HEALTH TIPS

ನಿಮಗೆ ಗೊತ್ತೇ- ವಿದ್ಯುತ್ ತಂತಿಗಳ ಬಳಿ ಕಬ್ಬಿಣದ ವಸ್ತುಗಳ ಬಳಸುವಿಕೆಯಿಂದ ಈ ವರ್ಷ ಇಲ್ಲಿಯವರೆಗೆ 46 ಜನರು ದುರ್ಮರಣಕ್ಕೊಳಗಾಗಿರುವರು! ಅಜಾಗರೂಕತೆಯ ಕ್ಷಣ ಕಳೆದುಹೋಗುವವು ನಮ್ಮ ಜೀವನ!

 

           ತಿರುವನಂತಪುರ: ವಿದ್ಯುತ್ ಆಘಾತದಿಂದ ಜೀವಹಾನಿಗೊಳಗಾಗುವ ಸುದ್ದಿ ಪ್ರತಿನಿತ್ಯ ಮಾಧ್ಯಮಗಳಲ್ಲಿ ಕಂಡುಬರುತ್ತದೆ. ಈ ಅನೇಕ ಅಪಘಾತಗಳು ಸಾವಿಗೆ ಕಾರಣವಾಗುತ್ತವೆ.

       ಈ ವರ್ಷ ಇಲ್ಲಿಯವರೆಗೆ, ವಿದ್ಯುತ್ ತಂತಿಗಳ ಬಳಿ ಲೋಹದ ವಸ್ತುಗಳನ್ನು ಬಳಸಿ ಮಾವಿನ ಹಣ್ಣು ಸಹಿತ ಇತರ ವಸ್ತುಗಳನ್ನು ಕೊಯ್ಯಲು ಪ್ರಯತ್ನಿಸುತ್ತಿದ್ದ 46 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದರೆ ನೀವು ಆಶ್ಚರ್ಯಕ್ಕೀಡಾಗದೆ ಇರಲಾರಿರಿ. ಎರಡು ದಿನಗಳ ಹಿಂದೆ ಇಂತಹದೊಂದು ಅವಘಡ ಕೇರಳದಲ್ಲಿ ನಡೆದಿರುವುದು ನೀವು ಮರೆತಿರಬಹುದು!

    ತಿರುವನಂತಪುರ ಆರ್ಯನಾಡ್ ಎಂಬಲ್ಲಿ ಗುರುವಾರ ತಂಗರಾಜನ್ ಅವರ ಪತ್ನಿ ಶಾಂತಿ (58) ಏನನ್ನೋ ಕೊಯ್ಯಲು ಯತ್ನಿಸುತ್ತಿದ್ದಾಗ ವಿದ್ಯುತ್ ತಂತಿಗೆ ಅವರ ಕೈಯಲ್ಲಿದ್ದ ಲೋಹದ ಕೊಕ್ಕೆ ಸ್ಪರ್ಶಿಸಿ ಮೃತಪಟ್ಟಿದ್ದರು. ಮನೆಯ ಸಮೀಪವಿರುವ 230 ವೋಲ್ಟ್ ವಿದ್ಯುತ್ ತಂತಿ ಸ್ಪರ್ಶಿಸಿ ಅವರು ಆಘಾತಕ್ಕೊಳಗಾಗಿದ್ದಾರೆ. ಶಾಂತಿ ಅವರನ್ನು ರಕ್ಷಿಸಲು ಧಾವಿಸಿದ ಅವರ ಪುತ್ರ ಮುರುಗನ್ ಕೂಡ ಆಘಾತಕ್ಕೊಳಗಾಗಿದ್ದಾರೆ.

      ಮಲಪ್ಪುರಂ ಎಡಪ್ಪಲ್‍ನಲ್ಲಿ ತೆಂಗಿನಕಾಯಿ ಕೊಯ್ಯಲು ಕಬ್ಬಿಣದ ಕೊಕ್ಕೆ ಬಳಸುತ್ತಿದ್ದಾಗ ವಿದ್ಯುತ್ ತಂತ್ರಿಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದ. ಪುತುಸ್ಸೇರಿಯ ಪ್ರಜೀಶ್ (41) ಕೆಲವು ದಿನಗಳ ಹಿಂದೆ ಬಿಯಾಮ್ ಸೇತುವೆ ಬಳಿ ಶಾಕ್ ಗೆ ತುತ್ತಾಗಿ ಮೃತಪಟ್ಟನು. 

        ಇಂದು ನಮ್ಮ ದೈನಂದಿನ ಜೀವನದಲ್ಲಿ ವಿದ್ಯುತ್ ಇಲ್ಲದೆ ಬದುಕುವುದು ಅಸಾಧ್ಯ. ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ವಿದ್ಯುತ್ ಆಘಾತದಿಂದಾಗಿ ಅನೇಕ ಜೀವಗಳು ಕಳೆದುಹೋಗಿವೆ. ನಮ್ಮದೇ ನಿರ್ಲಕ್ಷ್ಯದಿಂದ ಅನೇಕ ಅಪಘಾತಗಳು ಸಂಭವಿಸುತ್ತವೆ.

         ವಿದ್ಯುತ್ ತಂತಿಗಳ ಬಳಿ ಲೋಹದ ಯಾವುದೇ ವಸ್ತು ಬಳಸಬೇಡಿ:

    ಆಘಾತಕಾರಿ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆ.ಎಸ್.ಇ.ಬಿ ತಿರುವನಂತಪುರ ಎಲೆಕ್ಟ್ರಿಕಲ್ ಸರ್ಕಲ್ ಉಪ ಮುಖ್ಯ ಎಂಜಿನಿಯರ್ ವಿದ್ಯುತ್ ತಂತಿಗಳ ಬಳಿ ಲೋಹದ ವಸ್ತು-ಪರಿಕರಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯಾಗಿ ಅನೇಕ ಜೀವಗಳು ಕಳೆದುಹೋಗಿವೆ ಎಂದು ಕೆಎಸ್‍ಇಬಿ ಗಮನಸೆಳೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries