯಲು ಯೋಚಿಸಿದೆನು. ಆ ದಿನ ನನ್ನ ವಿರುದ್ಧದ ಸುಳ್ಳು ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಲಾಯಿತು. ಮಾರಾರ್ಜಿಯವರ ಜೀವನ ಚರಿತ್ರೆಯನ್ನು ಬರೆದ ಕೆ.ಕುಂಜಿಕಣ್ಣನ್ ಅವರು ಈ ಬಗ್ಗೆ ಸಮಗ್ರವಾಗಿ ಉಲ್ಲೇಖಿಸಿದ್ದು  ರಾಷ್ಟ್ರೀಯ ಏಕೀಕರಣ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಅಂದು ದೆಹಲಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಇ.ಕೆ.ನಾಯನಾರ್ ಅವರು ಕೇರಳ ಭವನದಲ್ಲಿ ಎಬಿವಿಪಿ ಕಾರ್ಯಕರ್ತರು ಘೆರಾವ್ ಮಾಡಿದ್ದರು. ಈ ಸಂದರ್ಭ ಏನೇನಾಯಿತೆಂದು ಆ ಪುಸ್ತಕದಲ್ಲಿ ವಿಶ್ಲೇಶಿಸಲಾಗಿದೆ ಎಂದು ಮುರಳೀಧರನ್ ಬರೆದುಕೊಂಡಿದ್ದಾರೆ. 

         ಸರ್ಕಾರವು ಕಟ್ಟುಕತೆಯಂತೆ ತನ್ನನ್ನು ನಿಯಂತ್ರಿಸಲು ರೂಪಿಸಿದ ಪೊಳ್ಳು ವಾದಗಳು ನಂತರ ನ್ಯಾಯಾಲಯವು  ಖುಲಾಸೆಗೊಳಿಸಿತು. ಕಮ್ಯುನಿಸ್ಟ್ ಸರ್ಕಾರದ ಸುಳ್ಳು ಆರೋಪಗಳಿಂದ ಸರ್ಕಾರಿ ಸೇವೆಯಿಂದ ತನ್ನನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ನಾನು  ರಾಜೀನಾಮೆ ನೀಡಿ ಪೂರ್ಣಾವಧಿಯಾಗಿ ವಿದ್ಯಾರ್ಥಿ ಪರಿಷತ್ ಗೆ ಸೇರಿಕೊಂಡೆ. ಎರಡು ತಿಂಗಳ ಜೈಲುವಾಸವೇ ನನ್ನನ್ನು ಆ ನಿರ್ಧಾರ ತಳೆಯಲು ಕಾರಣವಾಯಿತು ಎಂದು ನಾನು ಭಾವಿಸುತ್ತೇನೆ ಎಂದು ಮುರಳೀಧರನ್ ವಿವರಿಸಿದ್ದಾರೆ.

         ಹಿಂತಿರುಗಿ ನೋಡಿದಾಗ, ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ದೇಶ ಮತ್ತು ಜನರಿಗೆ ದ್ರೋಹ ಮಾಡಿದವರ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬುವುದಕ್ಕೆ ತಾನು ಸಮರ್ಪಿಸಿಕೊಳ್ಳಲು ಅವರ ದೆಸೆಯಿಂದುಂಟಾದ ಜೈಲುವಾಸ ಕಾರಣವಾಯಿತು.  ಸುಳ್ಳು ಪ್ರಕರಣಗಳು ಮತ್ತು ಸುಳ್ಳು ಕಥೆಗಳು ಕಮ್ಯುನಿಸ್ಟ್ ಪಕ್ಷದ ಮುಖಗಳಾಗಿವೆ. ಅವರು ತಮ್ಮ ನಲ್ವತ್ತು ವರ್ಷಗಳ ಜೈಲು ಅನುಭವದ ಸ್ಮರಣೆಯನ್ನು ನವೀಕರಿಸಿದ್ದಾರೆ. ಆದರೆ ಅದು ಇಂದಿಗೂ ಮುಂದುವರೆದಿದೆ ಎಂದು ಮುರಳೀಧರನ್ ಮಾರ್ಮಿಕವಾಗಿ ಬರೆದಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries