HEALTH TIPS

ಕೇರಳದಲ್ಲಿ ಇಂದು 4287 ಮಂದಿಗೆ ಕೋವಿಡ್ ಸೋಂಕು-7101 ಮಂದಿ ಗುಣಮುಖ-ಕಾಸರಗೋಡು:64 ಮಂದಿಗೆ ಸೋಂಕು!

  

         ತಿರುವನಂತಪುರ: ನಿರಂತರ ಆತಂಕದ ಮಧ್ಯೆ ಕೇರಳದಲ್ಲಿ ಸೋಮವಾರ 4287 ಜನರಿಗೆ ಕೋವಿಡ್ ಖಚಿತವಾಗಿದೆ. 

                ಕೋವಿಡ್ ಪ್ರಕರಣಗಳು ಜಿಲ್ಲಾವಾರು:


    ಇಂದು  ಕೋವಿಡ್ 4287 ಪ್ರಕರಣಗಳನ್ನು ದೃಢಪಟ್ಟಿದ್ದರೆ ಹೆಚ್ಚಿನ ಪ್ರಕರಣಗಳು ಮಲಪ್ಪುರಂ ಜಿಲ್ಲೆಯಲ್ಲಿವೆ. ಮಲಪ್ಪುರಂ 853, ತಿರುವನಂತಪುರ 513, ಕೋಝಿಕ್ಕೋಡ್  497, ತ್ರಿಶೂರ್ 480, ಎರ್ನಾಕುಳಂ 457, ಆಲಪ್ಪುಳ 332, ಕೊಲ್ಲಂ 316, ಪಾಲಕ್ಕಾಡ್ 276, ಕೊಟ್ಟಾಯಂ 194, ಕಣ್ಣೂರು 174, ಇಡಕ್ಕಿ 79, ಕಾಸರಗೋಡು  64, ವಯನಾಡ್ 28 ಎಂಬಂತೆ ಸೋಂಕು ದೃಢಪಟ್ಟಿದೆ. ನವರಾತ್ರಿ ಹಾಗೂ ಭಾನುವಾರದ ರಜೆಯ ಹಿನ್ನೆಲೆಯಲ್ಲಿ ನಿನ್ನೆ ಹೆಚ್ಚಿನ ಪರಿಶೋಧನೆಗಳು ನಡೆಯದಿರುವುದರಿಂದ ಇಷ್ಟೊಂದು ಕಡಿಮೆ ಸಂಖ್ಯೆಯ ವರದಿ ಬಂದಿದೆಯೆಂದು ತಿಳಿಯಲಾಗಿದೆ. 

      ಗುಣಮುಖರಾದವರ  ವಿವರಗಳು:

   ಸೋಂಕಿಂದ ಚಿಕಿತ್ಸೆಯಲ್ಲಿದ್ದ 7107 ಜನರು ಕೋವಿಡ್ ಮುಕ್ತರಾಗಿರುವರು.  ತಿರುವನಂತಪುರಂ 747, ಕೊಲ್ಲಂ 722, ಪತ್ತನಂತಿಟ್ಟು 180, ಆಲಪ್ಪುಳ 497, ಕೊಟ್ಟಾಯಂ 191, ಇಡಕ್ಕಿ 66, ಎರ್ನಾಕುಳಂ 1096, ತ್ರಿಶೂರ್ 723, ಪಾಲಕ್ಕಾಡ್ 454, ಮಲಪ್ಪುರಂ 1002, ಕೋಝಿಕ್ಕೋಡ್  1023, ವಯನಾಡ್ 107, ಕಣ್ಣೂರ್ 97, ಕಾಸರಗೋಡು 202 ಎಂಬಂತೆ ಸೋಂಕಿಂದ ಗುಣಮುಖರಾಗಿದ್ದಾರೆ. 

      20 ಕೋವಿಡ್ ಮೃತ್ಯು: 

     ಇಂದು, ಇನ್ನೂ 20 ಕೋವಿಡ್ ಸಾವುಗಳನ್ನು ಸರ್ಕಾರ ದೃಢಪಡಿಸಿದೆ. ಆಲಪ್ಪುಳ ಅರಟ್ಟುಪುಳದ ಪ್ರಶಾಂತ್ ಕುಮಾರ್ (55), ಚೇರ್ತಲಾದ ಆಂಥೋನಿ ಡ್ಯಾನಿಶ್ (37), ಕೋಟ್ಟಯಂ ಅರ್ಪೂಕ್ಕರಾದ ವಿದ್ಯಾಧರನ್ (75), ಎರ್ನಾಕುಳಂ ಪೋರ್ಟ್ ಕೊಚ್ಚಿಯ ಸಿದ್ದೀಕ್ (62), ತೃಶೂರ್ ಕೋಟ್ಟಕ್ಕಾಡ್ ನ ರೋಸಿ (84), ಎಡತ್ತುಕ್ಕರಸಿಯ ವೇಲಾಯುಧನ್ (80), ಚೆವ್ವೂರ್ ನ  ಮೇರಿ (62),  ಪಾಲಕ್ಕಾಡ್ ಚಿಟ್ಟೂರಿನ ಚಂದ್ರಶೇಖರನ್ (53), ಮಲಪ್ಪುರಂ ಪುದಿಯ ಕಡಪ್ಪುರಂ ನ  ಅಬ್ದುಲ್ಲ ಕುಟ್ಟಿ (85), ಕೋಝಿಕ್ಕೋಡ್ ಪನಂಗಾಡ್ ನ ಕಾತ್ರ್ಯಾಯಿನಿ ಅಮ್ಮ(89), ವಯನಾಡ್ ತವಿಂತಾಲ್ ನ ಮರಿಯಂ(85), ಎಳತ್ತಿಯ ಹಂಸ(62), ಅಂಬಲವಯಲ್ ನ ಮತ್ತಾಯಿ(71), ಮಾನಂದವಾಡಿಯ ಅಬ್ದುಲ್ ರಹಮಾನ್ (89), ತೊಡುವಟ್ಟಿಯ ಏಲಿಯಮ್ಮ (78), ಕಣ್ಣೂರು ತಳಿಪರಂಬದ  ಹಂಸ (75),  ಇರಿವೇರಿಯ ಮಮ್ಮುಹಾಜಿ (90), ಚೋವಾದ ಜಯರಾಜನ್ (62) ಕಾಸರಗೋಡು ವಡಮ್‍ತಟ್ಟದ ಚೋಮು (63), ತಳಂಗರೆಯ ಮೊಹಮ್ಮದ್ ಕುಂಞÂ(72) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. 

       ಇಂದು ಕೋವಿಡ್ 4287 ಪ್ರಕರಣಗಳನ್ನು ದೃಢಪಡಿಸಿದ್ದರೆ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7107 ಜನರು ಚೇತರಿಸಿಕೊಂಡಿದ್ದಾರೆ. ನಗಾದಲ್ಲಿ ಪ್ರಸ್ತುತ 93,744 ಜನರಿದ್ದಾರೆ. ಸಂಪರ್ಕದಿಂದಾಗಿ 3711 ಜನರಿಗೆ ಸೋಂಕು ತಗಲಿತು. ಮೂಲ ತಿಳಿದಿಲ್ಲದ 471 ಪ್ರಕರಣಗಳಿವೆ. ರೋಗ ಪತ್ತೆಯಾದವರಲ್ಲಿ 53 ಮಂದಿ ಆರೋಗ್ಯ ಕಾರ್ಯಕರ್ತರೂ ಒಳಗೊಂಡಿದ್ದಾರೆ. 

                          ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಾಧಿತರ ಸಂಖ್ಯೆಯಲ್ಲಿ ಇಳಿಮುಖ : ಸೋಮವಾರ 64 ಮಂದಿಗೆ ಕೋವಿಡ್ ಪಾಸಿಟಿವ್ 

        ಕಾಸರಗೋಡು: ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಾಧಿತರ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಕಂಡುಬಂದಿದೆ. ಸೋಮವಾರ 64 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 60 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇತರ ರಾಜ್ಯಗಳಿಂದ ಬಂದ ಒಬ್ಬರಿಗೆ, ವಿದೇಶಗಳಿಂದ ಆಗಮಿಸಿದ ಮೂವರಿಗೆ ರೋಗ ಖಚಿತಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

       ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ: 

    ಕಾಸರಗೋಡು ನಗರಸಭೆ 4, ಮಧೂರು ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 3, ಕುಂಬಳೆ ಪಂಚಾಯತ್ 2, ಕಾರಡ್ಕ ಪಂಚಾಯತ್ 1, ಚೆಂಗಳ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 3, ಕಾಞಂಗಾಡ್ ನಗರಸಭೆ 7, ಅಜಾನೂರು ಪಂಚಾಯತ್ 6, ಪಳ್ಳಿಕ್ಕರೆ ಪಂಚಾಯತ್ 2, ಪಡನ್ನ ಪಂಚಾಯತ್ 1, ನೀಲೇಶ್ವರ ನಗರಸಭೆ 7, ಪುಲ್ಲೂರು-=ಪೆರಿಯ ಪಂಚಾಯತ್ 6, ವೆಸ್ಟ್ ಏಳೇರಿ ಪಂಚಾಯತ್ 3, ಕಿನಾನೂರು-ಕರಿಂದಳಂ ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 2, ಚೆರುವತ್ತೂರು ಪಂಚಾಯತ್ 6 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.  

              ನೆಗೆಟಿವ್ ವಿವರಗಳು:

  ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 202 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 

       ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ

     ಕಾಸರಗೋಡು ನಗರಸಭೆ 7, ಮಧೂರು ಪಂಚಾಯತ್ 11, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 9, ಕುತ್ತಿಕೋಲು ಪಂಚಾಯತ್ 3, ಕುಂಬಳೆ ಪಂಚಾಯತ್ 15, ಕಾರಡ್ಕ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 1, ದೇಲಂಪಾಡಿ ಪಂಚಾಯತ್ 8, ಚೆಂಗಳ ಪಂಚಾಯತ್ 9, ಚೆಮ್ನಾಡ್ ಪಂಚಾಯತ್ 14, ಬೇಡಡ್ಕ ಪಂಚಾಯತ್ 5, ಬದಿಯಡ್ಕ ಪಂಚಾಯತ್ 11, ಮುಳಿಯಾರು ಪಂಚಾಯತ್ 4,  ಕಾಞಂಗಾಡ್ ಪಂಚಾಯತ್ 12, ಉದುಮಾ ಪಂಚಾಯತ್ 12, ಪಿಲಿಕೋಡ್ ಪಂಚಾಯತ್ 4, ಪಳ್ಳಿಕ್ಕರೆ 14, ಅಜಾನೂರು ಪಂಚಾಯತ್ 10, ಬಳಾಲ್ ಪಂಚಾಯತ್ 5, ನೀಲೇಶ್ವರ ನಗರಸಭೆ 8, ಕಿನಾನೂರು-ಕರಿಂದಲಂ ಪಂಚಾಯತ್ 3, ಕೋಡೋಂ-ಬೇಳೂರು ಪಂಚಾಯತ್ 5, ವೆಸ್ಟ್ ಏಳೇರಿ ಪಂಚಾಯತ್ 2, ವಲಿಯಪರಂಬ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 3, ಪುಲ್ಲೂರು-ಪೆರಿಯ ಪಂಚಾಯತ್ 7, ಪನತ್ತಡಿ ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.     

            4940 ಮಂದಿ ನಿಗಾದಲ್ಲಿ: 

        ಕಾಸರಗೋಡು ಜಿಲ್ಲೆಯಲ್ಲಿ 4980 ಮಂದಿ ನಿಗಾದಲ್ಲಿರುವರು. ಮನೆಗಳಲ್ಲಿ 4227 ಮಂದಿ, ಸಾಮಸ್ಥಿಕವಾಗಿ 753 ಮಂದಿ ನಿಗಾದಲ್ಲಿದ್ದಾರೆ. ನೂತನವಾಗಿ 301 ಮಂದಿ ನಿಗಾ ಪ್ರವೇಶಿಸಿದ್ದಾರೆ. 291 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 187 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 224 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.      

                   ಒಟ್ಟು ಗಣನೆ 

     ಕಾಸರಗೋಡು ಜಿಲ್ಲೆಯಲ್ಲಿ 17896 ಮಂದಿಗೆ ಈ ವರೆಗೆ ಒಟ್ಟು ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 16219 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 956 ಮಂದಿ ವಿದೇಶಗಳಿಂದ, 721 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 15673 ಮಂದಿಗೆ ಈ ವರೆಗೆ ಒಟ್ಟು ಕೋವಿಡ್ ನೆಗೆಟಿವ್ ಆಗಿದೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 174 ಆಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries